ಸಾರಾಂಶ
ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ೨೦೨೪-೨೯ನೇ ಸಾಲಿನ ನಿರ್ದೇಶಕರ ಸ್ಥಾನಗಳ ಆಯ್ಕೆಯ ಚುನಾವಣೆ ಶನಿವಾರ ತುರುಸಿನಿಂದ ನಡೆಯಿತು.ಜಿಲ್ಲಾ ಘಟಕದ ಒಟ್ಟು ೬೪ ಸ್ಥಾನಗಳ ಪೈಕಿ ೩೭ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ೬ ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ, ಉಳಿದ ೨೧ ಸ್ಥಾನಗಳಿಗೆ ೪೬ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಶನಿವಾರ ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯ ವರೆಗೆ ಮತದಾನ ನಡೆಯಿತು.ಜಿಲ್ಲಾ ಕೇಂದ್ರದಲ್ಲಿ ಒಟ್ಟು ೧೭ ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯಿತು. ಜಿಲ್ಲಾ ನೌಕರರ ಭವನ ಹಾವೇರಿ ಇಲ್ಲಿ ೭ ಮತಕೇಂದ್ರಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೦೩ ರಲ್ಲಿ ೫ ಮತಕೇಂದ್ರಗಳು ಹಾಗೂ ಜ್ಞಾನಗಂಗಾ ಶಿಕ್ಷಣ ಸಮಿತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗೆಳೆಯರ ಬಳಗ ಹಾವೇರಿ ಇಲ್ಲಿ ೫ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಆಯಾ ಇಲಾಖೆಯ ಸಿಬ್ಬಂದಿಗಳು ತಮಗೆ ಬೇಕಾದವರ ಗುರುತಿಗೆ ಮತಚಲಾಯಿಸಿದರು. ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ೮೩೦ ಮತಗಳನ್ನು ಹೊಂದಿದ್ದು, ಸಮಾನ ಮನಸ್ಕರ ತಂಡ, ಸಮನ್ವಯ ಶಿಕ್ಷಕರ ಸಮಿತಿ ಎಂಬ ಎರಡು ತಂಡಗಳನ್ನು ರಚಿಸಿಕೊಂಡು ತುರುಸಿನಿಂದ ಚುನಾವಣೆ ನಡೆಸಿದರು. ಅದೃಷ್ಟ ಪರೀಕ್ಷೆಗಿಳಿದ ನೌಕರರು: ಪ್ರಮುಖವಾಗಿ ನೌಕರರ ಸಂಘದ ಹಾಲಿ ಅಧ್ಯಕ್ಷ ಅಮೃತಗೌಡ ಪಾಟೀಲ ಅವರು ಕಂದಾಯ ಇಲಾಖೆಯಿಂದ ಸ್ಪರ್ಧಿಸಿದ್ದು, ಅವರಿಗೆ ಆರ್.ಎಸ್. ಬೋರೊಜಿ, ಎಸ್.ಎಚ್. ಯರೇಮನಿ ಪ್ರತಿಸ್ಪರ್ಧಿಗಳಾಗಿದ್ದಾರೆ. ಕೃಷಿ ಇಲಾಖೆಯ ತಾಂತ್ರಿಕೇತರ ವೃಂದದಿಂದ ಚಂದ್ರಶೇಖರ ಸಂಗಣ್ಣನವರ, ಎಸ್.ಬಿ. ಚಕ್ರಸಾಲಿ, ಕಂದಾಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ವಿಭಾಗದಲ್ಲಿ ಪ್ರಕಾಶ ಉಜ್ಜಿನಿ, ಮಲ್ಲಿಕಾರ್ಜುನ ಹುಣಸಿಕಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಉಳಿದ ವೃಂದ ವಿಭಾಗದಿಂದ ಅಕ್ಷಯ ಪಾಟೀಲ, ಪ್ರಕಾಶಕುಮಾರ ದುಂಡಶಿ, ಅಬಕಾರಿ ಇಲಾಖೆಯಿಂದ ಕೆ.