ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ: ಪೇಜಾವರ ಶ್ರೀ

| Published : Apr 08 2024, 01:04 AM IST

ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಒಂದು ಕೋಮಿನ, ಒಂದು ಗುಂಪಿನ ಸ್ವತ್ತಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಮಠದ ಶ್ರೀಗಳು ಅಸಮಾಧಾನ ಹೊರಹಾಕಿದರು.

ವಿಜಯಪುರ: ಸರ್ಕಾರ ಒಂದು ಕೋಮಿನ, ಒಂದು ಗುಂಪಿನ ಸ್ವತ್ತಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಮಠದ ಶ್ರೀಗಳು ಅಸಮಾಧಾನ ಹೊರಹಾಕಿದರು. ಹನುಮಾನ ಚಾಲಿಸಾ ಹಾಕಿ ಹಲ್ಲೆಗೊಳಗಾದ ಮುಕೇಶ ಮೇಲೆ ಕೇಸ್ ದಾಖಲಾದ ವಿಚಾರಕ್ಕೆ ಸಂಬಂಧಿಸಿ ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅದು ಯಾವ ಗುಂಪಾದರೂ ಸರಿ, ಸರ್ಕಾರ ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರ ಇದ್ದವರ ಕರ್ತವ್ಯವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪೇಜಾವರ ಶ್ರೀಗಳು ಕಿವಿಮಾತು ಹೇಳಿದರು. ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕದೇ ಎಲ್ಲ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯಬೇಕು ಎಂದರು.ರಾಮ ನವಮಿ: ಅಯೋಧ್ಯಗೆ ಬರಬೇಡಿ:

ರಾಮ ನವಮಿಯ ವೇಳೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬರಬೇಡಿ ಎಂದು ಪೇಜಾವರ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ. ನಗರದ ಕೃಷ್ಣ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಭು ಶ್ರೀರಾಮನ ಭಕ್ತರೆಲ್ಲ ತಮ್ಮ ತಮ್ಮ ಊರುಗಳಲ್ಲಿ ರಾಮ ನವಮಿ ಆಚರಿಸಿ. ನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು ಪ್ರತಿ ಗಂಟಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ರಾಮ ನವಮಿಯಂದು ಅಯೋಧ್ಯೆಗೆ ಇನ್ನಷ್ಟು ಭಕ್ತರು ಆಗಮಿಸಿದಲ್ಲಿ ದರ್ಶನಕ್ಕೆ ತೊಂದರೆ ಉಂಟಾಗಲಿದೆ ಎಂದರು. ಹೀಗಾಗಿ ತಮ್ಮ ಊರಿನ ಮಂದಿರ, ಮನೆಗಳಲ್ಲೆ ರಾಮ ನವಮಿ ಆಚರಿಸಿ ಎಂದು ಪೇಜಾವರ ಶ್ರೀ ಸಲಹೆ ನೀಡಿದರು.