ಸಾರಾಂಶ
ಜಗಳೂರು ಪಟ್ಟಣದ ಗುರುಭವನದಲ್ಲಿ ಆ.೨೪ರಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ೨೦೨೪-೨೫ನೇ ಸಾಲಿನ ವಾರ್ಷಿಕ ಸಭೆ ಹಾಗೂ ಶಾಸಕರು, ಕುಟುಂಬ ಪಿಂಚಣಿದಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಅಧ್ಯಕ್ಷ ಎ.ಪಾಲಯ್ಯ ಜಗಳೂರಲ್ಲಿ ಹೇಳಿದ್ದಾರೆ.
- ಶಾಸಕರು, ಕುಟುಂಬ ಪಿಂಚಣಿದಾರರಿಗೆ ಸನ್ಮಾನ ಸಮಾರಂಭ: ಎ.ಪಾಲಯ್ಯ- - - ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ಗುರುಭವನದಲ್ಲಿ ಆ.೨೪ರಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ೨೦೨೪-೨೫ನೇ ಸಾಲಿನ ವಾರ್ಷಿಕ ಸಭೆ ಹಾಗೂ ಶಾಸಕರು, ಕುಟುಂಬ ಪಿಂಚಣಿದಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಅಧ್ಯಕ್ಷ ಎ.ಪಾಲಯ್ಯ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ನೌಕರರ ಸಂಘ ಉತ್ತಮವಾಗಿ ಬೆಳೆಯುತ್ತಿದ್ದು, ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ಕಳೆದೊಂದು ವರ್ಷದಿಂದ ನಿವೃತ್ತ ಸಂಘದಲ್ಲಾದ ಚಟುವಟಿಕೆಗಳ ಬಗ್ಗೆ ವಾರ್ಷಿಕ ಸಭೆಯಲ್ಲಿ ಹಿಂದಿನ ಸಭೆ ನಡವಳಿಕೆ ಮಂಡನೆ ಹಾಗೂ ಅನುಮೋದನೆ ಮಾಡಲಾಗುತ್ತಿದೆ. ೭೫ ವರ್ಷ ಪಾದಾರ್ಪಣೆಗೊಂಡ ನಿವೃತ್ತ ನೌಕರರಿಗೆ, ಕುಟುಂಬ ಪಿಂಚಣಿದಾರರಿಗೆ ಗೌರವಿಸಲಾಗುವುದು ಎಂದರು.
ಕ.ರಾ.ಸ.ನಿ.ನೌ. ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಘದ ತಾಲೂಕಾಧ್ಯಕ್ಷ ಎ.ಪಾಲಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಭಾಗದ ಸ.ನಿ.ನೌ. ಸಂಘದ ಉಪಾಧ್ಯಕ್ಷ ಗುರುಮೂರ್ತಿ, ಸ.ನೌ.ಸಂಘದ ತಾಲೂಕು ಅಧ್ಯಕ್ಷ ಸಿ.ಬಿ. ನಾಗರಾಜ್, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಬಿ.ಎಂ. ಹನುಮಂತೇಶ್, ಕೆ.ನಾರಪ್ಪ, ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷರಾದ ಸುಜಾತಮ್ಮ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಿ.ಎಸ್.ವೀಣಾ, ವಿಶೇಷ ಆಹ್ವಾನಿತರಾಗಿ ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ, ಇಒ ಎನ್.ಕೆ. ಕೆಂಚಪ್ಪ, ಬಿಇಒ ಹಾಲಮೂರ್ತಿ, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ್, ಪೊಲೀಸ್ ನಿರೀಕ್ಷಕ ಎಂ.ಶ್ರೀನಿವಾಸ ರಾವ್ ಇನ್ನಿತರೇ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಸಹ ಕಾರ್ಯದರ್ಶಿ ಎಂ.ಎಸ್. ಪಾಟೀಲ್ ಮಾತನಾಡಿ, ಕಾರ್ಯಕ್ರಮಕ್ಕೆ ಎಲ್ಲ ನಿವೃತ್ತ ನೌಕರರು, ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಜನಾಬ್ ನಜೀರ್ ಅಹಮದ್, ರಾಜ್ಯ ಪರಿಷತ್ತು ಸದಸ್ಯ ಟಿ.ಕೆ. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಎಂ. ಹುಚ್ಚಲಿಂಗಯ್ಯ, ನಿವೃತ್ತ ಮುಖ್ಯಶಿಕ್ಷಕ ಎಂ.ಡಿ. ಆಂಜನೇಯ, ಪದಾಧಿಕಾರಿಗಳಾದ ರುದ್ರಪ್ಪ, ಎಸ್.ಚಂದ್ರಪ್ಪ, ಶರಣಪ್ಪ ಮತ್ತಿತರಿದ್ದರು.- - - -21ಜೆ.ಎಲ್.ಆರ್.ಚಿತ್ರ1:
ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಪಾಲಯ್ಯ, ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.