ಕಡೂರುಕ್ಷೇತ್ರದ ಶಾಸಕರ ಗೈರು ಹಾಜರಿಯಲ್ಲಿ ಅವರ ಆಪ್ತ ಸಹಾಯಕರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೌಳ ಹಿರಿಯೂರು ರವಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಡೂರು
ಕ್ಷೇತ್ರದ ಶಾಸಕರ ಗೈರು ಹಾಜರಿಯಲ್ಲಿ ಅವರ ಆಪ್ತ ಸಹಾಯಕರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೌಳ ಹಿರಿಯೂರು ರವಿ ಆರೋಪಿಸಿದ್ದಾರೆ.ಗುರುವಾರ ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಉಪ ಗ್ರಾಮಗಳ ರಚನೆ ಕುರಿತಂತೆ ಕಂದಾಯ ಇಲಾಖೆ ಶಿರಸ್ತೇದಾರ್, ಉಪ ತಹಸೀಲ್ದಾರ್, ಆರ್.ಐ.ಮತ್ತು ಪಿಡಿಒಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಾಸಕ ಕೆ.ಎಸ್ ಆನಂದ್ ಭಾಗವಹಿಸಬೇಕಿತ್ತು. ಆದರೆ ಶಾಸಕರ ಆಪ್ತ ಸಹಾಯಕ ಮಂಜುನಾಥ್ ಮೂಲಕ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಲೂಕು ಪಂಚಾಯ್ತಿ ಇಒ ಸಿ. ಆರ್. ಪ್ರವೀಣ್ ಹಾಗೂ ಅಧಿಕಾರಿಗಳ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ ಎಂದು ದೂರಿದ್ದಾರೆ.
ಶಾಸಕ ಕೆ.ಎಸ್.ಆನಂದ್ ಅವರ ಜಾಗದಲ್ಲಿ ಪಿಎ ಕುಳಿತು ಸಭೆ ನಡೆಸಿದ್ದಾರೆ ಎಂದು ಆರೋಪಿಸಿರುವ ರವಿ, ಸದರಿ ವಿಷಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿ ಅವರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. -- ಬಾಕ್ಸ್ ಸುದ್ದಿಗೆ.--ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ " ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಘಟನೆ ಕುರಿತು ವರದಿ ನೀಡುವಂತೆ ಕಡೂರು ತಹಸೀಲ್ದಾರ್ ಗೆ ಸೂಚಿಸಿದ್ದೇನೆ. ವರದಿ ನೀಡಿದ ಬಳಿಕ ಸೂಕ್ತ ಕ್ರಮ ವಹಿಸಲಾ ಗುವುದು ಎಂದು ತಿಳಿಸಿದ್ದಾರೆ. 13ಕೆಕೆಡಿಯು3.ಕಡೂರು ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಸಭೆಯಲ್ಲಿ ತಹಸೀಲ್ದಾರ್, ಇಒ ಮತ್ತು ಆರ್ ಎಫ್ ಒ ಜೊತೆ ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕ ಮಂಜುನಾಥ್ ಕುಳಿತಿರುವುದು.