ಸಾರಾಂಶ
ಸವಣೂರು: ಕಾಂಗ್ರೆಸ್ ಸರ್ವರಿಗೂ ಪಂಚ ಗ್ಯಾರಂಟಿ ಭಾಗ್ಯ ನೀಡಿದರೆ, ಜೆಸಿಐ ಸಂಸ್ಥೆ ರಕ್ತದಾನ ಪ್ರೇರಣೆಯೊಂದಿಗೆ ನೇತ್ರ ಚಿಕಿತ್ಸೆ ಭಾಗ್ಯ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ತಿಳಿಸಿದರು.ಜೆಸಿಐ ಸಪ್ತಾಹದ ಅಂಗವಾಗಿ ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜೆಸಿಐ ನಮ್ಮ ಸವಣೂರು ವತಿಯಿಂದ ಏರ್ಪಡಿಸಿದ್ದ ತಾಲೂಕು ಆರೋಗ್ಯ ಇಲಾಖೆ ವೈದ್ಯರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ, ಜಿಲ್ಲಾ ರಕ್ತ ಕೇಂದ್ರ, ತಾಲೂಕು ರಕ್ತ ಶೇಖರಣಾ ಘಟಕದ ನೇತೃತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಹುಬ್ಬಳ್ಳಿ ಡಾ. ಅಗರವಾಲ್ಸ್ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನಿರಂತರವಾಗಿ ಸಾಮಾಜಿಕ ಕಾರ್ಯ ಕೈಗೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜೆಸಿಐ ನಮ್ಮ ಸವಣೂರು ಚಿರಪರಿಚಿತಗೊಳ್ಳುತ್ತಿರುವುದು ಸಂತಸ ತಂದಿದೆ. ಅಂತಾರಾಷ್ಟ್ರೀಯ ಸಂಸ್ಥೆಯೊಂದು ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿ ಉತ್ತಮ ಕಾರ್ಯಕ್ಕೆ ನಮ್ಮ ಸಹಕಾರದ ಬೆಂಬಲ ಇರುತ್ತದೆ ಎಂದರು. ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ಜೆಸಿ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಸಿ ಆನಂದ ಮತ್ತಿಗಟ್ಟಿ ನೇತೃತ್ವ ವಹಿಸಿದ್ದರು. ತಾಪಂ ಇಒ ಬಿ.ಎಸ್. ಶಿಡೇನೂರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಅಶೋಕ ಕಾಳಶೆಟ್ಟಿ, ಶಂಕ್ರಯ್ಯ ಹಿರೇಮಠ, ಗಣೇಶಗೌಡ ಪಾಟೀಲ, ಮಧುಕರ ಜಾಲಿಹಾಳ, ಅನ್ನಪೂರ್ಣಾ ಕುಂಬಾರ, ಪುಷ್ಪಾ ಬತ್ತಿ ಇತರರು ಪಾಲ್ಗೊಂಡಿದ್ದರು.
176 ಜನರು ಉಚಿತ ನೇತ್ರ ಚಿಕಿತ್ಸೆ ಶಿಬಿರದ ಸದುಪಯೋಗ ಪಡೆದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಪರಶುರಾಮ ಹೊಳಲ, ಹಿರಿಯ ಸದಸ್ಯ ಶ್ರೀಪಾದಗೌಡ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಅಶೋಕ ಕಳಲಕೊಂಡ ಸೇರಿದಂತೆ ಹತ್ತಾರು ಯುವಕರು ರಕ್ತದಾನ ಮಾಡಿದರು. ಜೆಸಿ ಹರೀಶ ಹಿರಳ್ಳಿ, ಸುನಂದಾ ಚಿನ್ನಾಪುರ ಹಾಗೂ ಮಾಂತೇಶ ಹೊಳೆಯಮ್ಮನವರ ಕಾರ್ಯಕ್ರಮ ನಿರ್ವಹಿಸಿದರು.