ಚಂದ್ರಶೇಖರ, ಹನುಮಂತಪ್ಪ ಬಾರಕೇರ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಶಂಕರ ನಾಯ್ಕ, ಶಿವಲಿಂಗಸ್ವಾಮಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ರೇಣುಕಾ ತಳವಾರ, ಹೊನ್ನಮ್ಮ ಬಸವನಾಯ್ಕರ್, ಡಿಎಚ್‌ಒ ಕಚೇರಿಯ ಜಿಲ್ಲಾ ಕೇಂದ್ರದ ಆಡಳಿತ ವಿಭಾಗದಿಂದ ಅಶೋಕ ಎಸ್, ಸಿದ್ದಣ್ಣ ಯಲಿಗಾರ, ಜಿಲ್ಲಾ ಅನುಷ್ಠಾನ ಅಧಿಕಾರಿಗಳ ಕಚೇರಿಯಿಂದ ಚಂದ್ರಶೇಖರ ಹಿತ್ತಲಮನಿ, ತುಕಾರಮ್ ಮಾಳದಕರ, ಮಲ್ಲಿಕಾರ್ಜುನ್ ಮಡಿವಾಳರ, ವೈದ್ಯಕೀಯ ಶಿಕ್ಷಣ ಇಲಾಖೆಯಿದ ಜಯಮ್ಮ ಅಗಡಿ, ಎಂ.ಆರ್. ರಾಜೇಸಾಬನವರ, ಬಸವರಾಜ ಕಮತದ, ಗ್ರಂಥಾಲಯ ಇಲಾಖೆಯಿಂದ ಎಂ.ಡಿ. ಲಿಂಗಾಪುರ, ಬಿದ್ದಾಡಪ್ಪ ಮಾಳನಾಯಕ, ಮೊಹಮ್ಮದ ಇಕ್ಬಾಲ್ ಅಮ್ಮಿನಭಾವಿ, ಸರ್ಕಾರಿ ಪ್ರಾಥಮಿಕ ಶಾಲೆಯ ವಿಭಾಗದಿಂದ ಎಂ.ಎ. ಎಣ್ಣಿ, ಎಂ.ಜಿ. ದೊಡ್ಡಗೌಡ್ರ, ಮಂಜುನಾಥ ಕಮ್ಮಾರ, ಮಲ್ಲೇಶ ಕರಿಗಾರ, ಚಂದ್ರಪ್ಪ ಕೋಣನತಂಬಿಗಿ, ಮಲ್ಲಿಕಾರ್ಜುನಸ್ವಾಮಿ ಹರವಿಮಠ, ಲೋಕೇಶ ವಡ್ಡರ, ಸುನಿತಾ ಪೂಜಾರ, ಸರ್ಕಾರಿ ಪ್ರೌಢ ಶಾಲೆಯ ವಿಭಾಗದಿಂದ ಕಲ್ಪಾದಿ ಪ್ರಕಾಶ, ವಿನಾಯಕ ಗಡ್ಡದ, ದೊಡ್ಮನಿ ನಿಜಾಮುದ್ದಿನ, ನಾರಾಯಣ ಯತ್ನಳ್ಳಿ, ಪುಷ್ಪಾ ಬಗಾಡೆ, ಪ್ರವೀಣ ಮಾಲತೇಶ ಕರ್ಜಗಿ, ಮರಡೂರ ಫಕ್ಕಿರಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್ ವತಿಯಿಂದ ಮನೋಹರ ಯು., ರವಿಕುಮಾರ ಅಂಬೋರೆ, ರಾಮಪ್ಪ ಲಮಾಣಿ ಸ್ಪರ್ಧಿಸಿದ್ದಾರೆ. ಅವಿರೋಧ ಆಯ್ಕೆಯಾದ ನಿರ್ದೇಶಕರು: ಕೃಷಿ ಇಲಾಖೆಯ ತಾಂತ್ರಿಕ ವೃಂದದಿಂದ ಶಿವಲಿಂಗಪ್ಪ ವಿ.ಕೆ., ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ನವೀನ್ ಬೆನ್ನೂರ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿ.ಎಸ್. ಪಾಟೀಲ, ಆಹಾರ ಇಲಾಖೆಯಿಂದ ಚನ್ನಬಸಪ್ಪ ಸಪ್ಪಿನ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಿಂದ ಶಂಕರ್ ಪವಾರ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವೃಂದದಿಂದ ನಾರಾಯಣ ವೈ. ನಿಕ್ಕಂ, ಸಹಕಾರ ಇಲಾಖೆಯಿಂದ ಸಂಜಯ್ ಸುಣಗಾರ, ಪಿಡಬ್ಲ್ಯೂಡಿ ಇಲಾಖೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮೆಡ್ಲೇರಿ, ಪಿಆರ್‌ಇಡಿಯಿಂದ ರವಿಕುಮಾರಸ್ವಾಮಿ, ಜಲಸಂಪನ್ಮೂಲ ಇಲಾಖೆಯಿಂದ ರಾಮಕೃಷ್ಣ, ಜಿಲ್ಲಾ ಪಂಚಾಯಿತಿಯಿಂದ ಇಮಾಮಹುಸೇನ್ ಮುಲ್ಲಾ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಕಾಶ ಲಮಾಣಿ, ದಾವಲಸಾಬ ಕಮಗಾಲ, ಸಮಾಜ ಕಲ್ಯಾಣ ಇಲಾಖೆಯಿಂದ ಆಂಜನೇಯ ಹುಲ್ಲಾಳ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ಗಿರೀಶ ರೋಣಿಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮುನಿಶ್ವರ ಚೂರಿ, ಅರಣ್ಯ ಇಲಾಖೆಯಿಂದ ಸಂತೋಷಕುಮಾರ ಪೂಜಾರ, ಆರೋಗ್ಯ ಇಲಾಖೆಯಿಂದ ಅಣ್ಣಪ್ಪ ತೋಟದ, ಕೆ.ಎನ್. ಸಿದ್ದಿ, ಪಿ.ಎನ್. ಪಾಟೀಲ, ಆಯುಷ್ ಇಲಾಖೆಯಿಂದ ಶಂಕರ್ ಓಲೇಕಾರ, ತೋಟಗಾರಿಕೆ ಇಲಾಖೆಯಿಂದ ಜಗದೀಶ ಕರಿಗಾರ, ಕೈಗಾರಿಕೆ ಇಲಾಖೆಯಿಂದ ಅಶೋಕ ಪ್ಯಾಟಿ, ವಾರ್ತಾ ಇಲಾಖೆಯಿಂದ ಭಾರತಿ ಭಜಂತ್ರಿ, ಸರ್ಕಾರಿ ವಿಮಾ ಇಲಾಖೆಯಿಂದ ಆನಂದ್ ತೋಳಮಟ್ಟಿ, ಪಪೂ ಇಲಾಖೆಯಿಂದ ವಿರೇಶ ಹಿತ್ತಲಮನಿ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಜಯಪ್ರಕಾಶ ಹೊನ್ನತ್ತೇಪ್ಪನವರ, ಮುದ್ರಾಂಕ ಇಲಾಖೆಯಿಂದ ನವೀನ್‌ಕುಮಾರ್, ಸಾರಿಗೆ ಇಲಾಖೆಯಿಂದ ಶ್ರೀಪಾದ ಬ್ಯಾಳಿಯವರ, ರೇಷ್ಮೆ ಇಲಾಖೆಯಿಂದ ಪರಶುರಾಮ ಗೊಣೆಮ್ಮನವರ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಶ್ರೀಧರ ಪಕ್ಕೇದ, ಭೂಮಾಪನ ಇಲಾಖೆಯಿಂದ ಶಿವನಗೌಡ ತೋಟದ, ಖಜಾನೆ ಇಲಾಖೆಯಿಂದ ವಿರೇಶ ಹಿರೇಮಠ, ಧಾರ್ಮಿಕ ದತ್ತಿ ಇಲಾಖೆಯಿಂದ ಬಸವಕುಮಾರ ಅಣ್ಣೀಗೇರಿ, ನ್ಯಾಯಾಂಗ ಇಲಾಖೆಯಿಂದ ಸಂಗಪ್ಪ ಹಾವಣಗಿ, ಸುರೇಶ ಬೇನಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಲ್ಲಿಕಾರ್ಜುನ ಗಾಣಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಚ್.ಪಾಟೀಲ್ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಶೇಖರ ಹಂಚಿನಮನಿ ಕಾರ್ಯನಿರ್ವಹಿಸಿದರು.೬ ಇಲಾಖೆಯ ನಿರಾಸಕ್ತಿ: ೬ ಇಲಾಖೆಯ ಮೀನುಗಾರಿಕೆ ಇಲಾಖೆ, ಔಷಧಿ ನಿಯಂತ್ರಣ ಇಲಾಖೆ-ಸರ್ಕಾರಿ ಕಾರ್ಮಿಕರ ವಿಮಾ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಗೃಹ ರಕ್ಷಕ, ಅಗ್ನಿಶಾಮಕ ಇಲಾಖೆ, ಎನ್‌ಸಿಸಿ, ಕಾರಾಗೃಹ ಇಲಾಖೆ ಮತ್ತು ಸೈನಿಕರ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಿರಾಸಕ್ತಿ ವಹಿಸಿ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ.