ಸರ್ಕಾರಿ ಶಾಲೆಗಳು ಸಾರ್ವಜನಿಕರ ಆಸ್ತಿ: ವಿರಾಜ್ ಕೊಟಕ್

| Published : May 21 2025, 12:10 AM IST

ಸಾರಾಂಶ

ಸರ್ಕಾರಿ ಶಾಲೆಗಳು ನಮ್ಮೆ ಲ್ಲರ ಆಸ್ತಿಯಾಗಿದ್ದು, ಸರ್ಕಾರದಿಂದ ಶಾಲೆಗಳ ಅಭಿವೃದ್ಧಿ ಒತ್ತಟ್ಟಿಗಿರಲಿ, ಆದರೆ ನಮ್ಮ ಯುವಕರ ಜವಾಬ್ದಾರಿ ತಾವು ಕಲಿತಂತಹ ಶಾಲೆಗಳನ್ನು ತಮ್ಮ ಕೈಲಾದಷ್ಟು ಅಭಿವೃದ್ಧಿಪಡಿಸುವುದರಿಂದ ದೇಶದ ಒಬ್ಬ ಜವಾಬ್ದಾರಿ ನಾಗರಿಕರಾಗಿ ನಮ್ಮ ಸೇವೆಯನ್ನು ಸಲ್ಲಿಸದಂತಾಗಲಿದೆ.

ಬ್ಯಾಡಗಿ: 1 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಿಸುವ ಮೂಲಕ ಕದರಮಂಡಲಗಿ ಯುವಕರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಇಂತಹ ದೃಢ ನಿರ್ಧಾರಗಳು ದೇಶದ ಪ್ರತಿಯೊಂದ ಗ್ರಾಮದ ಯುವಕರೂ ಕೈಗೊಳ್ಳಬೇಕಾಗಿದೆ ಎಂದು ಇನ್ನರವೀಲ್ ಸಂಸ್ಥೆಯ ಡಿಸ್ಟ್ರಿಕ್ಟ್ ಸೆಕ್ರೆಟರಿ ವಿರಾಜ್ ಕೊಟಕ್ ಅಭಿಪ್ರಾಯಪಟ್ಟರು.

ತಾಲೂಕಿನ ಕದರಮಂಡಲಗಿ ಗ್ರಾಮದ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರವೀಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಹ್ಯಾಪಿ ಸ್ಕೂಲ್’ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳು ನಮ್ಮೆ ಲ್ಲರ ಆಸ್ತಿಯಾಗಿದ್ದು, ಸರ್ಕಾರದಿಂದ ಶಾಲೆಗಳ ಅಭಿವೃದ್ಧಿ ಒತ್ತಟ್ಟಿಗಿರಲಿ, ಆದರೆ ನಮ್ಮ ಯುವಕರ ಜವಾಬ್ದಾರಿ ತಾವು ಕಲಿತಂತಹ ಶಾಲೆಗಳನ್ನು ತಮ್ಮ ಕೈಲಾದಷ್ಟು ಅಭಿವೃದ್ಧಿಪಡಿಸುವುದರಿಂದ ದೇಶದ ಒಬ್ಬ ಜವಾಬ್ದಾರಿ ನಾಗರಿಕರಾಗಿ ನಮ್ಮ ಸೇವೆಯನ್ನು ಸಲ್ಲಿಸದಂತಾಗಲಿದೆ ಎಂದರು.ಮಹಿಳೆಯರ ಶಿಕ್ಷಣಕ್ಕೆ ಒತ್ತು: ಇನ್ನರವೀಲ್ ಸಂಸ್ಥೆಯ ತಾಲೂಕಾಧ್ಯಕ್ಷೆ ಕವಿತಾ ಸೊಪ್ಪಿನಮಠ ಮಾತನಾಡಿ, ವಿಶ್ವದೆಲ್ಲೆಡೆ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಸಮಾಜದಲ್ಲಿ ಸಮಾನತೆ ಸಾಧಿಸುವುದು ಸೇರಿದಂತೆ ಹಾಗೂ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಒಂದಿಲ್ಲೊಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಎಂದರು.ಸರ್ಕಾರಿ ಶಾಲೆಗೆ ಸೇರಿಸಿ: ಕಾರ್ಯದರ್ಶಿ ರೂಪಾ ಕಡೇಕೊಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲದೇ ಉಚಿತ ಪುಸ್ತಕ ಬೂಟು ಹಾಗೂ ಯುನಿಫಾರ್ಮ್ ಸೇರಿದಂತೆ ಹಲವು ಅನುಕೂಲ ಕಲ್ಪಿಸಲಾಗುತ್ತಿದೆ. ಆದ್ದರಿಂದ ಪೋಷಕರು ಯಾವುದೇ ಭಯವಿಲ್ಲದೇ ಸರ್ರಿಕಾ ಶಾಲೆಗೆ ಮಕ್ಕಳನ್ನು ಕಳಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಇನ್ನರವೀಲ್ ಸಂಸ್ಥೆ ವತಿಯಿಂದ ಶಾಲೆಗೆ ಹಲವು ಪಾಠ, ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಎಚ್.ವೈ. ಒಲೇಕಾರ, ಪುಷ್ಪಾ ಇಂಡಿಮಠ, ದ್ರಾಕ್ಷಾಯಣಿ ಹರಮಗಟ್ಟಿ, ಶೋಭಾ ನೋಟದ, ಕ್ಷಮಾ, ಸಂಧ್ಯಾರಾಣಿ ದೇಶಪಾಂಡೆ, ಜಾನ್ವವಿ ಎಲಿ, ಮಹೇಶ್ವರಿ ಪಸಾರದ, ಸುಶೀಲಾ, ಸುಧಾ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಾಲಬಾಧೆ ರೈತ ಆತ್ಮಹತ್ಯೆ

ಗುತ್ತಲ: ಸಾಲಬಾಧೆ ತಾಳಲಾರದೆ ಮನನೊಂದು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಗುತ್ತಲ ಸಮೀಪದ ಬಮ್ಮನಕಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಫಕ್ಕೀರಗೌಡ ಪಾಟೀಲ (39) ಆತ್ಮಹತ್ಯೆಗೆ ಶರಣಾದ ರೈತ. ಇವರು ವಿವಿಧ ಬ್ಯಾಂಕ್ ಹಾಗೂ ಕೈಸಾಲ ಸೇರಿ ₹10 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಸಾಲಬಾಧೆ ತಾಳಲಾರದೇ ಮನನೊಂದು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.