Government has given death warrants to officials: Raghavendra Kidi
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರ ಕಾಂಗ್ರೆಸ್ ಅಧಿಕಾರಿಗಳಿಗೆ ಮರಣ ಶಾಸನ ಕೊಟ್ಟ ಸರ್ಕಾರ. ಚಂದ್ರಶೇಖರ್ ಸೇರಿ ಬೇರೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರೋದನ್ನು ನೋಡಿದ್ದೇವೆ. ವಾಲ್ಮೀಕಿ ನಿಗಮದ ಪಾಪದ ಹಣ ಹೈಕಮಾಂಡ್‌ಗೂ ತಲುಪಿದೆ. ಹೆಚ್ಚು ಕಡಿಮೆಯಾದ್ರೆ ಸರ್ಕಾರವೇ ಪತನ ಆಗುತ್ತೆ ಅಂತ ಹೇಳಿ ನಾಗೇಂದ್ರರನ್ನು ಪೋಷಿಸುವ ಕೆಲಸ ಆಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರರನ್ನು ಅಷ್ಟು ಅರ್ಜೆಂಟ್ ಆಗಿ ಸಚಿವ ಸಂಪುಟಕ್ಕೆ ಸೇರಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಇವರೇ ಕೊಟ್ಟ ಪಂಚ ಗ್ಯಾರಂಟಿಯಲ್ಲಿ ಲೂಟಿ ಮಾಡುವ ಕೆಲಸ ಆಗಿದೆ. ಡಿ.ಕೆ.ಶಿವಕುಮಾರ್ ಮತದಾರರ ಹಕ್ಕಿನ ಗೌರವ ಕಾಪಾಡಬೇಕು. ಭ್ರಷ್ಟ ಮಂತ್ರಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಯತೀಂದ್ರ ಅವರಿಗೆ ನಾಗರ ಪಂಚಮಿ ಹಬ್ಬ ಮಾಡಿದ ನೆನಪಿತ್ತೋ ಏನೋ ಆಗಾಗಿ ಆರ್‌ಎಸ್‌ಎಸ್ ಸಾವಿರ ಹೆಡೆಗಳ ವಿಷ ಸರ್ಪ ಎಂದು ಹೇಳಿದ್ದಾರೆ. ಸರ್ಪವನ್ನು ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಈಗ ತಾನೇ ಕಣ್ಬಿಡುತ್ತಿದ್ದೀರಾ, ಮಾಜಿ ಸಿಎಂ ಮಗನಾಗಿ ಒಳ್ಳೆಯ ದಿಕ್ಕಿನಲ್ಲಿ ಬೆಳೆಯುವ ಕೆಲಸ ಮಾಡ್ಬೇಕು. ನಿಮ್ಮ ಸಾಧನೆ ಹೇಳಿಕೊಂಡು ಬೆಳೆಯಬೇಕೇ ಹೊರತು, ಸುಳ್ಳಿನ ರಾಜಕಾರಣ, ವೋಟಿಗಾಗಿ ರಾಜಕಾರಣ ಮಾಡಬಾರದು ಎಂದು ತಿಳಿ ಹೇಳಿದರು.ಬಿ.ಕೆ. ಹರಿಪ್ರಸಾದ್ ಅವರ ಮಾತುಕತೆ ಏನು ಅಂತ ಎಲ್ಲರಿಗೂ ಗೊತ್ತಿರೋ ವಿಚಾರ ಸೋನಿಯಾಗಾಂಧಿ ಅವರು ವಂದೇ ಮಾತರಂಗೆ ಮಾಡಿದ ಅಪಮಾನದ ಬಗ್ಗೆ ಎರಡು ಹೇಳಿಕೆ ಕೊಟ್ರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ರೀತಿಯ ಹೇಳಿಕೆಗಳು ನಿಮಗೆ ಗೌರವ ತರಲ್ಲ ಎಂದರು.
ಶಿಕಾರಿಪುರ ಬಂದ್ ವಿಚಾರ:ಶಿಕಾರಿಪುರ, ಶಿರಾಳಕೊಪ್ಪದಲ್ಲಿ ಗೋ ಕಳ್ಳತನಗಳು ಹೆಚ್ಚಾಗಿದೆ. ಇದನ್ನು ಖಂಡಿಸಿ ನಮ್ಮ ಬಜರಂಗದಳ ಕಾರ್ಯಕರ್ತರಿಂದ ಶಿಕಾರಿಪುರ ಬಂದ್‌ಗೆ ಕರೆ ಕೊಡಲಾಗಿದೆ. ಬಂದ್‌ಗೆ ನಮ್ಮ ಎಲ್ಲಾ ಸಂಘಟನೆಗಳು ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
