ಸ್ವಯಂ ಉದ್ಯಮಗಳ ಮೂಲಕ ಜನರ ಆರ್ಥಿಕ ಸಬಲೀ ಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು, ಸರ್ಕಾರದ ಯೋಜನೆಗಳನ್ನು ನೇರ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಹಾ ಗುರುತರ ಜವಾಬ್ದಾರಿ ಹೊರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸ್ವಯಂ ಉದ್ಯಮಗಳ ಮೂಲಕ ಜನರ ಆರ್ಥಿಕ ಸಬಲೀ ಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು, ಸರ್ಕಾರದ ಯೋಜನೆಗಳನ್ನು ನೇರ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಹಾ ಗುರುತರ ಜವಾಬ್ದಾರಿ ಹೊರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಗುರುಭವನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾ ಟಕ ಸಹಕಾರ ಕುಕ್ಕುಟ ಮಹಾಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಮಹಿಳೆಯರಿಗೆ ನಾಟಿ ಕೋಳಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಸ್ವಯಂ ಉದ್ಯಮಗಳ ಮೂಲಕ ಜನರ ಆರ್ಥಿಕ ಸಬಲೀ ಕರಣ ಸರ್ಕಾರದ ಗುರಿಯಾಗಿದ್ದು ಸರ್ಕಾರಿ ಸವಲತ್ತುಗಳನ್ನು ಅಗತ್ಯ ಫಲಾನುಭವಿಗಳಿಗೆ ಅನುಕೂಲವಾಗಬೇಕು, ಇವು ಯಾವುದೇ ಕಾರಣಕ್ಕೂ ಮಾರಾಟದ ವಸ್ತುಗಳಾಗಕೂಡದು ಎಂದರು.ಶ್ರಮವಹಿಸಿ ದುಡಿದು ಉದ್ಯಮವನ್ನು ವಿಸ್ತರಣೆ ಮಾಡಿದರೆ ಯಶಸ್ಸು ಸಿಗಲಿದೆ. ದಯವಿಟ್ಟು ಸರ್ಕಾರದ ಸವಲತ್ತು ನೇರ ಫಲಾನುಭವಿಗಳಿಗೆ ವರದಾಯಕವಾಗಬೇಕು, ನಮ್ಮ ತಂದೆ ಬಿ.ರಾಚಯ್ಯ ಅವರು ಕಂದಾಯ ಸಚಿವರಾಗಿದ್ದಾಗ 1960ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಪಶುವಿದ್ಯಾಲಯ, ಕೃಷಿ ವಿದ್ಯಾಲಯಗಳಿಗೆ ಸರ್ಕಾರ ಮೂಲಕ ಸ್ಥಳವನ್ನು ಮಂಜೂರು ಮಾಡಿ ಕೊಟ್ಟಿದ್ದು ಇವೆಲ್ಲವೂ ಇಂದಿಗೆ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ನಮ್ಮ ಭಾಗದ ಮೈಸೂರು ರೇಷ್ಮೆ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಅಂತೆಯೇ, ಹೈನುಗಾರಿಕೆ ಉದ್ಯ ಮವನ್ನು ಕೂಡ ಹೆಚ್ಚಾಗಿದೆ. ಹಿಂದೆ ಸಿದ್ದರಾಮಯ್ಯ ಅವರು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವರಾಗಿದ್ದಾಗ ರೈತ ಅಭ್ಯುದಯಕ್ಕೆ ಯೋಜನೆಗಳನ್ನು ಅನುಷ್ಠಾನ ಮಾಡಿದರು. ಅಂ ತೆಯೇ, ನನ್ನ ತಂದೆ ಬಿ.ರಾಚಯ್ಯ ರೇಷ್ಮೆ, ಕೃಷಿ, ಅರಣ್ಯ, ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದರು. ಇತ್ತೀಚೆಗಷ್ಟೆ ಕೆ.ವೆಂಕಟೇಶ್ ಅವರು ರೇಷ್ಮೆ ಸಚಿವರಾಗಿದ್ದರು. ಇದೀಗ ನಮ್ಮ ಜಿಲ್ಲೆಯವರಾದ ಸಿ.ಪುಟ್ಟರಂಗಶೆಟ್ಟಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಸರ್ಕಾರ ರೈತರ ಪರವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ 7 ರು.ಗೆ ಹಾಲಿನ ಧರ ಹೆಚ್ಚಿಸಿದೆ. ಹೈನುಗಾರಿಕೆ ಮಾಡುವ ರೈತರ ಅಭಿವೃದ್ಧಿಗೆ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಯುವಕ-ಯುವತಿಯರು ಹಸು, ಕೋಳಿ, ಕುರಿ ಸಾಗಾಣಿಕೆಗೆ ಕಡೆಗೆ ಮುಖ ಮಾಡುತ್ತಿದ್ದಾರೆ, ನನ್ನ ಪತ್ನಿ ಅವರು ಕೂಡ ಕೃಷಿ ಕಾಯಕ ಮಾಡುತ್ತಿದ್ದಾರೆ. ಅವರ ಕೃಷಿ ಕಾಯಕಕ್ಕೆ ನಾನು ಪ್ರೋತ್ಸಾಹ ನೀಡುತ್ತಿದ್ದೇನೆ ಎಂದರು.
ಕೊಳ್ಳೇಗಾಲ ತಾಲೂಕು ಪಶು ವೈದ್ಯಾಧಿಕಾರಿ ಸಿದ್ದರಾಜು ಮಾತನಾಡಿ, 2025-26ನೇ ಸಾಲಿನ ಕೋಳಿ ವಿತರಣೆ ನಿಟ್ಟಿನಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಶ್ರಮ ಹೆಚ್ಚಿದೆ. ಇಂದು ಆಯ್ದಯಾದ 90 ರೈತ ಮಹಿಳೆಯರಿಗೆ ತಲಾ 20 ಕೋಳಿಗಳನ್ನು ವಿತರಣೆ ಮಾಡಲಾಗುತ್ತಿದೆ. 15 ಹೆಣ್ಣು ಕೋಳಿಗಳು, 5 ಗಂಡು ಕೋಳಿಗಳನ್ನು ವಿತರಿಸಲಾಗುತ್ತಿದೆ ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರ ನಿರ್ದೇಶಕ ಬಿ.ತೋಟೇಶ್, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಜಿಲ್ಲಾಧ್ಯಕ್ಷ ರಾಚಯ್ಯ, ಪಶು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಮಂಜುನಾಥ್, ಯಳಂದೂರು ಮತ್ತು ಹನೂರು ಪಶುವೈದ್ಯಾಧಿಕಾರಿ ಶಿವರಾಜ್, ಡಾ.ಪ್ರದೀಪ್, ಡಾ.ಶಿವಕುಮಾರ್ ಇದ್ದರು.