ಸರ್ಕಾರದ ಸೌಲಭ್ಯ ಬಡಮಕ್ಕಳಿಗೆ ದೊರೆಯುವಂತಾಗಬೇಕು: ಜಿ.ಎ.ಲೋಕೇಶ್

| Published : Nov 03 2025, 01:30 AM IST

ಸರ್ಕಾರದ ಸೌಲಭ್ಯ ಬಡಮಕ್ಕಳಿಗೆ ದೊರೆಯುವಂತಾಗಬೇಕು: ಜಿ.ಎ.ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜಕ್ಕನಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ನಂತರ ಪಾಂಡವಪುರ ಬಿಇಒ ಆಗಿ ಕರ್ತವ್ಯ ಈಗ ಮಂಡ್ಯ ಜಿಲ್ಲೆಯಲ್ಲಿ ಉಪ ನಿರ್ದೇಶಕನಾಗಿ ಸೇವೆ ಮಾಡುವ ಭಾಗ್ಯವನ್ನು ಭಗವಂತ ಚೆಲುವನಾರಾಯಣಸ್ವಾಮಿಯೇ ಕರುಣಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಜಕ್ಕನಹಳ್ಳಿಗೆ ಶಿಕ್ಷಣ ಇಲಾಖೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿದ್ದು, ಸರ್ಕಾರದ ಸೌಲಭ್ಯ ಶೀಘ್ರ ಬಡಮಕ್ಕಳಿಗೆ ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾ ಉಪನಿರ್ದೇಶಕ ಜಿ.ಎ.ಲೋಕೇಶ್ ಸಲಹೆ ನೀಡಿದರು. ಜಕ್ಕನಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಆರಂಭಿಸಿ ಈಗ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಕರಾಗಿ ಸೇವೆ ಮಾಡುತ್ತಿರುವ ಲೋಕೇಶ್ ಕನ್ನಡ ರಾಜ್ಯೋತ್ಸವದಂದು ಶಾಲೆಗೆ ಭೇಟಿ ನೀಡಿದ್ದಾಗ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಶಿಕ್ಷಕವೃಂದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಚೆಲುವನಾರಾಯಣಸ್ವಾಮಿ ನನಗೆ ಮನೆದೇವರು. ಜಕ್ಕನಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ನಂತರ ಪಾಂಡವಪುರ ಬಿಇಒ ಆಗಿ ಕರ್ತವ್ಯ ಈಗ ಮಂಡ್ಯ ಜಿಲ್ಲೆಯಲ್ಲಿ ಉಪ ನಿರ್ದೇಶಕನಾಗಿ ಸೇವೆ ಮಾಡುವ ಭಾಗ್ಯವನ್ನು ಭಗವಂತ ಚೆಲುವನಾರಾಯಣಸ್ವಾಮಿಯೇ ಕರುಣಿಸಿದ್ದಾನೆ ಎಂದರು.

ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಅನುಷ್ಠಾನಗೊಳಿಸಿ 4 ಕೋಟಿ ರು. ಮಂಜೂರಾಗಿದೆ. ಎಲ್.ಕೆ.ಜಿಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ಶಾಲೆಗೆ ದಾಖಲಾದ ಮಕ್ಕಳು ಒಂದೇ ಕಡೆ ಯಾವುದೇ ಖರ್ಚಿಲ್ಲದೆ ಗುಣಾತ್ಮಕ ಶಿಕ್ಷಣ ಪಡೆಯಬೇಕೆಂಬುದು ಸಚಿವರ ಆಶಯವಾಗಿದೆ. ಅಗತ್ಯವಿರುವ ಎಲ್ಲಾ ಸೌಕರ್ಯ ಕಲ್ಪಿಸಲು ಶಿಕ್ಷಕರು ಶೀಘ್ರ ಸ್ಥಳ ಗುರುತಿಸಿ ಇಲಾಖೆ ಆಶಯವನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪ್ರಭಾರ ಮುಖ್ಯಶಿಕ್ಷಕ ಜಯಶೇಖರ ಆರಾಧ್ಯ, ನಿವೃತ್ತ ಮುಖ್ಯಶಿಕ್ಷಕ ಕೆಂಪುರಾಜ್, ಉಪನಿರ್ದೇಶಕರ ಕಚೇರಿ ಶ್ರೀಧರ್, ರುದ್ರೇಶ್, ಶಾಲಾಭಿವೃದ್ಧಿ ಸಮಿತಿ ಅಮೃತಿ ಶಂಕರ್, ಜೆ.ಬಿ.ರುದ್ರೇಶ್ ಮತ್ತಿತತರು ಭಾಗವಹಿಸಿದ್ದರು. ನಂತರ ಮೇಲುಕೋಟೆಗೆ ಆಗಮಿಸಿದ ಉಪನಿರ್ದೇಶಕ ಲೋಕೇಶ್ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿಯವರ ಆಶೀರ್ವಾದ ಪಡೆದರು.