ದಾಬಸ್‍ಪೇಟೆ: ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ರಾಜ್ಯ ಪೌರ, ನೀರು ಸರಬರಾಜು ನೌಕರರ ಮಹಾಸಂಘ ಹಮ್ಮಿಕೊಂಡಿರುವ ಪಾದಯಾತ್ರೆ ನೆಲಮಂಗಲ ಪಟ್ಟಣ ತಲುಪುತ್ತಿದ್ದಂತೆ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆಗಮಿಸಿ ನೌಕರರಿಂದ ಮನವಿ ಪಡೆದು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆಂದು ಭರವಸೆ ನೀಡಿದರು
ದಾಬಸ್‍ಪೇಟೆ: ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ರಾಜ್ಯ ಪೌರ, ನೀರು ಸರಬರಾಜು ನೌಕರರ ಮಹಾಸಂಘ ಹಮ್ಮಿಕೊಂಡಿರುವ ಪಾದಯಾತ್ರೆ ನೆಲಮಂಗಲ ಪಟ್ಟಣ ತಲುಪುತ್ತಿದ್ದಂತೆ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆಗಮಿಸಿ ನೌಕರರಿಂದ ಮನವಿ ಪಡೆದು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆಂದು ಭರವಸೆ ನೀಡಿದರು.
ನಿಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸಚಿವರು, ಸರ್ಕಾರದ ಕಾರ್ಯದರ್ಶಿಗಳು ನಿಮಗೆ ಭರವಸೆ ಈಡೇರಿಸುವ ಬಗ್ಗೆ ಮಾತು ಕೊಟ್ಟಿದ್ದರು ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದೀಗ ಆ ಸಚಿವರು, ಸರ್ಕಾರದ ಕಾರ್ಯದರ್ಶಿಗಳು ಇಬ್ಬರು ಇಲ್ಲ. ನಾನು ಇಲಾಖೆಗೆ ಹೊಸಗಿ ಸಚಿವನಾಗಿ ಬಂದಿದ್ದೇನೆ. ಇಲಾಖೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡು, ನಿಮ್ಮ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಚರ್ಚಿಸಲು ನನಗೂ ಕಾಲಾವಕಾಶ ಕೊಡಿ. ಮಂತ್ರಿಯಾದ 15 ದಿನಕ್ಕೆ ನನ್ನ ಮೇಲೆ ಗದಾಪ್ರಹಾರ ಬೇಡ. ಕಾಂಗ್ರೆಸ್ ಹಿಂದಿನಿಂದಲೂ ಬಡವರ ಪರ ಇರುವ ಸರ್ಕಾರ. ನಿಮ್ಮ ಅಹವಾಲುಗಳನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.ಕಾನೂನು ಪ್ರಕಾರವಾಗಿ ಬೆಂಗಳೂರು ಪಾದಯಾತ್ರೆಗೆ ನಿರ್ಬಂಧವಿದೆ. ಯಾರಿಗೂ ಅವಕಾಶವಿಲ್ಲ, ಇಲ್ಲಿಗೆ ಪಾದಾಯಾತ್ರೆಯನ್ನು ಮೊಟಕುಗೊಳಿಸಿ. ನಾನು ಮುಂದಿನ ವಾರ ಪ್ರಮುಖರನ್ನು ಕರೆದು ಸಭೆ ನಡೆಸುತ್ತೇನೆ. ನಮ್ಮ ಕಾರ್ಯದರ್ಶಿ, ಅಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳನ್ನು ಸಹ ಕರೆಯುತ್ತೇನೆ. ಆ ಸಭೆಯಲ್ಲೇ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಹಿಡಿಯುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಪರವಾಗಿ ನೆಲಮಂಗಲಕ್ಕೆ ಬಂದು ಪೌರನೌಕರರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರ ಪಡೆದಿದ್ದೇನೆ. ಪೌರನೌಕರರು ವೇತನದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕೆಂದು ಮನವಿ ಮಾಡಿದ್ದು, ಈ ಬಗ್ಗೆ ಗಮನಹರಿಸಿ ನೇರ ವೇತನ ಪಾವತಿ, ನೇಮಕಾತಿ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಖಂಡಿತಾ ಬಗೆಹರಿಸುತ್ತೇವೆ ಎಂದರು.ವಿರೋಧ ಪಕ್ಷಗಳು ಟೀಕೆ ಮಾಡುವುದನ್ನು ಬಿಟ್ಟು, ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಬದಲು ಕೇಂದ್ರದ ಬಳಿ ನಿಯೋಗ ಕರೆದುಕೊಂಡು ಹೋಗಿ ಮನವಿ ಮಾಡಲಿ. ನಾವು 2,500 ಕೊಟ್ಟು ರೈತರಿಗೆ ಸಹಕರಿಸುತ್ತಿದ್ದೇವೆ. ಕೇಂದ್ರದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರೈತರ ಸಾಲ ಮನ್ನಾ ಮಾಡಿದ್ದರು. ಕೇಂದ್ರ ಸಹಕರಿಸಿದರೆ ಮತ್ತಷ್ಟು ಪರಿಹಾರ ಕೊಡ್ತೀವಿ ಎಂದರು.
ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಪ್ರತಿಕ್ರಿಯಿಸಿ, ಕಳೆದ ನಾಲ್ಕು ದಿನಗಳಿಂದ ತುಮಕೂರಿನಿಂದ ಬೆಂಗಳೂರಿಗೆ ನಮ್ಮ ಬೇಡಿಕೆಗಳನ್ನು ಹೊತ್ತು ಪಾದಾಯಾತ್ರೆ ಮಾಡುತ್ತಿದ್ದೇವೆ. ಇಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅವರು ನಮ್ಮ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.ಪೋಟೋ 7 :
ರಾಜ್ಯ ಪೌರ, ನೀರು ಸರಬರಾಜು ನೌಕರರ ಮಹಾಸಂಘ ಹಮ್ಮಿಕೊಂಡಿರುವ ಪಾದಯಾತ್ರೆ ನೆಲಮಂಗಲ ತಲುಪುತ್ತಿದ್ದಂತೆ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆಗಮಿಸಿ ಪಾದಯಾತ್ರಿಗಳಿಂದ ಮನವಿ ಪತ್ರ ಪಡೆದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.