ಕನ್ನಡ ರಾಜ್ಯೋತ್ಸವ ಆಚರಿಸದ ಸರ್ಕಾರಿ, ಸಹಕಾರ ಸಂಘಗಳು..!

| Published : Nov 02 2024, 01:23 AM IST

ಸಾರಾಂಶ

ಪಾಂಡವಪುರ ತಾಲೂಕಿನಲ್ಲಿ ಹಲವು ಸರ್ಕಾರಿ ಕಚೇರಿಗಳು, ಸಹಕಾರ ಸಂಘಗಳಲ್ಲಿ ಕನ್ನಡ ರಾಜ್ಯೋತ್ಸವಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ 69ನೇ ಕನ್ನಡ ರಾಜ್ಯೋತ್ಸವ ಆಚರಿಸದೆ ಭಾಷೆ ಬಗ್ಗೆ ಅಗೌರವ ತೋರಿರುವ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನಲ್ಲಿ ಹಲವು ಸರ್ಕಾರಿ ಕಚೇರಿಗಳು, ಸಹಕಾರ ಸಂಘಗಳಲ್ಲಿ ಕನ್ನಡ ರಾಜ್ಯೋತ್ಸವಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ 69ನೇ ಕನ್ನಡ ರಾಜ್ಯೋತ್ಸವ ಆಚರಿಸದೆ ಭಾಷೆ ಬಗ್ಗೆ ಅಗೌರವ ತೋರಿರುವ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ತಾಪಂ ಕಚೇರಿ, ಹಿಂದುಳಿದ ರ್ವಳ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಕೃಷಿ, ಕಸಬಾ ಕೃಷಿ ಪತ್ತಿನ ಸಹಕಾರ ಸಂಘ, ಪೀಕಾರ್ಡ್ (ಪಿಎಲ್‌ಡಿ) ಬ್ಯಾಂಕ್, ಗ್ರಂಥಾಲಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳ ಸರ್ಕಾರಿ ನೌಕರರು ಮತ್ತು ಆಡಳಿತ ಮಂಡಳಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಿಂದೇಟು ಹಾಕಿದ್ದು, ಕಚೇರಿ ಮುಂಭಾದ ಧ್ವಜ ಸ್ತಂಭಗಳು ಖಾಲಿಯಾಗಿದ್ದವು.

ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರ ಸಂಘಗಳ ಕಚೇರಿ ನೌಕರರು ಮತ್ತು ಆಡಳಿತ ಮಂಡಳಿ ಕನ್ನಡ ರಾಜ್ಯೋತ್ಸವದ ಬಗ್ಗೆ ಹೊಂದಿರುವ ಅಸಡ್ಡೆ ಮನಸ್ಥಿತಿಗೆ ಕನ್ನಡ ಪರ ಸಂಘಟನೆ ಮತ್ತು ಕನ್ನಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಕನ್ನಡ ಭಾಷಾಭಿಮಾನವಿಲ್ಲದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕೆಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಸರ್ಕಾರ ಕೂಡ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಹಕಾರ ಸಂಘ ಮತ್ತು ಸರ್ಕಾರಿ ಅಧೀನದಲ್ಲಿರುವ ಕಚೇರಿಗಳ ಮೇಲೆ ಕನ್ನಡ ಧ್ವಜಾರೋಹಣ ಮಾಡುವಂತೆ ಸೂಚಿಸಿದ್ದರೂ ಅಧಿಕಾರಿಗಳು ಬೇಜವಬ್ದಾರಿ ತೋರಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ಭುವನೇಶ್ವರಿ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಗಿದೆ. ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಕಡ್ಡಾಯವಾಗಿ ಹಾರಿಸುವ ವಿಚಾರ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು, ಯಾವುದೇ ತೀರ್ಮಾನವಾಗದ ಹಿನ್ನೆಲೆಯಲ್ಲಿ ಕನ್ನಡ ಬಾವುಟ ಹಾರಿಸಿಲ್ಲ.- ಲೋಕೇಶ್ ಮೂರ್ತಿ, ತಾಪಂ ಇಒಸರ್ಕಾರಿ ಕಚೇರಿಗಳ ಮೇಲೆ ಕಡ್ಡಾಯವಾಗಿ ಧ್ವಜ ಹಾರಿಸುವಂತೆ ಸೂಚನೆ ನೀಡಲಾಗಿದೆ. ಧ್ವಜ ಹಾರಿಸುವ ಸಂಬಂಧ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಿದ್ದಿಲ್ಲ. ಹೀಗಾಗಿ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡದ ಮೇಲೆ ಬಾವುಟ ಹಾರಿಸಬೇಕು. ಅದನ್ನು ಬಿಟ್ಟು ಸಬೂಬು ಹೇಳಬಾರದು. ಈ ಸಂಬಂಧ ಎಲ್ಲಾ ಇಲಾಖೆಗಳಿಗೂ ಕಾರಣ ಕೇಳಲಾಗುವುದು.

- ಎಸ್.ಸಂತೋಷ್, ತಹಸೀಲ್ದಾರ್ ಪಾಂಡವಪುರ