ಸರ್ಕಾರಿ ಬಸ್‌ ಮನೆ ಮೇಲೆ ಉರುಳಿ ಬಿದ್ದು ಅಪಘಾತ

| Published : Apr 10 2025, 01:01 AM IST

ಸಾರಾಂಶ

ಕೊಪ್ಪ: ಚಾಲಕನ ನಿರ್ಲಕ್ಷ್ಯದಿಂದ ಸರ್ಕಾರಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಯ ಮೇಲೆ ಬಿದ್ದ ಪ್ರಕರಣ ಜಯಪುರ ಸಮೀಪದ ಜಲದುರ್ಗದಲ್ಲಿ ನಡೆದಿದೆ.

ಕೊಪ್ಪ: ಚಾಲಕನ ನಿರ್ಲಕ್ಷ್ಯದಿಂದ ಸರ್ಕಾರಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಯ ಮೇಲೆ ಬಿದ್ದ ಪ್ರಕರಣ ಜಯಪುರ ಸಮೀಪದ ಜಲದುರ್ಗದಲ್ಲಿ ನಡೆದಿದೆ.

ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಈ ಬಸ್‌ ಜಲದುರ್ಗ ಬಳಿ ತೆರಳುವಾಗ ನಿಯಂತ್ರಣ ತಪ್ಪಿ ಮನೆಮೇಲೆ ಉಳುಬಿದ್ದ ಪರಿಣಾಮ ಮನೆಯಲ್ಲಿದ್ದ ಶಾಂತ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಬಸ್‌ ನಲ್ಲಿದ್ದ 45 ಮಂದಿಯಲ್ಲಿ 35 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, 10 ಮಂದಿಗೆ ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಜಯಪುರ ಹಾಗೂ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಇದರಲ್ಲಿ ಇಬ್ಬರನ್ನು ಬೇರೆಡೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು