ಯಾದಗಿರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ನರ್ಸಿಂಗ್‌ ಕೋರ್ಸ್‌ ಆರಂಭ

| Published : Oct 27 2024, 02:04 AM IST

ಯಾದಗಿರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ನರ್ಸಿಂಗ್‌ ಕೋರ್ಸ್‌ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

Government Nursing Course started in Yadagiri Medical College

- 2024-25 ನೇ ಸಾಲಿನಿಂದ 100 ಸೀಟುಗಳ ಬಿಎಸ್ಸಿ ನರ್ಸಿಂಗ್‌ ಕೋರ್ಸಿಗೆ ಅನುಮತಿ

- ರಾಜೀವಗಾಂಧಿ ಆರೋಗ್ಯ ವಿವಿ ಪ್ರಸ್ತಾವನೆ : ಯಿಮ್ಸ್‌ನಲ್ಲಿ ಒಪ್ಪಿಗೆ ಸೂಚಿಸಿದ ಸರ್ಕಾರ

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್- ಯಾದಗಿರಿ ಇನ್ಸಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸೆಸ್‌) ನಲ್ಲಿ ಹೊಸದಾಗಿ ಸರ್ಕಾರಿ ಬಿಎಸ್ಸಿ ನರ್ಸಿಂಗ್‌ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಇದೇ 2024-25ನೇ ಸಾಲಿನಿಂದ 100 ಸೀಟುಗಳ ಪ್ರವೇಶ ಮಿತಿಯೊಂದಿಗೆ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಈಗಾಗಲೇ ವೈದ್ಯಕೀಯ ಕಾಲೇಜು ಆರಂಭವಾಗಿದ್ದು, ಬಿಎಸ್ಸಿ ನರ್ಸಿಂಗ್ ಅನುಮತಿಯೊಂದಿಗೆ ಈ ಭಾಗದ ವೈದ್ಯಕೀಯ ಲೋಕದಲ್ಲಿ ಹೆಚ್ಚಿನ ಸಕಾರಾತ್ಮಕ ನಿರೀಕ್ಷಿಸಬಹುದು. ಕಲಿಕೆಯ ವೇಳೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ, ಹೆರಿಗೆ, ಶಸ್ತ್ರಚಿಕಿತ್ಸೆ ವೇಳೆ ಸಹಕಾರ, ಸಿಬ್ಬಂದಿ ಕೊರತೆ ಹಾಗೂ ರೋಗಿಗಳ ನಿಗಾವಹಿಸುವಿಕೆಯಲ್ಲಿ ಇದು ಅನುಕೂಲಕರ ಆಗಲಿದೆ.

ಮೆಡಿಕಲ್‌ ಕಾಲೇಜು ಸ್ಥಾಪನೆಗಿಂತಲೂ ಮುಂಚೆಯೇ ನರ್ಸಿಂಗ್‌ ಕಾಲೇಜು ಪ್ರಸ್ತಾವನೆ ಅಂತಿಮ ಪ್ರಕ್ರಿಯೆಗಳು ಪೂರ್ಣಗೊಂಡಿದ್ದವಾದರೂ, ಆಗಿದು ಕಾರ್ಯರೂಪಕ್ಕೆ ಬಂದಿರಲಿಲ್ಲ. ರಾಜ್ಯಪಾಲರ ಆದೇಶಾನುಸಾರ, ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ-3 ಆರ್‌. ಮಂಜುನಾಥ್‌ ಅವರು ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭ ಕುರಿತು ಅನುಮತಿಸಿದ್ದಾರೆ.

ಯಾದಗಿರಿಯ ಯಿಮ್ಸ್‌ನಲ್ಲಿ 100 ಸೀಟುಗಳ ಪ್ರವೇಶ ಮಿತಿಯೊಂದಿಗೆ ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ ಆರಂಭಕ್ಕೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅರ್ಜಿ ಸಲ್ಲಿಸಿತ್ತು. ವಿವಿ ನಿಗದಿಪಡಿಸಿದ ನಿಯಮಾವಳಿಗನುಗುಣವಾಗಿ ಬಿಎಸ್ಸಿ ನರ್ಸಿಂಗ್ ಕೋರ್ಸ್‌ ಆರಂಭಕ್ಕೆ ಅನುಮತಿಸಲಾಗಿದೆ. ಸರ್ಕಾರಿ ಕೋಟಾದಲ್ಲಿ ನರ್ಸಿಂಗ್‌ ಕಲಿಯಲು ಬೇರೆಡೆ ತೆರಳುತ್ತಿದ್ದ ಈ ಭಾಗದ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ 371 (ಜೆ) ಸಹ ಹೆಚ್ಚಿನ ಸೀಟುಗಳನ್ನು ಈ ಭಾಗದವರಿಗೆ ಸಿಗಲಿರುವುದು ವಿಶೇಷ.

-----

ಕೋಟ್‌-1 :

ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಈಗ ಯಿಮ್ಸ್‌ನಲ್ಲಿ ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ಗೆ ಅನುಮತಿಸಲಾಗಿದೆ. ಇದು ನಮ್ಮ ಭಾಗದ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಸಹಕಾರಿಯಾಗಲಿದೆ.

ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವರು, ಯಾದಗಿರಿ.

(26ವೈಡಿಆರ್‌11)

--------

ಕೋಟ್‌-2 :

ಚಿಕಿತ್ಸೆ ಹಾಗೂ ರೋಗಿಗಳ ನಿಗಾ ವಹಿಸಲು ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜಿನಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸುವಲ್ಲಿ ಇದು ಸಹಕಾರಿಯಾಗಲಿದೆ. 100 ಸೀಟುಗಳ ಮಿತಿಯೊಂದಿಗೆ 2024-25 ನೇ ಸಾಲಿನಲ್ಲಿ ಕೋರ್ಸ್‌ ಆರಂಭಗೊಳ್ಳಲಿದೆ. : ಡಾ. ಎಂ. ಎಸ್‌. ಪಾಟೀಲ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಯಾದಗಿರಿ.

(26ವೈಡಿಆರ್‌12)

----

26ವೈಡಿಆರ್‌10 : ಯಾದಗಿರಿ ಯಿಮ್ಸ್‌ನಲ್ಲಿ ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ಗೆ ಅನುಮತಿ ಕುರಿತು ಆದೇಶ ಪತ್ರ.