ಮಾತಿಗೆ ತಪ್ಪಿದ್ದಕ್ಕೆ ತಿಂಗಳಿಗೊಮ್ಮೆ ಸರ್ಕಾರಿ ಆಸ್ಪತ್ರೇಲಿ ಸೇವೆ
2 Min read
Author : KannadaprabhaNewsNetwork
Published : Oct 04 2023, 01:00 PM IST
Share this Article
FB
TW
Linkdin
Whatsapp
Image Credit: KP
ಪತಿಯ ಸುಪರ್ದಿಗೆ ಅಪ್ರಾಪ್ತ ಪುತ್ರಿಯನ್ನು ಒಪ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ವೈದ್ಯಯೊಬ್ಬರು ಶುಕ್ರವಾರ ಹೈಕೋರ್ಟ್ ನ ಬೇಷರತ್ ಕ್ಷಮೆ ಕೋರಿದ್ದು ಮಾತ್ರವಲ್ಲದೆ, ನ್ಯಾಯಾಂಗ ನಿಂದನೆ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಮಾಸದಲ್ಲಿ ಒಂದು ದಿನದಂತೆ ಮುಂದಿನ ಆರು ತಿಂಗಳವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಕೋರ್ಟ್ ಆದೇಶವಿದ್ದರೂ ಪುತ್ರಿಯನ್ನು ಪತಿಗೆ ನೀಡದ ವೈದ್ಯೆ ಕ್ಷಮೆ ಕೇಳಿ ಸಮುದಾಯ ಸೇವೆ ಮುಚ್ಚಳಿಕೆ ಕೊಟ್ಟ ವೈದ್ಯೆ ಕನ್ನಡಪ್ರಭ ವಾರ್ತೆ ಬೆಂಗಳೂರು ಪತಿಯ ಸುಪರ್ದಿಗೆ ಅಪ್ರಾಪ್ತ ಪುತ್ರಿಯನ್ನು ಒಪ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ವೈದ್ಯಯೊಬ್ಬರು ಶುಕ್ರವಾರ ಹೈಕೋರ್ಟ್ ನ ಬೇಷರತ್ ಕ್ಷಮೆ ಕೋರಿದ್ದು ಮಾತ್ರವಲ್ಲದೆ, ನ್ಯಾಯಾಂಗ ನಿಂದನೆ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಮಾಸದಲ್ಲಿ ಒಂದು ದಿನದಂತೆ ಮುಂದಿನ ಆರು ತಿಂಗಳವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ವೈದ್ಯೆ ನ್ಯಾಯಾಲಯದ ಆದೇಶದ ಹೊರತಾಗಿಯೂ ತಮ್ಮ ಪುತ್ರಿಯನ್ನು ಪತಿಯ ಸುಪರ್ದಿಗೆ ವಹಿಸಿರಲಿಲ್ಲ. ಈ ಬಗ್ಗೆ ನ್ಯಾಯಾಲಯವೇ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು, ಇದು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆಗೆ ಖುದ್ದು ಹಾಜರಾದ ವೈದ್ಯೆ ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಕೋರಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದರು. ಜತೆಗೆ, ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು. ಆ ಮಾತನ್ನು ಸಾಬೀತುಪಡಿಸಲು ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಮುಖ್ಯಸ್ಥರು, ಸಿವಿಲ್ ಸರ್ಜನ್ ಅಥವಾ ನಿರ್ದೇಶಕರ ಪೂರ್ವಾನುಮತಿ ಪಡೆದು ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಸಹ ಬರೆದುಕೊಟ್ಟರು. ಆ ಮುಚ್ಚಳಿಕೆ ಮತ್ತು ಬೇಷರತ್ ಕಮ್ಷಾಪಣೆ ಪ್ರಮಾಣ ಪತ್ರವನ್ನು ಒಪ್ಪಿಕೊಂಡ ವಿಭಾಗೀಯ ಪೀಠ, ವೈದ್ಯೆ ಮೇಲಿನ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಟ್ಟಿತು. ------ ಅಲ್ಲದೆ, ಸಮುದಾಯ ಸೇವೆ ಸಲ್ಲಿಸುವ ಸಂಬಂಧ ಆರೋಪಿ ವೈದ್ಯೆಯು ನಗರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ. ಹಾಗೆಯೇ, ಆರು ತಿಂಗಳ ಕಳೆದ ನಂತರ ಆರೋಪಿ ವೈದ್ಯೆ, ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನಲರ್ ಅವರಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರೋಪಿ ವೈದ್ಯೆಯು ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ದಂಪತಿಗೆ 8 ವರ್ಷದ ಪುತ್ರಿ ಇದ್ದು, ಆಕೆ ತಾಯಿಯ ಬಳಿಯೇ ಇದ್ದಳು. ಈ ನಡುವೆ ತಾತ್ಕಾಲಿಕವಾಗಿ ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ವೈದ್ಯೆಗೆ ಹೈಕೋರ್ಟ್ 2023ರ ಜುಲೈನಲ್ಲಿ ನಿರ್ದೇಶಿಸಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅಲ್ಲದೆ, ಸಮುದಾಯ ಸೇವೆ ಸಲ್ಲಿಸುವ ಸಂಬಂಧ ಆರೋಪಿ ವೈದ್ಯೆಯು ನಗರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ. ಹಾಗೆಯೇ, ಆರು ತಿಂಗಳ ಕಳೆದ ನಂತರ ಆರೋಪಿ ವೈದ್ಯೆ, ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನಲರ್ ಅವರಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರೋಪಿ ವೈದ್ಯೆಯು ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ದಂಪತಿಗೆ 8 ವರ್ಷದ ಪುತ್ರಿ ಇದ್ದು, ಆಕೆ ತಾಯಿಯ ಬಳಿಯೇ ಇದ್ದಳು. ಈ ನಡುವೆ ತಾತ್ಕಾಲಿಕವಾಗಿ ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ವೈದ್ಯೆಗೆ ಹೈಕೋರ್ಟ್ 2023ರ ಜುಲೈನಲ್ಲಿ ನಿರ್ದೇಶಿಸಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.