ಸರ್ಕಾರಿ, ಖಾಸಗಿ ಬಸ್‌ಗಳ ಪ್ರಯಾಣ ದರ ಕಡಿಮೆ ಮಾಡಿ

| Published : Feb 09 2025, 01:17 AM IST

ಸಾರಾಂಶ

ಶಿಕಾರಿಪುರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಲ್ಲ ಸಲ್ಲದ ಯೋಜನೆಗಳನ್ನು ತಂದು ಸಾರ್ವಜನಿಕರಿಗೆ ಹಣದುಬ್ಬರವಾಗಿಸಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯ ಎನ್.ಶಾಸ್ತ್ರಿ ಆರೋಪಿಸಿದರು.

ಶಿಕಾರಿಪುರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಲ್ಲ ಸಲ್ಲದ ಯೋಜನೆಗಳನ್ನು ತಂದು ಸಾರ್ವಜನಿಕರಿಗೆ ಹಣದುಬ್ಬರವಾಗಿಸಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯ ಎನ್.ಶಾಸ್ತ್ರಿ ಆರೋಪಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದವಸ ಧಾನ್ಯ ಸೇರಿದಂತೆ ಪುರುಷರಿಗೆ ಪ್ರಯಾಣ ದರ, ಸ್ಟಾಂಪ್ ಪೇಪರ್, ರಿಜಿಸ್ಟರ್, ಹಲವು ರೀತಿಯ ಹಣದುಬ್ಬರದ ಅವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ದೂರಿದರು.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಬಸ್‌ಗಳ ಪ್ರಯಾಣ ದರ ಹೆಚ್ಚು ಮಾಡಿದ್ದು ಬಡ ರೈತ ಕೂಲಿ ಕಾರ್ಮಿಕ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅದರಲ್ಲೂ ಮಹಿಳೆ ಮತ್ತು ಪುರುಷ ಎಂದು ಭೇದ ಭಾವ ಮಾಡಿ ಪುರುಷರ ಜೇಬಿಗೆ ಕತ್ತರಿ ಹಾಕುತ್ತಿರುವುದನ್ನು ಸಂಘಟನೆ ವಿರೋಧಿಸುತ್ತದೆ ಎಂದರು.

ಅದೇ ರೀತಿ ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳ ಮಾಲೀಕರು ಹೈರಾಣ ಆಗಿ ಹೋಗಿದ್ದಾರೆ. ಅವರು ಸಹ ಈ ಹಿಂದೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ 60 ರು. ಇದ್ದ ದರವನ್ನು ಇಂದು 70. ರು. ಗಳಿಗೆ ನಿಗದಿ ಮಾಡಿದ್ದಾರೆ. ಸರ್ಕಾರ ಮತ್ತು ಖಾಸಗಿ ಮಾಲೀಕರು ಈ ಕೂಡಲೇ ಎಚ್ಚೆತ್ತು ದರವನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.

ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತುಕೊಂಡು ನಿಮ್ಮ ಇಚ್ಛಾನುಸಾರ ಆದೇಶಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಯಾವಗಲ್, ಕಾರ್ಯಾಧ್ಯಕ್ಷ ಮಟ್ಟಿಕೋಟೆ ಮಾಲತೇಶ್, ರಫೀಕ್, ಕಲೀಮ್ ಉಲ್ಲಾ, ಹುಸೇನ್ ಸಾಬ್ ಹಾಜರಿದ್ದರು.