ಕಲೋತ್ಸವದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

| Published : Nov 07 2025, 02:15 AM IST

ಕಲೋತ್ಸವದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

10ನೇ ತರಗತಿಯ ಆರ್‌. ಕೆ. ಮಹದೇವ್ ಅವರು “ನನ್ನ ಜೀವನದ ಶಿಲ್ಪಿ ನಾನೇ” ಶೀರ್ಷಿಕೆಯ ಮಣ್ಣಿನ ಮಾದರಿಯಿಂದ ತ್ರಿಮಾನ್ಯ ದೃಶ್ಯಕಲೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಹೊಳೆನರಸೀಪುರ: ತಾಲೂಕಿನ ನಗರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯಿಂದ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇತ್ತೀಚೆಗೆ ನಡೆದ 2025- 26ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕ ನವದೆಹಲಿ ಆಯೋಜಿಸಿದ ಕಲೋತ್ಸವದಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

10ನೇ ತರಗತಿಯ ಆರ್‌. ಕೆ. ಮಹದೇವ್ ಅವರು “ನನ್ನ ಜೀವನದ ಶಿಲ್ಪಿ ನಾನೇ” ಶೀರ್ಷಿಕೆಯ ಮಣ್ಣಿನ ಮಾದರಿಯಿಂದ ತ್ರಿಮಾನ್ಯ ದೃಶ್ಯಕಲೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಚನ್ನಪಟ್ಟಣದ ಗೊಂಬೆಗಳಿಂದ ಸ್ಫೂರ್ತಿ ಪಡೆದ ಎನ್‌. ಆರ್‌. ಲತೇಶ್‌ ಕುಮಾರ್‌ ಹಾಗೂ ಎನ್‌.ಎಂ. ಕೌಶಿಕ್ ಅವರು ಸ್ಥಳೀಯ ಆಟಿಕೆ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನ ಪಡೆದು ಡಿಸೆಂಬರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಪ್ರಿಯಾಂಕ ದೃಶ್ಯಕಲಾ ವಿಭಾಗದಲ್ಲಿ, ಎನ್‌.ಕೆ. ನಂಜುಂಡ ಮತ್ತು ಕಿರಣ್ ಆರ್.ಎನ್‌. ಸಾಂಪ್ರದಾಯಿಕ ಕಥೆ- ಕಥನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದರ್ಶನ್ ಆರ್‌. ಬಿ. ಹಾಗೂ ಕಿರಣ್ ಎಚ್‌.ವೈ. ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಸಾಧನೆಗೆ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕ ಶಂಕರಪ್ಪ ಕೆ.ಎನ್. ಅವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಇಒ ಸೋಮಲಿಂಗೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಹಿರಿಯ ಶಿಕ್ಷಕಿ ಲತಾ ಕೆ.ಎಚ್ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.