ಒಳಮೀಸಲು ಜಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ದ : ಕೆ.ಎಚ್.ಮುನಿಯಪ್ಪ

| N/A | Published : Mar 10 2025, 12:22 AM IST / Updated: Mar 10 2025, 12:45 PM IST

ಒಳಮೀಸಲು ಜಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ದ : ಕೆ.ಎಚ್.ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಒಳಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ, ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ಸಂಪೂರ್ಣವಾಗಿ ಒಳಮೀಸಲು ಪರವಾಗಿದೆ. ಕಳೆದ 30 ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಂಘಸಂಸ್ಥೆಗಳ ಫಲವಿದು

 ಚಿಕ್ಕಬಳ್ಳಾಪುರ : ಒಳಮೀಸಲು ಜಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ. ಜಾರಿಗೆ ದತ್ತಾಂಶ ಬೇಕಿದ್ದು, ಈ ವಿಚಾರದಲ್ಲಿ ಜಸ್ಟೀಸ್ ನಾಗಮೋಹನ್‌ದಾಸ್ ಅವರ ಸಮಿತಿ ರಚಿಸಲಾಗಿದ್ದು, ವರದಿ ಬಂದಕೂಡಲೇ ಜಾರಿಮಾಡಿಯೇ ತೀರುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

 ತಾಲೂಕಿನ ರಂಗಸ್ಥಳದ ಶ್ರೀ ರಂಗನಾಥನ ಸನ್ನಿಧಿಯಲ್ಲಿ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ಭಾನುವಾರ ನಡೆದ 45 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧೂವರರನ್ನು ಆಶೀರ್ವದಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ಎಲ್ಲರ ಹೋರಾಟದ ಫಲ

ಒಳಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ, ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ಸಂಪೂರ್ಣವಾಗಿ ಒಳಮೀಸಲು ಪರವಾಗಿದೆ. ಕಳೆದ 30 ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಂಘಸಂಸ್ಥೆಗಳ ಹೋರಾಟದ ಫಲವಾಗಿ ಒಳಮೀಸಲು ಜಾರಿಯಾಗುವ ಹಂತ ತಪುಪಿದೆ. ಕಮಿಷನ್ ವರದಿ ಬಂದ ಕೂಡಲೇ ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪರಿಶಿಷ್ಟರ ಹಣ ದುರ್ಬಳಕೆ ಆಗಿಲ್ಲ

ಎಸ್‌ಸಿ.ಎಸ್‌ಪಿ, ಟಿಎಸ್‌ಪಿ ಅನುದಾನದ ದುರ್ಬಳಕೆಯ ಮಾತೇಯಿಲ್ಲ. ನಮ್ಮ ಸರ್ಕಾರ ಬಹಳ ಜವಾವ್ದಾರಿಯಿಂದ ದಲಿತರ ಹಿತಕ್ಕಾಗಿ ಇದನ್ನು ಬಳಸುತ್ತಿದೆ. ಇದನ್ನು ಯಾವ ಕಾರಣಕ್ಕೂ ಅನ್ಯರಿಗೆ, ಅನ್ಯಕಾರ್ಯಕ್ಕೆ ಬಳಸಿಲ್ಲ ಎಂದರು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈವೇಳೆ ಪಾಲನಹಳ್ಳಿ ಮಠದ ಸಿದ್ಧರಾಜಸ್ವಾಮೀಜಿ, ಚಿತ್ರದುರ್ಗದ ಶಿವಶರಣ ಹರಳಯ್ಯ ಸ್ವಾಮೀಜಿ, ಕಾರ್ಯಕ್ರಮದ ಆಯೋಜಕ ಪಿಳ್ಳಾಂಜಿನಪ್ಪ,ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಪಟ್ರೇನಹಳ್ಳಿ ಕೃಷ್ಣ,ಯುವ ಮುಖಂಡ ನವೀನ್‌ರೆಡ್ಡಿ,ಎನ್ ಟಿಆರ್,ರಾಮಣ್ಣ, ತಿರುಮಳಪ್ಪ ಮತ್ತಿತರರು ಇದ್ದರು.