‘ಕನ್ನಡ ಪಾಠ ಶಾಲೆ ದುಬೈ’ ಗೆ ಮನ್ನಣೆ

| Published : Apr 18 2024, 02:28 AM IST / Updated: Apr 18 2024, 12:08 PM IST

ಸಾರಾಂಶ

ವಿದೇಶಗಳಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡಿರುವ ರಾಜ್ಯ ಸರ್ಕಾರ 2014ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಉಚಿತವಾಗಿ ಕನ್ನಡ ಭಾಷಾ ಬೋಧನೆ ಮಾಡುತ್ತಿರುವ ಕನ್ನಡ ಮಿತ್ರರು-ಯುಎಇ ಆಯೋಜನೆ ‘ಕನ್ನಡ ಪಾಠ ಶಾಲೆ ದುಬೈ#ಗೆ ಅಧಿಕೃತ ಮನ್ನಣೆ ನೀಡಿದೆ.

 ಬೆಂಗಳೂರು :  ವಿದೇಶಗಳಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡಿರುವ ರಾಜ್ಯ ಸರ್ಕಾರ 2014ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಉಚಿತವಾಗಿ ಕನ್ನಡ ಭಾಷಾ ಬೋಧನೆ ಮಾಡುತ್ತಿರುವ ಕನ್ನಡ ಮಿತ್ರರು-ಯುಎಇ ಆಯೋಜನೆ ‘ಕನ್ನಡ ಪಾಠ ಶಾಲೆ ದುಬೈ#ಗೆ ಅಧಿಕೃತ ಮನ್ನಣೆ ನೀಡಿದೆ.

‘ಕನ್ನಡ ಪಾಠ ಶಾಲೆ ದುಬೈ’ ಆಯೋಜಕರ ನಿಯೋಗವು ಏಪ್ರಿಲ್ 10 ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವರದಿಯನ್ನು ಪುರಸ್ಕರಿಸಿತ್ತು.

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಸಚಿವ ಶಿವರಾಜ ತಂಗಡಗಿ ಅವರಿಗೆ ಕನ್ನಡ ಪಾಠ ಶಾಲೆ ದುಬೈ ಕುರಿತು ಸಂಪೂರ್ಣ ಮಾಹಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧಿಕೃತ ಮನ್ನಣೆ ಸಿಗಲು ಸಹಕಾರಿಯಾಯಿತು ಎಂದು ಕನ್ನಡ ಪಾಠ ಶಾಲೆ ದುಬೈ ಸಂಸ್ಥೆ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ ಅವರು ತಿಳಿಸಿದ್ದಾರೆ.

ಕನ್ನಡ ಪಾಠ ಶಾಲೆ ದುಬೈಗೆ ಮಾನ್ಯತೆ ಸಿಕ್ಕಿರುವ ಕುರಿತು ಕನ್ನಡ ಮಿತ್ರರು ಯುಎಇ ನಿಯೋಗ ಸದಸ್ಯರಾದ ಸಿದ್ದಲಿಂಗೇಶ್ ರೇವಪ್ಪ , ಸುನಿಲ್ ಗವಾಸ್ಕರ್ , ನಾಗರಾಜ್ ರಾವ್, ಚಂದ್ರಶೇಖರ ಸಂಕೋಲೆ ಮತ್ತು ಕೊಟ್ರೇಶ್ ಯಾರ್ಲಾಗಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.