ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಉತ್ತಮ ಅವಕಾಶ

| Published : Sep 11 2025, 12:03 AM IST

ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಉತ್ತಮ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಮಾತ್ರ ಉತ್ತಮ ಅವಕಾಶವಿರುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಹಿರಿಯ ವಿಜ್ಞಾನಿ ಹಾಗೂ ಮೈಸೂರು ರೇಷ್ಮೆ ವಿಭಾಗದ ಮುಖ್ಯಸ್ಥ ದಯಾನಂದ್ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಉತ್ತಮ ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಮಾತ್ರ ಉತ್ತಮ ಅವಕಾಶವಿರುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಹಿರಿಯ ವಿಜ್ಞಾನಿ ಹಾಗೂ ಮೈಸೂರು ರೇಷ್ಮೆ ವಿಭಾಗದ ಮುಖ್ಯಸ್ಥ ದಯಾನಂದ್ ತಿಳಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿ ರಾಮನಹಳ್ಳಿ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಭಾರತ ಸರ್ಕಾರ, ಜವಳಿ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ ಇವರ ಸಹಯೋಗದಲ್ಲಿ ನಡೆದ ರೇಷ್ಮೆ ಕೃಷಿ ಕಾರ್ಯಕ್ರಮ ಮತ್ತು ವಿಚಾರ ಸಂಕೀರ್ಣ ನನ್ನ ರೇಷ್ಮೆ ನನ್ನ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ರೇಷ್ಮೆ ಮಂಡಳಿಯು ದೇಶಾದ್ಯಂತ ಈ ಕಾರ್ಯಕ್ರಮ ಆಚರಿಸಲಾಗುತ್ತಿದ್ದು ರಾಜ್ಯದ 10 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ತುಮಕೂರು ಒಂದಾಗಿದೆ. ರೇಷ್ಮೆ ವಿಜ್ಞಾನಿಗಳೆ ರೈತರನ್ನು ಸಂಪರ್ಕ ಮಾಡುವ ವೇದಿಕೆಯಾಗಿದ್ದು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾ ರೈತರೊಂದಿಗೆ ಮಾತನಾಡಿ ರೈತರ ಸಮಸ್ಯೆಗಳನ್ನು ತಿಳಿದು ಅದನ್ನು ವಿಜ್ಞಾನಿಗಳು ಸಂಶೋಧನೆ ನಡೆಸಿ ಹೊಸ ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡಬೇಕು. ಆಗ ಮಾತ್ರ ಉತ್ತಮ ರೇಷ್ಮೆ ಕೃಷಿ ಮಾಡಲು ಸಾಧ್ಯ. ಎರಡು ಯೋಜನೆಗಳ ಸೇತುವೆಯಾಗಿ ರಾಜ್ಯ ಸರ್ಕಾರವಿದ್ದು ರೇಷ್ಮೆ ಕೃಷಿ ಉತ್ತಮಗೊಳಿಸುವುದು ಹಾಗೂ ರೇಷ್ಮೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಕುಡಿಯನ್ನ ಬೆಳೆಯುವುದೇ ಪ್ರಮುಖ ಉದ್ದೇಶ. ಇಡೀ ವಿಶ್ವದಲ್ಲೇ ಚೀನಾ ರೇಷ್ಮೆ ಕೃಷಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಎರಡನೇ ಸ್ಥಾನದಲ್ಲಿ ಭಾರತವಿದ್ದು ನಮಗೆ ಬೇಕಾದ ರೇಷ್ಮೆಯನ್ನು ನಾವೇ ತಯಾರಿಸಿಕೊಳ್ಳುವ ಮತ್ತು ಉತ್ಪಾದಿಸಿಕೊಳ್ಳಬೇಕು. ಯಾವ ರೀತಿ ರೇಷ್ಮೆ ಸಾಕಾಣಿಕೆ ಮಾಡಬೇಕು, ಉತ್ತಮ ಬೆಳೆ ಹೇಗೆ ಬೆಳೆಯಬೇಕು ಹಾಗೂ ಒಂದು ರೇಷ್ಮೆ ಗೂಡು 1.7 ಗ್ರಾಂ ಬರಬೇಕು. ಒಟ್ಟು 504,000 ಗೂಡು ಕಟ್ಟಬೇಕು ಆಗ 100ಕೆಜಿ ಉತ್ಪಾದನೆ ಮಾಡಲು ಅದಕ್ಕೆ ತಕ್ಕಂತೆ ರೇಷ್ಮೆ ಕೃಷಿ ಅಳವಡಿಸಿಕೊಳ್ಳಬೇಕು. ಚೈನಾ ದೇಶದವರು ಸುಮಾರು ದೇಶಗಳಿಗೆ ರಫ್ತು ಮಾಡುತ್ತಾರೆ. ಭಾರತವು ಸಹ ಹೊರ ದೇಶಗಳಿಗೆ ಹೆಚ್ಚು ರಫ್ತು ಮಾಡುವಂತೆ ಆಗಲು ಉತ್ಪಾದನೆ ಜಾಸ್ತಿಯಾಗಬೇಕು. ಗುಣಮಟ್ಟ ಜಾಸ್ತಿ ಆದರೆ ಹೊರ ದೇಶಗಳಿಗೆ ರಫ್ತು ಮಾಡುವ ಪ್ರಮಾಣವು ಹೆಚ್ಚಳವಾಗುವುದು ಎಂದರು. ರೇಷ್ಮೆ ಉಪನಿರ್ದೇಶಕ ಲಕ್ಷ್ಮಿನರಸಯ್ಯ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸುಧಾರಿತ ತಂತ್ರಜ್ಞಾನ ಹಾಗೂ ಉತ್ತಮ ವಿಧಾನಗಳನ್ನು ಅಳವಡಿಸುವುದು, ರೇಷ್ಮೆ ಕೃಷಿಯನ್ನು ಲಾಭದಾಯಕ ಹಾಗೂ ಶಾಶ್ವತವಾಗಿಸಲು, ರೈತರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ರೇಷ್ಮೆ ಕೃಷಿಕರ ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಮುಂಚೂಣಿ ಸಹಕಾರದ ಮೂಲಕ ರಾಜ್ಯ ಮಟ್ಟದ ವಿಸ್ತರಣಾ ಸಾಮರ್ಥ್ಯವನ್ನು ವೃದ್ಧಿಸುವುದು. ಕ್ಷೇತ್ರ ಮಟ್ಟದ ಸವಾಲುಗಳನ್ನು ಅಳೆಯುವ ಮೂಲಕ ಅಗತ್ಯ ಆಧಾರಿತ ಸಂಶೋಧನೆ ಕೈಗೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಎ.ಸಿ. ನಾಗೇಂದ್ರ, ರೇಷ್ಮೆ ವಿಸ್ತರಣಾಧಿಕಾರಿ ಟಿ. ಕೃಷ್ಣಮೂರ್ತಿ, ಹಿರಿಯ ರೇಷ್ಮೆ ಬೆಳೆಗಾರರಾದ ಗಂಗಣ್ಣ, ಚನ್ನಬಸವಯ್ಯ ಹಾಗೂ ರೇಷ್ಮೆ ಬೆಳೆಗರಾರ ರೈತರು ಭಾಗವಹಿಸಿದ್ದರು.