ಕಡೂರುಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಬಡತನದ ನಡುವೆ ವಿಭಿನ್ನ ಪ್ರತಿಭಾ ಶಕ್ತಿ ಹೊಂದಿರುತ್ತಾರೆ ಅಂತಹ ಪ್ರತಿಭೆಗಳನ್ನು ಹುಡುಕಿ ತೆಗೆಯುವ ಕಾರ್ಯ ಆಗಬೇಕು ಎಂದು ಪಿಎಲ್ ಡಿ ಬ್ಯಾಂಕಿನ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಬಡತನದ ನಡುವೆ ವಿಭಿನ್ನ ಪ್ರತಿಭಾ ಶಕ್ತಿ ಹೊಂದಿರುತ್ತಾರೆ ಅಂತಹ ಪ್ರತಿಭೆಗಳನ್ನು ಹುಡುಕಿ ತೆಗೆಯುವ ಕಾರ್ಯ ಆಗಬೇಕು ಎಂದು ಪಿಎಲ್ ಡಿ ಬ್ಯಾಂಕಿನ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಕಡೂರು ತಾಲೂಕಿನ ಕುರುಬಗೆರೆ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸುಶಿಕ್ಷಿತರಾಗಬೇಕೆಂಬ ದೃಷ್ಟಿಯಿಂದ ರಾಜ್ಯ ಸರಕಾರ ಕಲಿಕಾ ಶಿಬಿರದಲ್ಲಿ ಚಿಣ್ಣರ ಮೇಳ, ಪ್ರವಾಸ, ಕ್ರೀಡಾಕೂಟ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲ ಕ್ಷೇತ್ರಗಳಂತೆ ಖಾಸಗಿ ಶಾಲೆಗಳ ಜೊತೆ ಪೈಪೋಟಿ ನೀಡುವ ಅನಿವಾರ್ಯತೆ ಇದೆ. ಇದಕ್ಕೆ ಶಿಕ್ಷಕರು ಸರ್ಕಾರಿ ಶಾಲಾ ಮಕ್ಕಳಿಗೆ ಪರಿಶ್ರಮ ಹಾಕುವ ಮೂಲಕ ಕಲಿಸಬೇಕಿದ್ದು ಮಕ್ಕಳು. ಸಿಕ್ಕ ಅವಕಾಶ ಸದುಪಯೋಗಪಡಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೊಡ್ಡಪಟ್ಟಣ ಗೆರೆ ಮತ್ತು ಜಿಗಣೇಹಳ್ಳಿ ಸುತ್ತಲಿನ 12 ಶಾಲೆಗಳ 1 ರಿಂದ 2 ನೇ ತರಗತಿ ಮಕ್ಕಳಿಗೆ ಕಥೆ ಹೇಳುವುದು. 3ನೇ ತರಗತಿ ಮಕ್ಕಳಿಗೆ ನೆನಪಿನ ಶಕ್ತಿ, 4ನೇ ತರಗತಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಗಣಿತ, ಕವಿತೆ ಸ್ಪಷ್ಟವಾಗಿ ಓದುವುದು, ಬರೆಯುವುದು. ಚಿತ್ರ ನೋಡಿ ಕಥ ವಿವರಿಸುವುದು ಸೇರಿದಂತೆ ವಿವಿಧ ಪಾಠೋಟಗಳನ್ನು ನಡೆಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಲಿಕಾ ಹಬ್ದದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿ ಭೈರೇಗೌಡ, ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್, ಮುಖ್ಯ ಶಿಕ್ಷಕ ಪರಮೇಶ ನಾಯ್ಕ, ರೂಪಾ ಧರಣೇಶ್, ಸಿ ಆರ್ ಪಿ ವೆಂಟೇಶ್, ಶಿಕ್ಷಕರಾದ ಚಂದ್ರಶೇಖರ್, ರವಿ ಮತ್ತಿತರರು ಇದ್ದರು.

4ಕೆಕೆಡಿಯು1. ಕಡೂರು ತಾಲೂಕಿನ ಕುರುಬಗೆರೆ ಶಾಲೆಯಲ್ಲಿ ನಡೆದ ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು.