ಸಾರಾಂಶ
ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲ್ಯಾಪಟಾಪ್‌ನ್ನು ಪ್ರಯಾಣಿಕನಿಗೆ ವಾಪಸ್ ನೀಡುವ ಮೂಲಕ ಬಸ್ ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಕರ್ತವ್ಯದ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ವಿಜಯಪುರ: ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲ್ಯಾಪಟಾಪ್‌ನ್ನು ಪ್ರಯಾಣಿಕನಿಗೆ ವಾಪಸ್ ನೀಡುವ ಮೂಲಕ ಬಸ್ ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಕರ್ತವ್ಯದ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ವಿಜಯಪುರದಿಂದ ಮುಳಸಾವಳಗಿಗೆ ಹೊರಟಿದ್ದ ವಿಜಯಪುರ ಘಟಕ-1ರ ಬಸ್ ಸಂಖ್ಯೆ ಕೆಎ28 ಎಫ್-1703ರಲ್ಲಿ ಪ್ರಯಾಣಿಕ ನೂರಲಿಶಾ ಮಕಾಂದಾರ ತನ್ನ ₹50 ಸಾವಿರ ಮೌಲ್ಯದ ಲ್ಯಾಪಟಾಪ್ ಬಿಟ್ಟು ಮುಳಸಾವಳಗಿಯಲ್ಲಿ ಇಳಿದು ಹೋಗಿದ್ದರು.
ಈ ವೇಳೆ ಇದನ್ನು ಗಮನಿಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಸೇರಿ ಪ್ರಯಾಣಿಕನನ್ನು ಕರೆದು ಆತನಿಗೆ ಲ್ಯಾಪಟಾಪ್ ಮರಳಿಸಿದ್ದಾರೆ. ಇವರ ಕಾರ್ಯಕ್ಕೆ ಲ್ಯಾಪಟಾಪ್ ಕಳೆದುಕೊಂಡಿದ್ದ ಪ್ರಯಾಣಿಕ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.