ಸಾರಾಂಶ
ಗದಗ: ರಾಜ್ಯದಲ್ಲಿ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಸಾರ್ವಜನಿಕ ಹಿತಾಸಕ್ತಿ ಕೆಲಸಗಳಿಗೆ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಬಾಣಂತಿಯರ ಸಾವಿನ ಪ್ರಕರಣಗಳನ್ನು ರಾಜ್ಯ ಸರ್ಕಾರವೇ ಹೊಣೆ ಹೊರಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ಬಸ್ ಪ್ರಯಾಣ ದರ ಹೆಚ್ಚಳ ಹಾಗೂ ಬಾಣಂತಿಯರ ಸರಣಿ ಸಾವು ಖಂಡಿಸಿ ಹಾಗೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ದುರಾಡಳಿತದಿಂದ ಅವರ ಕ್ಷೇತ್ರದಲ್ಲಿ ಅವರ ಆಪ್ತನ ಕೈವಾಡದಿಂದ ಸ್ವತಃ ಖರ್ಗೆ ಗಮನಕ್ಕೆ ಇರುವುದಾಗಿ ಸಚಿನ್ ಪಂಚ್ಯಾಳ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಿಳಿತದ ಸನ್ನಿವೇಶ ಜನರು ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರ ಜೀವನದಲ್ಲಿ ಆಟವಾಡುತ್ತಿದ್ದು, ಸರಿಯಾದ ಔಷಧೋಪಚಾರ ಇಲ್ಲದೆ ರಾಜ್ಯದಲ್ಲಿ ನೂರಾರು ಬಾಣಂತಿಯರ ಸಾವಿಗೆ ಕಾರಣವಾಗಿದ್ದು, ಅನಾಥವಾದ ಹಸಿಗೂಸು ಕಂದಮ್ಮಗಳ ಶಾಪ ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗೆ ತಟ್ಟದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ, ಎಂ.ಎಸ್.ಕರೀಗೌಡ್ರ, ಶ್ರೀಪತಿ ಉಡುಪಿ, ಅನೀಲ ಅಬ್ಬಿಗೇರಿ, ರಮೇಶ ಸಜ್ಜಗಾರ, ಉಷಾ ದಾಸರ, ಮಂಜು ಮುಳಗುಂದ, ವಿಜಯಲಕ್ಷ್ಮೀ ಮಾನ್ವಿ ಮಾತನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ನಾಗರಾಜ ಕುಲಕರ್ಣಿ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ಈಶ್ವರಪ್ಪ ರಂಗಪ್ಪನವರ, ಬಿ.ಎಸ್. ಚಿಂಚಲಿ, ಭದ್ರೇಶ ಕುಸ್ಲಾಪೂರ, ವೈ.ಪಿ. ಅಡ್ನೂರ, ಭಿಮಸಿಂಗ ರಾಠೋಡ, ನಿಂಗಪ್ಪ ಹುಗ್ಗಿ, ಶಶಿಧರ ದಿಂಡೂರ, ಕೆ.ಪಿ.ಕೋಟಿಗೌಡ್ರ, ಇರ್ಷಾದ ಮಾನ್ವಿ, ರಾಘವೇಂದ್ರ ಯಳವತ್ತಿ, ಚಿನ್ನಪ್ಪ ನೆಗಳೂರ, ಮಹಾಂತೇಶ ನಲವಡಿ, ಪ್ರಕಾಶ ಅಂಗಡಿ, ವಿದ್ಯಾವತಿ ಗಡಗಿ, ಅಶ್ವೀನಿ ಅಂಕಲಕೋಟಿ, ಸಂತೋಷ ಅಕ್ಕಿ, ನವೀನ ಕೊಟೆಕಲ್, ಧರ್ಮರಾಜ ಕೊಂಚಿಗೇರಿ, ಶಾರದಾ ಸಜ್ಜನರ, ಮಹೇಶ ಶಿರಹಟ್ಟಿ, ಉಮಾ ಕಲ್ಲನಗೌಡ್ರ, ಕಮಲಾಕ್ಷಿ ಗೊಂದಿ, ವೀರಣ್ಣ ಉಪ್ಪಿನ, ವಂದನಾ ವರ್ಣೇಕರ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ಕಮಲಾಕ್ಷಿ ತಕ್ಕಲಕೊಟಿ, ಯೋಗೇಶ್ವರಿ ಭಾವಿಕಟ್ಟಿ, ಚಂದ್ರು ತಡಸದ, ಸುಮಂಗಲಾ ಕೊನೆವಾಲ, ಸುಂದರಬಾಯಿ, ನಿರ್ಮಲಾ ಪಾಟೀಲ, ಜ್ಯೂತಿ ಹೊಂಗಲ, ಅರುಣಾ ಪಾಟಿಲ, ಮಾಂತೇಶ ಬಾತಾಖಾನಿ, ರೇಖಾ ವಿರಾಪೂರ, ಅಕ್ಕಮ್ಮ, ಶರಣಮ್ಮ, ಲಕ್ಷ್ಮೀ ಕಾಕಿ ಹಾಗೂ ಪ್ರಮುಖರು ಇದ್ದರು.