ಹಾನಗಲ್ಲ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಉತ್ತಮ ರಸ್ತೆ, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಅವಶ್ಯ ಅನುದಾನ ದೊರಕಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ನಿಸ್ಸೀಮೇಶ್ವರ ದೇವಸ್ಥಾನದಿಂದ ತೇರಿನ ಮನೆವರೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಿಸ್ಸೀಮ ಆಲದಕಟ್ಟಿ ಗ್ರಾಮಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಗ್ರಾಮದ ನಿಸ್ಸೀಮೇಶ್ವರ ದೇವಸ್ಥಾನಕ್ಕೆ ಸುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ನಡೆಯುವ ರಥೋತ್ಸವದಲ್ಲಿ ರಥ ಸಂಚರಿಸುವ ಮಾರ್ಗವನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿಸಬೇಕು ಎನ್ನುವ ಬೇಡಿಕೆ ಬಹುದಿನಗಳದ್ದಾಗಿತ್ತು. ಅದನ್ನೀಗ ಈಡೇರಿಸಲಾಗಿದೆ. ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಸುರೇಶ ಮುಸುರಿ, ಮಲ್ಲಿಕಾರ್ಜುನ ದೇವಣ್ಣನವರ, ವೆಂಕಟೇಶ ವಡ್ಡರ, ನೀಲಪ್ಪ ಬಾಲಣ್ಣನವರ, ಚಂದ್ರು ಬಳ್ಳಾರಿ, ಮುಕ್ತಾನಂದ ಹಿರೇಮನಿ, ಉಳವಪ್ಪ ಜಿಂಗಿ, ಲೋಹಿತ್ ಕಾಟಣ್ಣನವರ, ಗೋಪಾಲ ಕಾಟಣ್ಣನವರ, ಅಶೋಕ ಹೆಗಡೆ, ಬಸವರಾಜ ಬಿದರಣ್ಣನವರ, ಸಂಜೀವರೆಡ್ಡಿ ಬಿದರಣ್ಣನವರ, ಲಕ್ಷö್ಮಣ ಜಾಧವ, ನಿಸ್ಸೀಮ, ಬಸವರಾಜ ಹೊಸಮನಿ, ಬಸನಗೌಡ ಪಾಟೀಲ ಇದ್ದರು.