ಉರುಸ್ ಆಚರಣೆಯ ಸದುದ್ದೇಶ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ: ಎ.ಎಸ್. ಪೊನ್ನಣ್ಣ

| Published : Apr 16 2025, 12:30 AM IST

ಉರುಸ್ ಆಚರಣೆಯ ಸದುದ್ದೇಶ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ: ಎ.ಎಸ್. ಪೊನ್ನಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಉರುಸ್‌ ಸಮಾರಂಭವು ಧಾರ್ಮಿಕ ಮತ್ತು ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಆಚರಣೆಯಾಗಿದ್ದು ಈ ಭಾಗದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಾ ಬಂದಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಉರುಸ್ ಸಮಾರಂಭವು ಧಾರ್ಮಿಕ ಹಾಗೂ ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಆಚರಣೆಯಾಗಿದ್ದು, ಈ ಭಾಗದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತಾ ಬಂದಿದೆ. ಇಂದು ತನಗೆ ಈ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ತನಗೆ ಅತೀವ ಸಂತಸವನ್ನು ಉಂಟು ಮಾಡಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ನಾಪೋಕ್ಲು ಹೋಬಳಿಯ ಕಕ್ಕಬೆ ಗ್ರಾಮದಲ್ಲಿ ನಡೆದ ವೈಕೋಲ್ ಪುಳಿಜೋo ಉರೂಸ್ ಸಮಾರಂಭದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಉರುಸ್ ಆಚರಣೆಯ ಸದುದ್ದೇಶದ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ ಎಂದು ಇದೇ ಸಂದರ್ಭದಲ್ಲಿ ಶಾಸಕರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಮೊಯಿದು , ಸಂಪನ್ ಅಯ್ಯಪ್ಪ ಹಾಗೂ ಪ್ರಮುಖರಾದ ಸೌಕತ್ ಅಲಿ, ವಿ.ಎಂ.ಉಸ್ಮನ್ ಹಾಜಿ, ಬಾಚಮಂಡ ಲವ ಚಿಣ್ಣಪ್ಪ, ಅಹಮದ್ ಹಾಜಿ, ಉದಿಯಂಡ ಸುಭಾಷ್, ಮೋಹನ್, ಹುಸೇನ್, ಅಬ್ಬು, ಉದಿಯಂಡ ಮೋಹನ್ ಜಮಾಯತ್ ಆಡಳಿತ ಮಂಡಳಿ

ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.