ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನಲ್ಲಿ ಒಂದು ಕೋಟಿ ರು. ವಿಶೇಷ ಅನುದಾನದಲ್ಲಿ ಕಟ್ಟೆಪುಣೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನಲ್ಲಿ ಒಂದು ಕೋಟಿ ರು. ವಿಶೇಷ ಅನುದಾನದಲ್ಲಿ ಕಟ್ಟೆಪುಣೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.ಈ ಸಂದರ್ಭ ಮಾತನಾಡಿದ ಶಾಸಕರು, ಈ ಭಾಗಕ್ಕೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಹಾಗೂ ಸೇತುವೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಮತ್ತು ಬಿಜೆಪಿ ಪ್ರಮುಖರ ಬಹು ವರ್ಷದ ಬೇಡಿಕೆಯಾಗಿತ್ತು. ಇಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲೋಕೋಪಯೋಗಿ ಇಲಾಖೆಯಿಂದ ಸುಮಾರು 1 ಕೋಟಿ ರು.ಗಳ ಕಾಮಗಾರಿಯನ್ನು ಈ ಭಾಗದಲ್ಲೇ ಕೈಗೆತ್ತಿಕೊಂಡಿದ್ದೇವೆ ಎಂದರು.ನಿಕಟಪೂರ್ವ ಪಾಲಿಕೆ ಸದಸ್ಯರಾದ ವೀಣಾಮಂಗಳ, ಪ್ರಮುಖರಾದ ಲಲ್ಲೇಶ್, ಕೀರ್ತೇಶ್, ರಾಮ್ ಪ್ರಸಾದ್, ಸುಜಾತ, ಪ್ರಾಣೇಶ್, ಸುರೇಂದ್ರ, ಮಧು ಕುಮಾರ್, ಸುಮತಿ, ನಾಗೇಶ್, ಸೋಹನ್, ಮೋಹನ್ ದಾಸ್ ಅಡ್ಯಂತಾಯ, ಪುಷ್ಪರಾಜ್, ಮನೋಹರ್, ಮನೋಜ್ ಪೂಜಾರಿ, ರಾಜೇಶ್ ಮತ್ತಿತರರಿದ್ದರು.