ಸಾರಾಂಶ
ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಬ್ಯಾಂಕಿಂಗ್ ಸಾಲವನ್ನು ಪಡೆದು ಸ್ವ ಉದ್ಯೋಗ ಪಡೆಯುವಂತಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಬ್ಯಾಂಕ್ ಆಫ್ ಬರೋಡದ ಉದ್ಯೋಗ ತರಬೇತಿ ಸಂಸ್ಥೆ ಕಾರ್ಯ ಚಟುವಟಿಕೆಗಳು ಉತ್ತಮವಾಗಿವೆ ಎಂದು ಬ್ಯಾಂಕ್ ಆಫ್ ಬರೋಡ ಕಾರ್ಯ ನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದರು.ನಗರದ ಆದರ್ಶ ಸ್ಕೂಲ್ ಬಳಿ ಬಳಿ ಇರುವ ಬ್ಯಾಂಕ್ ಆಫ್ ಬರೋಡದ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಗ್ರಾಮೀಣ ಯುವಜನರ ಬದುಕಿನ ಆಶಾಕಿರಣವಾಗಿ ಹಲವು ಯುವಜನರ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದೆ ಎಂದರು.ಸ್ವ ಉದ್ಯೋಗ ಮಾಡ ಬಯಸುವ ಯುವ ಜನರಿಗೆ ಉಚಿತ ಕೌಶಲ್ಯ ತರಬೇತಿ, ಜೊತೆಗೆ ಉದ್ಯಮಶೀಲತಾ ತರಬೇತಿ ನೀಡುತ್ತಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಕರೆ ನೀಡಿದರು.
ಬ್ಯಾಂಕ್ ಆಫ್ ಬರೋಡ ಮತ್ತೊರ್ವ ಕಾರ್ಯನಿರ್ವಾಹಕ ನಿರ್ದೇಶಕರಾದ ಬೀನಾ ವಹೀದ್ ಮಾತನಾಡಿ, ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಬ್ಯಾಂಕಿಂಗ್ ಸಾಲವನ್ನು ಪಡೆದು ಸ್ವ ಉದ್ಯೋಗ ಪಡೆಯುವಂತಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ವಲಯ ನಿರ್ದೇಶಕ ಇಂದರ್ ಮೋಹನ್ ಸಿಂಗ್, ರಾಷ್ಟ್ರೀಯ ಆರ್ ಸಿಟಿಗಳ ನಿರ್ದೇಶಕರಾದ ಮುರುಗೇಶನ್, ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ವ್ಯವಸ್ಥಾಪಕ ಡಾ.ನವೀನ್ ಕುಮಾರ್ , ಉಪ ಪ್ರಾದೇಶಿಕ ವ್ಯವಸ್ಥಾಪಕ ಸುಹಾಸ್ ಉಪಸ್ಥಿತರಿದ್ದರು. ಇದೇ ವೇಳೆ ಯಶಸ್ವಿ ಉದ್ಯಮದಾರರನ್ನು ಸನ್ಮಾನಿಸಲಾಯಿತು. ಸಂಚಿಕೆ ಬಿಡುಗಡೆಯನ್ನು ಮಾಡಲಾಯಿತು.