ಅಂಕ ಹೆಚ್ಚು ಗಳಿಕೆಗೆ ಉತ್ತಮ ಅಭ್ಯಾಸ ಅತ್ಯಗತ್ಯ

| Published : Dec 10 2023, 01:30 AM IST

ಅಂಕ ಹೆಚ್ಚು ಗಳಿಕೆಗೆ ಉತ್ತಮ ಅಭ್ಯಾಸ ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸತತ ಓದು ಅಧ್ಯಯನ ಅತ್ಯಗತ್ಯ ಎಂದು ಪ್ರಾಚಾರ್ಯ ಎ. ಕೊಟ್ರಗೌಡ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಾಲಕ, ಪೋಷಕರ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸತತ ಓದು ಅಧ್ಯಯನ ಅತ್ಯಗತ್ಯ ಎಂದು ಪ್ರಾಚಾರ್ಯ ಎ. ಕೊಟ್ರಗೌಡ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಾಲಕ, ಪೋಷಕರ ಸಭೆಯಲ್ಲಿ ಮಾತನಾಡಿದರು.

ಶೈಕ್ಷಣಿಕ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಉಳಿದ ದಿನಗಳಲ್ಲಿ ಆಸಕ್ತಿಯಿಂದ ಅಭ್ಯಾಸ ಮಾಡಬೇಕೆಂದು ಹೇಳಿದರು.

ಬದಲಾದ ಪರೀಕ್ಷಾ ಪದ್ಧತಿ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಭೆಯನ್ನು ಪಾಲಕರ ಪರವಾಗಿ ದಾವಲ್ ಬೀ, ಸೋಮಣ್ಣ, ಭಾರತಿ ಬಿ ಉದ್ಘಾಟಿಸಿದರು. ನಂತರ ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕುಂದುಕೊರತೆಯನ್ನು ಪಾಲಕರೊಂದಿಗೆ ಚರ್ಚಿಸಲಾಯಿತು.

ಉಪನ್ಯಾಸಕ ಬಸೆಟ್ಟಿ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಮಹೇಂದ್ರ ಬಾರಿಕರ, ಸಾಬುದ್ದಿನ್ ಸಾಹೇಬ್, ಶಿವಕುಮಾರ, ಶ್ರೀಕಾಂತ್ ಬಂಡಿಹಾಳ್, ಆರತಿ, ಮಾಬುಸಾಬ್, ಶಂಕರ್, ಪರಶುರಾಮ ನಾಗೋಜಿ ಸಭೆಯಲ್ಲಿ ಹಾಜರಿದ್ದರು. ಉಪನ್ಯಾಸಕ ನಟರಾಜ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.