ಹಿಂದುತ್ವದ ದಮನಕ್ಕೆ ಸರ್ಕಾರದ ಆ್ಯಂಟಿ ಕಮ್ಯುನಲ್ ಫೋರ್ಸ್: ಸುನಿಲ್‌ ಕುಮಾರ್‌ ಆರೋಪ

| Published : May 04 2025, 01:30 AM IST

ಹಿಂದುತ್ವದ ದಮನಕ್ಕೆ ಸರ್ಕಾರದ ಆ್ಯಂಟಿ ಕಮ್ಯುನಲ್ ಫೋರ್ಸ್: ಸುನಿಲ್‌ ಕುಮಾರ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪರಮೇಶ್ವರ ಅವರು, ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಕ್ಕೆ ಮುನ್ನ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಮುಸ್ಲಿಂ ಮುಖಂಡರು ಮೇಜು ಗುದ್ದಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ಇವರ ವರ್ತನೆ ತಲುಪಿದೆ. ಗೃಹ ಸಚಿವರು ಹಂತಕರ ರಾಗಕ್ಕೆ ತಾಳ ಹಾಕಲು ಹೊರಟಿದ್ದಾರೆ. ಗೃಹ ಇಲಾಖೆಯನ್ನು ಕರಾವಳಿಯ ಜಿಹಾದಿಗಳ‌‌‌ ಕಾಲ ಬುಡದಲ್ಲಿ ಅಡವಿಡುತ್ತೀರಾ? ಎಂದು ವಿ.ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರ ಜತೆ ಕಾನೂನು- ಸುವ್ಯವಸ್ಥೆ ಸಭೆ ನಡೆಸಲು ಬಂದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮುಸ್ಲಿಂ ಮುಖಂಡರ ಜತೆಗೆ ಸಭೆ‌ ನಡೆಸುವ ಮೂಲಕ ಪ್ರಕರಣದ ಹಾದಿ ತಪ್ಪಿಸಲು ಮುಂದಾಗಿದ್ದಾರೆ. ಅವಳಿ ಜಿಲ್ಲೆಯಲ್ಲಿ ಸರ್ಕಾರ ಪ್ರಾರಂಭಿಸುವ ಆ್ಯಂಟಿ ಕಮ್ಯುನಲ್ ಫೋರ್ಸ್ ಹಿಂದುತ್ವದ ದಮನಕ್ಕೆ ಬಳಕೆಯಾಗಲಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪರಮೇಶ್ವರ ಅವರು, ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಕ್ಕೆ ಮುನ್ನ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಮುಸ್ಲಿಂ ಮುಖಂಡರು ಮೇಜು ಗುದ್ದಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ಇವರ ವರ್ತನೆ ತಲುಪಿದೆ. ಗೃಹ ಸಚಿವರು ಹಂತಕರ ರಾಗಕ್ಕೆ ತಾಳ ಹಾಕಲು ಹೊರಟಿದ್ದಾರೆ. ಗೃಹ ಇಲಾಖೆಯನ್ನು ಕರಾವಳಿಯ ಜಿಹಾದಿಗಳ‌‌‌ ಕಾಲ ಬುಡದಲ್ಲಿ ಅಡವಿಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.ಆಂಟಿ ಕಮ್ಯುನಲ್ ಪೋರ್ಸ್ ರಚನೆ ಮಾಡುವುದರ ಉದ್ದೇಶ ಸ್ಪಷ್ಟವಾಗಿದೆ. ಹಿಂದುತ್ವದ ಪರವಾಗಿರುವ ಧ್ವನಿಯನ್ನು ಪೊಲೀಸ್ ಬಲ ಬಳಸಿ ದಮನಿಸುವುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರಕ್ಕೆ ಶಾಂತಿಯ ಬದಲು ಪಿಎಫ್‌ಐ ಉಗ್ರರ ರಕ್ಷಣೆ ಮಾಡುವುದೇ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ.