ರಾಮಲಲ್ಲಾ ಪ್ರತಿಷ್ಠೆ ಸವಿನೆನಪಿಗೆ ಗೋಶಾಲೆ: ನಾಗೇಶ್ ಆಂಗೀರಸ

| Published : Jan 23 2024, 01:50 AM IST

ರಾಮಲಲ್ಲಾ ಪ್ರತಿಷ್ಠೆ ಸವಿನೆನಪಿಗೆ ಗೋಶಾಲೆ: ನಾಗೇಶ್ ಆಂಗೀರಸ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೂರಾರು ವರ್ಷಗಳ ಕಾಲ ಸವಿನೆನಪಿನಲ್ಲಿರಬೇಕು ಎಂಬ ಉದ್ದೇಶದಿಂದ ಕಾಮಧೇನು ಗೋ ಸೇವಾ ಟ್ರಸ್ಟ್‌ನ ನೂತನ ಗೋಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಟ್ರಸ್ಟ್ ಮುಖ್ಯಸ್ಥ ನಾಗೇಶ್ ಆಂಗೀರಸ ತಿಳಿಸಿದರು.

ಭಾರತದ ಹಿರಿಮೆ ಹೆಚ್ಚಿಸಲು ರಾಮ ಮಂದಿರ ಕಾರಣ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೂರಾರು ವರ್ಷಗಳ ಕಾಲ ಸವಿನೆನಪಿನಲ್ಲಿರಬೇಕು ಎಂಬ ಉದ್ದೇಶದಿಂದ ಕಾಮಧೇನು ಗೋ ಸೇವಾ ಟ್ರಸ್ಟ್‌ನ ನೂತನ ಗೋಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಟ್ರಸ್ಟ್ ಮುಖ್ಯಸ್ಥ ನಾಗೇಶ್ ಆಂಗೀರಸ ತಿಳಿಸಿದರು.

ದೇವಗೋಡು ಗ್ರಾಮದ ಕೆಮ್ಮಣ್ಣು-ನೀರ್ಕಟ್ಟುವಿನಲ್ಲಿ ಸೋಮವಾರ ಕಾಮಧೇನು ಗೋ ಶಾಲೆ ನೂತನ ವಿಸ್ತೃತ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ, ಮಾತನಾಡಿ, ಪ್ರಪಂಚದಲ್ಲಿ ಭಾರತದ ಹಿರಿಮೆ ಮತ್ತಷ್ಟು ಹೆಚ್ಚಿಸಲು ಕಾರಣವಾಗಿರುವುದು ಈ ರಾಮಮಂದಿರ ನಿರ್ಮಾಣ. ಭಾರತದ ಪರಂಪರೆ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಗೋವು ಇಲ್ಲದ ಭಾರತ ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾವು ದೇಶಿ ಗೋವುಗಳು ಮತ್ತು ಹಿಂದೂ ಧರ್ಮದ ತಳ ಸಮುದಾಯ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸುವ ಕೆಲಸವಾಗಬೇಕಿದೆ. ವಿದೇಶಿ ಧರ್ಮಗಳ ಪೆಟ್ಟಿಗೆ ಸಿಲುಕಿ ನಶಿಸುತ್ತಿರುವ ಹಿಂದೂ ಧರ್ಮ ಕಾಪಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಇಂದು ಸಂಕಲ್ಪ ತೊಟ್ಟು ಸಮಗ್ರ ಭಾರತ ಕಟ್ಟಬೇಕಿದೆ. ಒಗ್ಗಟ್ಟಾಗಿ ನಿಂತು ವಿದೇಶಿ ಧರ್ಮಗಳ ಹಾವಳಿಯನ್ನು ಹಿಮ್ಮೆಟ್ಟಿಸಿ ದೇಶಿ ಗೋವುಗಳನ್ನು ಮತ್ತು ಹಿಂದೂ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಉನ್ನತ ವ್ಯಕ್ತಿಯವರೆಗೆ ಅತ್ಯಂತ ಬಲಿಷ್ಠವಾಗಿಸುವ ಸಂಕಲ್ಪದೊಂದಿಗೆ ಕಾಮಧೇನು ಗೋ ಸೇವೆ ವಿಸ್ತೃತ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾ ಮೂಹೂರ್ತದಲ್ಲೆ ಭೂಮಿ ಪೂಜೆ ನೆರವೇರಿಸುತ್ತಿದ್ದು ನಮ್ಮೆಲ್ಲರ ಸುಯೋಗ ಎಂದರು.ಇದೇ ಸಂದರ್ಭದಲ್ಲಿ ಹಿಂದುಳಿದ, ತಳ ಸಮುದಾಯಗಳ ಮುಖ್ಯಸ್ಥರಾದ ಅಪ್ಪಿ ಪೂಜರ‍್ತಿ, ಕಿಟ್ಟಿನಾಯ್ಕ, ಗೋಪಾಲಯ್ಯ ಶಂಕರಕೊಡಿಗೆ, ದೇವಪ್ಪ ಆಚಾರ್, ಗೋಪಾಲಯ್ಯ ಮುಜೇಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೋ ಶಾಲೆ ಮುಖ್ಯಸ್ಥರಾದ ಸುಮಾ ನಾಗೇಶ್, ಶ್ರೀರಾಮ್ ಆಂಗೀರಸ, ಗ್ರಾಪಂ ಸದಸ್ಯೆ ಅನುಪಮಾ, ಪ್ರಮುಖರಾದ ಕೆ.ವಿ.ದಿನೇಶ್ ಚಂದ್ರಗಿರಿ, ಲಕ್ಷ್ಮೀನಾರಾಯಣ, ಗೋಪಾಲಕೃಷ್ಣ, ನೀರ‍್ಕಟ್ಟು ಹರೀಶ್, ಶ್ಯಾಮ ಮೇಸ್ತ್ರಿ, ಸರೋಜಾ, ಕೃಷ್ಣಮೂರ್ತಿ, ಪ್ರಶಾಂತ್, ನಯನ ಮತ್ತಿತರರು ಹಾಜರಿದ್ದರು. ೨೨ಬಿಹೆಚ್‌ಆರ್ ೪:

ಬಾಳೆಹೊನ್ನೂರು ಸಮೀಪದ ದೇವಗೋಡು ಗ್ರಾಮದ ಕೆಮ್ಮಣ್ಣು ನರ‍್ಕಟ್ಟುವಿನಲ್ಲಿ ನೂತನ ಕಾಮಧೇನು ಗೋಶಾಲಾ ವಿಸ್ಕೃತ ಕಟ್ಟಡಕ್ಕೆ ಕಾಮಧೇನು ಗೋ ಸೇವಾ ಟ್ರಸ್ಟ್ ಮುಖ್ಯಸ್ಥ ನಾಗೇಶ್ ಆಂಗೀರಸ ಭೂಮಿಪೂಜೆ ನೆರವೇರಿಸಿದರು. ಸುಮಾ, ಶ್ರೀರಾಮ್, ಲಕ್ಷ್ಮೀನಾರಾಯಣ, ಅನುಪಮಾ, ದಿನೇಶ್ ಚಂದ್ರಗಿರಿ ಇದ್ದರು.