ಮೈಸೂರು ವಿಭಾಗಕ್ಕೆ ಮಟ್ಟಕ್ಕೆ ಗೊರಮಾರನಹಳ್ಳಿ ಮೊರಾರ್ಜಿ ವಿದ್ಯಾರ್ಥಿಗಳು

| Published : Oct 06 2024, 01:25 AM IST

ಮೈಸೂರು ವಿಭಾಗಕ್ಕೆ ಮಟ್ಟಕ್ಕೆ ಗೊರಮಾರನಹಳ್ಳಿ ಮೊರಾರ್ಜಿ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೊರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ೧೪ ಮತ್ತು ೧೭ ವಯೋಮಿತಿ ಒಳಗಿನ ಎರಡು ತಂಡಗಳು ಪ್ರಥಮ ಸ್ಥಾನಗಳಿಸಿವೆ. ಉತ್ತಮ ಸಾಧನೆ ಮಾಡಿರುವ ಶಾಲೆಯ ಕ್ರೀಡಾಪಟುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪಾ ಇತರರು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೊರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ೧೪ ಮತ್ತು ೧೭ ವಯೋಮಿತಿ ಒಳಗಿನ ಎರಡು ತಂಡಗಳು ಪ್ರಥಮ ಸ್ಥಾನಗಳಿಸಿವೆ,

ಅಂಡರ್ ೧೭ ಬಾಲಕರ ವಿಭಾಗದಲ್ಲಿ ಚಂದನ್ ಎಸ್ ಎಂ(ನಾಯಕ), ಪ್ರೇಕ್ಷಿತ್ ಸಿ ವಿ, ಸಂಜನ್ ಎನ್ ಕೆ, ನಿತಿನ್, ಚೇತನ್ ಡಿ ಎನ್, ರೋಹಿತ್ ಕೆ.ಕೆ, ಗಗನ್ ಎಂ. ಕೆ, ಸಾಗರ್‌, ನಂದನ್ ವಿ ವೈ, ಚಂದು ಕೆ ಎಸ್, ಗಗನ್, ಹೇಮಂತ್ ಗೌಡ.

೧೪ ಬಾಲಕರ ವಿಭಾಗದಲ್ಲಿ ಸೃಜನ್ ಗೌಡ ಎ ಎಸ್(ನಾಯಕ) ಧನುಷ್‌ ಎಂ ಡಿ, ಸುಜಿತ್ ಎಂ, ಸನತ್ ವಿ, ಜೀವನ್ ಕೆ ಎಂ, ಮನೋಜ್ ಎನ್ ಸಿ, ಕಿಶೋರ್ ಸಿ ಪಿ, ಜಯಂತ್ ಎಸ್ ಪಿ, ಮಂಜೇಗೌಡ ಎ ಸಿ, ತನುಷ್ ಗೌಡ, ಭಾಸ್ಕರ್ ಹೆಗಡೆ, ಸುಮನ್ ಪ್ರತಿನಿಧಿಸಿದರು. ಉತ್ತಮ ಸಾಧನೆ ಮಾಡಿರುವ ಶಾಲೆಯ ಕ್ರೀಡಾಪಟುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪಾ, ಪ್ರಾಂಶುಪಾಲರಾದ ಎಚ್ ಜಿ ಶೈಲಜಾ, ದೈಹಿಕ ಶಿಕ್ಷಣ ನಿರ್ದೇಶಕ ಎಚ್ ಎಂ ಚಂದ್ರೇಗೌಡ, ವ್ಯವಸ್ಥಾಪಕ ಡಿ ಶಂಕರ್, ತರಬೇತಿದಾರ ಯಲ್ಲಪ್ಪ ಎಸ್ ಮಾಂಗ್, ಗಣೇಶ್ ಹುದ್ಧರ್, ದೈಹಿಕ ಶಿಕ್ಷಣ ಅಧಿಕಾರಿ ಕೆ ಟಿ ಆನಂದ್ ಅಭಿನಂದಿಸಿದ್ದಾರೆ.