ಸರ್ಕಾರಿ ಶಾಲೆಗಳು ದೇವಸ್ಥಾನಗಳಿದ್ದಂತೆ: ಶಾಸಕ ಸಿದ್ದು ಸವದಿ

| Published : Feb 12 2024, 01:33 AM IST

ಸಾರಾಂಶ

ಮಹಾಲಿಂಗಪುರ: 2019-20ನೇ ಸಾಲಿನ ನಬಾರ್ಡ್‌ ಸಹಯೋಗದ ಆರ್ ಐಡಿಎಫ್ 25ರ ಯೋಜನೆಯಡಿ ಸ್ಥಳೀಯ ಪಿ.ಡಿ.ಬುದ್ನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 5 ಕೊಠಡಿಗಳು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ವಿವೇಕ ಯೋಜನೆಯಡಿ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ₹ 32.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 2 ಕೊಠಡಿಗಳನ್ನು ಶಾಸಕ ಸಿದ್ದು ಸವದಿ ಉದ್ಘಾಟಿಸಿ ಮಾತನಾಡಿ, ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳು ದೇವಸ್ಥಾನಗಳಿದ್ದಂತೆ, ಆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲು ತಾವು ಸದಾ ಸಿದ್ಧ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳು ದೇವಸ್ಥಾನಗಳಿದ್ದಂತೆ, ಆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲು ತಾವು ಸದಾ ಸಿದ್ಧ ಎಂದು ಶಾಸಕ ಸಿದ್ದು ಸವದಿ ಹೇಳಿದರು.

2019-20ನೇ ಸಾಲಿನ ನಬಾರ್ಡ್‌ ಸಹಯೋಗದ ಆರ್ ಐಡಿಎಫ್ 25ರ ಯೋಜನೆಯಡಿ ಸ್ಥಳೀಯ ಪಿ.ಡಿ.ಬುದ್ನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 5 ಕೊಠಡಿಗಳು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ವಿವೇಕ ಯೋಜನೆಯಡಿ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ₹ 32.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 2 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಜನನಾಯಕನ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಮಕ್ಕಳಿಗೆ ಭದ್ರ ಮತ್ತು ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗೋಣ ಎಂದರು. ಶಾಸಕರು ಕಾಳಜಿವಹಿಸಿ ನೂತನ ಕಟ್ಟಡಗಳ ಗುಣಮಟ್ಟ ಮತ್ತು ಬಾಗಿಲು ಕಿಟಕಿಗಳನ್ನು ಪರಿಶೀಲಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಈರಪ್ಪ ದಿನ್ನಿಮನಿ, ಎಸ್ಡಿಎಂಸಿ ಅಧ್ಯಕ್ಷರಾದ ಸಂಜಯ ರಾಠೋಡ, ಮಲ್ಲಪ್ಪ ಸೈದಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ, ಸಿಆರ್ಪಿ ಎಸ್.ಎನ್. ಬ್ಯಾಳಿ, ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ, ಪುರಸಭಾ ಸದಸ್ಯರಾದ ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ವಿಷ್ಣುಗೌಡ ಪಾಟೀಲ, ಮುಖ್ಯಶಿಕ್ಷಕ ಧನಂಜಯ ಕುಲಕರ್ಣಿ ಮತ್ತು ಕೆ.ಎಸ್. ಹಿರೇಮಠ, ಮಹೇಶ ಜಿಡ್ಡಿಮನಿ, ಭರತ ಕದ್ದಿಮನಿ, ಬಸವರಾಜ ಮಡಿವಾಳ, ವಿಠ್ಠಲ ಕಾರಜೋಳ, ಕುಂದ್ರಾಳ ಇತರರಿದ್ದರು.