ಇಂದಿನ ಕಾಲಘಟ್ಟದಲ್ಲಿ ಬ್ಯಾಂಕಿಗೆ ಭೇಟಿ ನೀಡಿ ಸಾಲ ಸೌಲಭ್ಯ ಸೌಲಭ್ಯ ಪಡೆದುಕೊಳ್ಳುವುದು ಸಾಮಾನ್ಯ ಜನರಿಗೆ ಅಷ್ಟೊಂದು ಸುಲಭವಾದ ಕೆಲಸವಲ್ಲ.

ಶಿರಸಿ: ಭಾರತ ಮಳೆ ಆಧರಿತ ದೇಶ. ಇಲ್ಲಿನ ರೈತರು ಮಳೆಯನ್ನೇ ಆಶ್ರಯಿಸಿ ತಮ್ಮ ದಿನನಿತ್ಯದ ಜೀವನವನ್ನು ನಿರ್ವಹಿಸುತ್ತಾರೆ. ರೈತರು ಸಮೃದ್ಧವಾಗಿದ್ದರೆ ದೇಶ ಸಮೃದ್ಧವಾಗಿರುತ್ತದೆ. ಈ ಸಲ ಮಳೆ ಅಭಾವದಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರ ಮತ್ತು ಬ್ಯಾಂಕುಗಳು ರೈತರ ನೆರವಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಪಂ ಸಿಇಒ ಡಾ. ದಿಲೀಷ್ ಶಶಿ ಅಭಿಪ್ರಾಯಪಟ್ಟರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಬೃಹತ್ ಸಾಲ ಜಾಗೃತಿ ಮೇಳ ಹಾಗೂ ಆರ್ಥಿಕ ಸಾಕ್ಷರತೆ ಮತ್ತು ಸೇರ್ಪಡೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಬ್ಯಾಂಕಿಗೆ ಭೇಟಿ ನೀಡಿ ಸಾಲ ಸೌಲಭ್ಯ ಸೌಲಭ್ಯ ಪಡೆದುಕೊಳ್ಳುವುದು ಸಾಮಾನ್ಯ ಜನರಿಗೆ ಅಷ್ಟೊಂದು ಸುಲಭವಾದ ಕೆಲಸವಲ್ಲ. ಆ ದೃಷ್ಟಿಯಿಂದ ಸರ್ಕಾರಿ ಇಲಾಖೆಗಳು ಮತ್ತು ಜಿಲ್ಲೆಯ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಎಲ್ಲ ರೀತಿಯ ಬ್ಯಾಂಕುಗಳಲ್ಲಿ ಯಾವ ರೀತಿ ಸಾಲ ಸೌಲಭ್ಯ ಪಡೆಯಲು ಅರಿವು ಮೂಡಿಸುವ ವೇದಿಕೆ ನಿರ್ಮಾಣವಾಗಿದೆ, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜಪ್ಪ ಗೌಳಿ ಅವರು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಬ್ಯಾಂಕಿನಿಂದ ನೀಡಲಾಗುವ ಸ್ಕೀಮ್‌ಗಳನ್ನು ಯಾವ ರೀತಿ ಸದುಪಯೋಗ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ. ಸತೀಶ್, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಬಂಡೆರ, ಸಿಡಿಪಿಒ ನಂದಕುಮಾರ್, ಅಶೋಕ ಭಾಂಡಗೆ, ಸುಹಾಸ್, ಲಕ್ಷ್ಮಿಕಾಂತ್ ವಾಸುದೇವ್, ಜಿಲ್ಲೆಯ ಲೀಡ್ ಬ್ಯಾಂಕ್ ಡಿಸ್ಟ್ರಿಕ್ಟ್ ಮ್ಯಾನೇಜರ್ ರಾಜಪ್ಪ ಗೌಳಿ ಸುಶೀಲ್ ನಾಯ್ಕ್ ಸೇರಿದಂತೆ ಅನೇಕರು ಇದ್ದರು.