ತೋಟಗಾರಿಕೆ ಬೆಳೆಯಿಂದ ಉತ್ತಮ ಆದಾಯ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Jul 02 2024, 01:31 AM IST

ತೋಟಗಾರಿಕೆ ಬೆಳೆಯಿಂದ ಉತ್ತಮ ಆದಾಯ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಹೆಚ್ಚು ಇಳುವರಿ ಪಡೆಯುವ ದೃಷ್ಟಿಯಿಂದ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಪರಿಣಾಮ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ಬಂಜರು ಸ್ಥಿತಿ ತಲುಪುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಭೂಮಿ ರಕ್ಷಣೆ ಜೊತೆಗೆ ಮನುಷ್ಯರ ಆರೋಗ್ಯವನ್ನು ವೃದ್ಧಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಾವಯವ ಕೃಷಿ ಮೂಲಕ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯದ ಜತೆಗೆ ಭೂಮಿ ರಕ್ಷಣೆಯೂ ಆಗಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ತೋಟಗಾರಿಕೆಯಲ್ಲಿ ಸಮಗ್ರ ಬೇಸಾಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ರೈತರು ಹೆಚ್ಚು ಇಳುವರಿ ಪಡೆಯುವ ದೃಷ್ಟಿಯಿಂದ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಪರಿಣಾಮ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ಬಂಜರು ಸ್ಥಿತಿ ತಲುಪುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಭೂಮಿ ರಕ್ಷಣೆ ಜೊತೆಗೆ ಮನುಷ್ಯರ ಆರೋಗ್ಯವನ್ನು ವೃದ್ಧಿಸಬೇಕೆಂದು ತಿಳಿಸಿದರು.

ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ನಿಮ್ಮ ಮನೆ ಮುಂದಿಯೇ ಬಂದು ಸೊಪ್ಪು ತರಕಾರಿಗಳನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ತೋಟಗಾರಿಕೆಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ತೆಂಗು ಅಭಿವೃದ್ದಿ ಮಂಡಳಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಎಕರೆಗೆ 7 ಸಾವಿರ ಬೆಲೆಯ ಔಷಧಿ, ಗೊಬ್ಬರ, ಹಸಿರಲೆ ಬೀಜ ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಿದರು.

ತೋಟಗಾರಿಕೆ ಉಪ ನಿರ್ದೇಶಕಿ ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಾಂತರಾಜು, ಸಹಾಯಕ ತೋಟಗಾರಿಕೆ ಅಧಿಕಾರಿ ಕೆಂಪರಾಜು ಸೇರಿದಂತೆ ಇತರರು ಇದ್ದರು.ಪೌರ ನೌಕರರ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ

ಮಳವಳ್ಳಿ:ರಾಜ್ಯ ಪೌರ ನೌಕರರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪೌರ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ತಾಲೂಕು ಅಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷ-ನಾಗರಾಜು ಅಮಾಸೆ, ಗೌರವಾಧ್ಯಕ್ಷರಾಗಿ ಭೈರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಸ್.ಭೈರಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ರಾಮಚಂದ್ರ, ಸಂಘಟನಾ ಸಂಚಾಲಕರಾಗಿ ಚಂದ್ರು, ಸಹಾಯಕ ಕಾರ್ಯದರ್ಶಿಯಾಗಿ ಸರೋಜಮ್ಮ, ಖಜಾಂಚಿ-ಸಿ.ಪ್ರಕಾಶ್, ಸಂಘಟನಾ ಸಂಚಾಲಕಿ-ರೈಚಲ್ ಕುಮಾರಿ, ಜಿಲ್ಲಾ ಸಂಘದ ಜಂಟಿ ಕಾರ್ಯದರ್ಶಿಯಾಗಿ ಸಿ.ಪಿ.ಸಿದ್ದೇಗೌಡ, ಜಿಲ್ಲಾ ನಿರ್ದೇಶಕರಾಗಿ ಸಿ.ಕೆ.ಮಂಜುನಾಥ್, ಶೇಖರ್ ಕುಮಾರ್, ಕೆ.ಕವಿನಾಗರಾಜು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ತಾಲೂಕು ಘಟಕದ ನಿರ್ದೇಶಕರಾಗಿ ಎಂ.ಸುಧಾಮಣಿ, ಪಳ್ಳಮ್ಮ, ಸುಮಿತ್ರಾ, ವಿ.ಶ್ರೀನಿವಾಸ್, ರೇಣುಕಯ್ಯ, ಎಸ್.ನವೀನ ಕುಮಾರ್, ಚಂದ್ರಮ್ಮ, ಶಿವರಾಜು ಅವರು ಆಯ್ಕೆಯಾದರು.ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳಲ್ಲೂ ನೌಕರರ ಶ್ರಮದಿಂದಲೇ ಸರ್ಕಾರದ ಸಲವತ್ತುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿದೆ. ಸಂಘಟನಾತ್ಮಕವಾಗಿ ಸಂಘ ಕರ್ತವ್ಯ ನಿರ್ವಹಿಸಲಿ ಎಂದು ಆಶಿಸಿದರು. ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.