ಸರ್ಕಾರಿ ನೌಕರರಿಗೆ ತರಬೇತಿ ಅಗತ್ಯವಿದೆ: ಸತೀಶ್

| Published : Jan 22 2025, 12:30 AM IST

ಸರ್ಕಾರಿ ನೌಕರರಿಗೆ ತರಬೇತಿ ಅಗತ್ಯವಿದೆ: ಸತೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುವುದರ ಜೊತೆಗೆ ಹೊಸದಾಗಿ ಬಂದಿರುವ ನೌಕರರು ಸಾರ್ವಜನಿಕವಾಗಿ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ತರಬೇತಿ ಅವಶ್ಯಕತೆ ಇದ್ದು, ಅದನ್ನು ಸಂಘದ ವತಿಯಿಂದ ಆಯೋಜನೆ ಮಾಡಲಿದ್ದೇವೆ. ನೌಕರರ ಹಿತ ಕಾಪಾಡಲು ಸಂಘವು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದೆ. ಅದಕ್ಕೆ ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಸಂಘದೊಟ್ಟಿಗೆ ಕೈಜೋಡಿಸಬೇಕು. ನೌಕರರ ಪರವಾಗಿ ನಿಲ್ಲಬೇಕಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಅಗತ್ಯ ತರಬೇತಿ ಕೊಡುವುದರ ಜೊತೆಗೆ ನೌಕರರ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ತಿಳಿಸಿದರು.

ನಗರದ ಎಕ್ಸ್ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಬಳಿ ಯಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ನೌಕರರ ಸಂಘದ ಸಭೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತ ಕಾಪಾಡುವುದರ ಜೊತೆಗೆ ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಅಗತ್ಯವಾಗಿ ಬೇಕಿರುವ ತರಬೇತಿ ಕೊಡುವ ಕೆಲಸ ಆಗಬೇಕು.

ಸಾರ್ವಜನಿಕವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಅಗತ್ಯ ತರಬೇತಿಯನ್ನು ಕೊಡುವುದರ ಜೊತೆಗೆ ಅವರ ಮನಸ್ಸಿನ ಒತ್ತಡ ನಿವಾರಣೆಗಾಗಿ ಮನರಂಜನೆ ಮತ್ತು ಕ್ರೀಡಾ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಅದನ್ನು ಸಂಘದ ವತಿಯಿಂದ ಆಯೋಜನೆ ಮಾಡಬೇಕೆಂದು ತಿಳಿಸಿದರು.

ಕನಕಪುರ ತಾಲೂಕು ರಾಜ್ಯದಲ್ಲಿಯೇ ವಿಶೇಷವಾದ ತಾಲೂಕಾಗಿದ್ದು ಇಲ್ಲಿ ಸುಸಜ್ಜಿತವಾದ ನೌಕರರ ಭವನವನ್ನು ನಿರ್ಮಿಸುವ ಮೂಲಕ ಮಾದರಿ ಮಾಡಬೇಕಾಗಿದೆ. ಅದಕ್ಕಾಗಿ ಶೀಘ್ರವಾಗಿ ಸಂಘದ ಕಚೇರಿಗೆ ನಿವೇಶನದ ವ್ಯವಸ್ಥೆ ಮಾಡುವಂತೆ ತಾಲೂಕು ಅಧ್ಯಕ್ಷರಿಗೆ ಸಲಹೆ ನೀಡಿದರು.

ತಾಲೂಕು ಅಧ್ಯಕ್ಷ ನಂದೀಶ್ ಮಾತನಾಡಿ. ತಾಲೂಕಿನಲ್ಲಿ ನೌಕರರ ಭವನ ಅವಶ್ಯಕತೆ ಇದ್ದು ಅದರ ನಿವೇಶನಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ನಿವೇಶನ ಪಡೆಯುವ ಪ್ರಕ್ರಿಯೆಯನ್ನು ಮುಗಿಸಿ ಭವನ ನಿರ್ಮಿಸುವುದಾಗಿ ತಿಳಿಸಿದರು.

ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುವುದರ ಜೊತೆಗೆ ಹೊಸದಾಗಿ ಬಂದಿರುವ ನೌಕರರು ಸಾರ್ವಜನಿಕವಾಗಿ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ತರಬೇತಿ ಅವಶ್ಯಕತೆ ಇದ್ದು, ಅದನ್ನು ಸಂಘದ ವತಿಯಿಂದ ಆಯೋಜನೆ ಮಾಡಲಿದ್ದೇವೆ. ನೌಕರರ ಹಿತ ಕಾಪಾಡಲು ಸಂಘವು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದೆ. ಅದಕ್ಕೆ ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಸಂಘದೊಟ್ಟಿಗೆ ಕೈಜೋಡಿಸಬೇಕು. ನೌಕರರ ಪರವಾಗಿ ನಿಲ್ಲಬೇಕಿದೆ ಎಂದು ಹೇಳಿದರು.

ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಚಂದ್ರಶೇಖರ್. ಎಚ್.ವಿ, ಕಾರ್ಯದರ್ಶಿ ಪ್ರಸನ್ನ ಕುಮಾರ್, ಖಜಾಂಚಿ ಚಂದ್ರೇಗೌಡ, ಗೌರವಾಧ್ಯಕ್ಷ ಶಿವ ಕೆಂಪೇಗೌಡ, ಹಿರಿಯ ಉಪಾಧ್ಯಕ್ಷ ವಿಜಯಕುಮಾರ್ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು.