ಜಾನಕಲ್ ಗ್ರಾಮಕ್ಕೆ ಸರ್ಕಾರಿ ಬಸ್‌

| Published : May 15 2025, 01:41 AM IST

ಸಾರಾಂಶ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಜಾನಕಲ್ ಗ್ರಾಮಕ್ಕೆ ಬಹು ವರ್ಷಗಳ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭಗೊಂಡಿತು. ಗ್ರಾಮದ ಜನರು ಸರಕಾರಿ ಬಸ್ಸಿಗೆ ಪೂಜೆ ಮಾಡಿ ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಜಾನಕಲ್ ಗ್ರಾಮಕ್ಕೆ ಬಹು ವರ್ಷಗಳ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭಗೊಂಡಿತು. ಗ್ರಾಮದ ಜನರು ಸರಕಾರಿ ಬಸ್ಸಿಗೆ ಪೂಜೆ ಮಾಡಿ ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಂಡರು. ಬುಕ್ಕಾಪಟ್ಟಣ ಹೋಬಳಿಯ ಜನಕಾಲ್ ಗ್ರಾಮ ಸುಮಾರು ೨೦೦೦ ಜನಸಂಖ್ಯೆಯ ಗ್ರಾಮವಾಗಿದ್ದು ಹಾಗಲವಾಡಿ ಬುಕ್ಕಾಪಟ್ಟಣ ರಸ್ತೆಯಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿದ್ದು ಪ್ರತಿದಿನ ವಿದ್ಯಾರ್ಥಿಗಳು, ವಯೋವೃದ್ಧರು, ಸಣ್ಣ ಪುಟ್ಟ ಮಕ್ಕಳು ರೈತರು ತಮ್ಮ ದಿನ ನಿತ್ಯದ ವ್ಯವಹಾರಕ್ಕಾಗಿ ಬುಕ್ಕಾಪಟ್ಟಣ, ಹಾಗಲವಾಡಿ, ಶಿರಾ, ಗುಬ್ಬಿ ಸೇರಿದಂತೆ ಹಲವು ನಗರಗಳಿಗೆ ಹೋಗಲು ಎರಡುವರೆ ಕಿಲೋಮೀಟರ್ ದೂರದ ಮಾದೇನಹಳ್ಳಿಗೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ಪ್ರಯೋಜನವಾಗಿರಲಿಲ್ಲ ಇತ್ತೀಚಿಗಷ್ಟೇ ಜಾನಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಹಾಗೂ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಮುರುಳಿಧರ ಹಾಲಪ್ಪ ರವರಗಳ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಗ್ರಾಮಕ್ಕೆ ಸರಕಾರಿ ಬಸ್ ಸೇವೆ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ರಾಮಲಿಂಗಾಪುರ ವಿ ಎಸ್ ಎಸ್ ಎನ್ ಅಧ್ಯಕ್ಷ ಮುಕುಂದಪ್ಪ ಹೆಚ್ಚಿನ ಶ್ರಮವಹಿಸಿದ್ದಾರೆ ಎಂದು ಗ್ರಾಮದ ಮುಖಂಡ ಭರತ್ ಕುಮಾರ್ ರವರು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಮೈಲಾರಪ್ಪ, ವಕೀಲರಾದ ರಮೇಶ್, ಕೋದಂಡರಾಮ, ಮಂಜುನಾಥ್ , ಪೂಜಾರ್ ಗುರುವಣ್ಣ, ಲಲಿತಮ್ಮ, ಕರೆತಿಮ್ಮಣ್ಣ, ರಾಮು , ಸೇರಿದಂತೆ ಹಲವರು ಹಾಜರಿದ್ದರು.