ಸಂತೆಯಲ್ಲಿ ವ್ಯಾಪಾರಕ್ಕಾಗಿ ತರಕಾರಿ, ದಿನಸಿ, ಹಣ್ಣು ಹಂಪಲು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಹೊತ್ತು ತಂದ ವಾಹನಗಳನ್ನು ಮಾರುಕಟ್ಟೆ ರಸ್ತೆಯ ಬಂಡಿಮಾಳದಲ್ಲಿ ನಿಲ್ಲಿಸಿದ್ದು , ಸುಮಾರು 12ಕ್ಕೂ ಹೆಚ್ಚು ವಾಹನಗಳ ಕಿಟಕಿ ಗಾಜುಗಳನ್ನು ಪುಡಿಗೊಳಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಂತೆಯಲ್ಲಿ ವ್ಯಾಪಾರಕ್ಕಾಗಿ ತರಕಾರಿ, ದಿನಸಿ, ಹಣ್ಣು ಹಂಪಲು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಹೊತ್ತು ತಂದ ವಾಹನಗಳನ್ನು ಮಾರುಕಟ್ಟೆ ರಸ್ತೆಯ ಬಂಡಿಮಾಳದಲ್ಲಿ ನಿಲ್ಲಿಸಿದ್ದು , ಸುಮಾರು 12ಕ್ಕೂ ಹೆಚ್ಚು ವಾಹನಗಳ ಕಿಟಕಿ ಗಾಜುಗಳನ್ನು ಪುಡಿಗೊಳಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಭಾನುವಾರ ಸಂತೆ ವ್ಯಾಪಾರಕ್ಕಾಗಿ ಸರಕು ಸಾಮಗ್ರಿಗಳನ್ನು ಹೊತ್ತು ತಂದಿದ್ದ ಮಹೇಂದ್ರ ಪಿಕಾಪ್, ಗೂಡ್ಸ್ ಆಟೋರಿಕ್ಷಾಗಳ ಹಾಗೂ ಗೂಡ್ಸ್ ಲಾರಿ ಸೇರಿದಂತೆ 12 ಕ್ಕೂ ಹೆಚ್ಚು ವಾಹನಗಳ ಕಿಟಕಿಗಾಜುಗಳನ್ನು ಕಿಡಿಗೇಡಿಗಳು ಪುಡಿಗೊಳಿಸಿದ್ದಾರೆ. ಸಂತೆ ವ್ಯಾಪಾರಸ್ಥರ ವಾಹನಗಳ ಗುರಿಯಾಗಿರಿಸಿಕೊಂಡ ಕಳ್ಳರು ವಾಹನದಲ್ಲಿ ನಗದು ಹಾಗೂ ಬೆಲೆ ಬಾಳುವ ವಸ್ತು ದೊರೆಯಬಹುದು ಎಂದು ತಡಕಾಡಿದ್ದಾರೆ. ಆದರೆ ವಾಹನಗಳಲ್ಲಿ ನಗದು, ಬೆಲೆ ಬಾಳುವ ವಸ್ತುಗಳು ದೊರೆತಿಲ್ಲ. ವಾಹನಗಳ ಮಾಲೀಕರಿಗೆ ಸಾವಿರಾರು ರು. ನಷ್ಟ ಸಂಭವಿಸಿದೆ.
ವಾಹನ ಮಾಲೀಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.