ಗಾಯಗೊಂಡಿದ್ದ ಕುದುರೆಗೆ ಚಿಕಿತ್ಸೆ

| Published : Aug 23 2024, 01:03 AM IST

ಸಾರಾಂಶ

ಶಿವಮೊಗ್ಗದ ಸಾಗರ ರಸ್ತೆಯ ಅಲ್ಕೋಳ ಸರ್ಕಲ್‌ನಲ್ಲಿ ಇತ್ತೀಚೆಗೆ ಕುದುರೆಗೆ ವಾಹನ ಡಿಕ್ಕಿಯಾಗಿದ್ದು, ಕುದುರೆ ಅಧಿಕ ರಕ್ತಸ್ರಾವದಿಂದ ಬಳಲುತ್ತಿತ್ತು.

ಶಿರಸಿ: ನಗರದ ಬನವಾಸಿ ರಸ್ತೆಯಲ್ಲಿರುವ ಅಮೇಜಿಂಗ್ ಪೆಟ್ ಪ್ಲಾನೆಟ್‌ನವರು ಗಾಯಗೊಂಡಿದ್ದ ಕುದುರೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗದ ಸಾಗರ ರಸ್ತೆಯ ಅಲ್ಕೋಳ ಸರ್ಕಲ್‌ನಲ್ಲಿ ಇತ್ತೀಚೆಗೆ ಕುದುರೆಗೆ ವಾಹನ ಡಿಕ್ಕಿಯಾಗಿದ್ದು, ಕುದುರೆ ಅಧಿಕ ರಕ್ತಸ್ರಾವದಿಂದ ಬಳಲುತ್ತಿತ್ತು. ಇದನ್ನು ನೋಡಿದ ಅಲ್ಲಿನ ಸ್ಥಳೀಯರು ಸತತ ಎರಡು ದಿನಗಳಿಂದ ಅನೇಕ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರೂ ಕುದುರೆಯನ್ನು ರಕ್ಷಿಸಲು ಮುಂದೆ ಬಂದಿರಲಿಲ್ಲ.

ಈ ಕುದುರೆಯು ತುಂಬು ಗರ್ಭಿಣಿಯಾಗಿದ್ದು, ಕುದುರೆಗೆ ಒಂದು ಕಣ್ಣು ಕಾಣುವುದಿಲ್ಲ. ಶಿವಮೊಗ್ಗದ ನಾಗರತ್ನಾ ರಾವ್ ಹಾಗೂ ನೆಲ್ಸನ್ ಡಿಸೋಜ ಅವರು ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್‌ಗೆ ಕರೆ ಮಾಡಿ ತಿಳಿಸಿದ್ದರು. ಅಮೇಜಿಂಗ್ ಪೆಟ್ ಪ್ಲಾನೆಟ್ ಅನಾಥಾಶ್ರಮದ ಮುಖ್ಯಸ್ಥೆ ಪೂಜಾ ರಾಜ್ ತಕ್ಷಣವೇ ಸ್ಪಂದಿಸಿ ಕುದುರೆಯನ್ನು ಕರೆತರುವಂತೆ ಹೇಳಿದರು. ನಾಗರತ್ನಾ ರಾವ್, ನೆಲ್ಸನ್ ಡಿಸೋಜಾ ಹಾಗೂ ಯಶ್ವಂತ್ ಕುದುರೆಯನ್ನು ರಕ್ಷಿಸಿ ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್ ಪ್ರಾಣಿಗಳ ಅನಾಥಾಶ್ರಮಕ್ಕೆ ತಂದು ಬಿಟ್ಟಿದ್ದಾರೆ. ಕುದುರೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ. ನಿವಳಿಯಲ್ಲಿ ಪಾಠೋಪಕರಣ ವಿತರಣೆ

ಕಾರವಾರ: ತಾಲೂಕಿನ ನಿವಳಿ ಗ್ರಾಮದ ಶ್ರೀ ದೇವತಿ ದೇವಾ ವನವಾಸಿ ಕಲ್ಯಾಣ ಮನೆಪಾಠ ಸಂಸ್ಕಾರ ಕೇಂದ್ರದಲ್ಲಿ ವನವಾಸಿ ಕಲ್ಯಾಣದಿಂದ ಕೊಡಮಾಡಿದ ಪಾಠೋಪಕರಣವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಬ್ಯಾಗ್ ನೋಟ್ ಬುಕ್ ಪೆನ್ಸಿಲ್ ಕಂಪಾಸ್ ಬಾಕ್ಸ್ ಎಕ್ಸಾಮ್ ಪ್ಯಾಡ್ ವಿತರಣೆ ಮಾಡಲಾಯಿತು. 12 ಮಕ್ಕಳಿಗೆ ಬ್ಯಾಗ್ ಕಂಪಾಸ್ ಬಾಕ್ಸ್, ನೋಟ್ ಬುಕ್, ಪೆನ್ ಪೆನ್ಸಿಲ್ ವಿತರಣೆ ಮಾಡಲಾಯಿತು. 9 ಮಕ್ಕಳಿಗೆ ನೋಟ್ ಬುಕ್, ಪೆನ್ ಪೆನ್ಸಿಲ್ ವಿತರಿಸಲಾಯಿತು.ವನವಾಸಿ ಕಲ್ಯಾಣ ಜಿಲ್ಲಾ ಸಂಘಟನ ಕಾರ್ಯದರ್ಶಿ ಶ್ರೀಧರ್ ಸಾಲೇಹಕ್ಕಲು ಮತ್ತು ವನವಾಸಿ ಕಲ್ಯಾಣದ ಪ್ರಮುಖರಾದ ವಿಶ್ವನಾಥ, ವೇದಾವತಿ, ದೀಪಾ ಪಿ. ಹೆಗಡೆ, ಕಾಮಿನಿ ಡಿ. ಗೌಡ, ಕೃಷ್ಣಿ ಕೆ. ಗೌಡ, ಸ್ಥಳೀಯರಾದ ಗೋಪಾಲ ಗೌಡ ಇದ್ದರು.