ಸಾರಾಂಶ
ಭಟ್ಕಳ: ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ ಯುನಿವರ್ಸಿಟಿ ಇನ್‌ಸ್ಟಿಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ “ಟೆಕ್ ಯುವ -೨೫” ಎನ್ನುವ ವಿಜ್ಞಾನ ಮಾದರಿಯ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಇಲ್ಲಿನ ಶ್ರೀಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಯುವರಾಜ್ ನಾಯ್ಕ, ಸಂದೀಪ ನಾಯ್ಕ, ತೇಜಸ್ ನಾಯ್ಕ ಹಾಗೂ ವಾಣಿಜ್ಯ ವಿಭಾಗದ ಅನನ್ಯಾ ನಾಯ್ಕ ಮತ್ತು ಮಹಿಮಾ ನಾಯ್ಕ ಕೃತಕ ಬುದ್ಧಮತ್ತೆ ಮತ್ತು ರೋಬೋಟಿಕ್ಸ್ ಮಾದರಿಯನ್ನು ಪ್ರದರ್ಶಿಸಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳು ಅಲ್ಟ್ರಾ ಸೊನಿಕ ಸೆನ್ಸರ್, ಸರ್ವೊ ಮೀಟರ್ ಮತ್ತು ಪೈಥಾನನಿಂದ ಪ್ರೊಗ್ರಾಮ ಮಾಡಿದ ಆರ್ಡಿ ಉನೋ ಬೋರ್ಡನ್ನು ಬಳಸಿ ತಯಾರಿಸಿದ ಸೋನಾರ್ ಸಿಸ್ಟಮ್ ಮಾಡೆಲ್ ಗೆ ಬಹುಮಾನ ಲಭಿಸಿದೆ.ಮೀನುಗಾರರು ಸಮುದ್ರದಲ್ಲಿ ಮೀನುಗಳನ್ನು ಗುರುತಿಸುವುದು, ನೀರಿನ ಆಳವನ್ನು ತಿಳಿಯುವುದು, ಬಂಡೆಗಳನ್ನು ಗುರುತಿಸುವುದು, ನೀರಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಉದ್ದೇಶಕ್ಕಾಗಿ ಈ ಸಾಧನ ಬಳಸುತ್ತಾರೆ.
ಈ ಸಾಧನದಿಂದ ಮಾಹಿತಿ ಕಲೆ ಹಾಕಿ ಜಾವಾ ಸ್ಕ್ರಿಪ್ಟ್ ಮೂಲಕ ಪ್ರೊಸೆಸ್ ಮಾಡಿ ಗ್ರಾಫ್ ರೂಪದಲ್ಲಿ ಲೈಟ್ ಮುಖಾಂತರ ಮತ್ತು ಬಝರ್ ಬಾರಿಸುವುದರ ಮೂಲಕ ಅಂತರ ಮತ್ತು ಕೋನವನ್ನು ತಿಳಿಸುವ ಸಾಧನದ ಮಾದರಿಯನ್ನು ಪ್ರದರ್ಶಿಸಿದರು.ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತರಬೇತುದಾರ ಸಂಕೇತ ನಾಯ್ಕ ಮಾರ್ಗದರ್ಶನ ನೀಡಿದ್ದರು.
ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಟ್ಕಳದ ಗುರು ವಿದ್ಯಾಧಿರಾಜ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರು.