ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರವು ವಕ್ಫ್ ಮಂಡಳಿ ಹೆಸರಿನಲ್ಲಿ ಆಸ್ತಿ ವಶಪಡಿಸಿಕೊಳ್ಳುತ್ತಿರುವುದು ಜನಸಾಮಾನ್ಯರಿಗೆ ಹಿಂಸೆಯಾಗಿದೆ. ತಾಲೂಕು ಬಿಜೆಪಿ ವತಿಯಿಂದ ಇದನ್ನು ಖಂಡಿಸುತ್ತದೆ ಎಂದು ಆಲೂರು- ಕಟ್ಟಾಯ ಮಂಡಲ ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್ ತಿಳಿಸಿದರು. ಆಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಆಲೂರು
ರಾಜ್ಯವು ಈಗಾಗಲೇ ಪ್ರಕೃತಿ ವಿಕೋಪದ ನಡುವೆ ಜನಸಾಮಾನ್ಯರು, ರೈತರು ತುಂಬಾ ಸಂಕಷ್ಟದಲ್ಲಿ ಇರುವ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರವು ವಕ್ಫ್ ಮಂಡಳಿ ಹೆಸರಿನಲ್ಲಿ ಆಸ್ತಿ ವಶಪಡಿಸಿಕೊಳ್ಳುತ್ತಿರುವುದು ಜನಸಾಮಾನ್ಯರಿಗೆ ಹಿಂಸೆಯಾಗಿದೆ. ತಾಲೂಕು ಬಿಜೆಪಿ ವತಿಯಿಂದ ಇದನ್ನು ಖಂಡಿಸುತ್ತದೆ ಎಂದು ಆಲೂರು- ಕಟ್ಟಾಯ ಮಂಡಲ ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ ಹೊನ್ನಾವರದಲ್ಲಿ 1500 ಎಕರೆ ರೈತರ ಜಮೀನು, 1649ರಲ್ಲಿ ಹಾವೇರಿ ಜಿಲ್ಲೆಯ ಚಿಕ್ಕಮ್ಮ ದೇವಸ್ಥಾನದ ಆಸ್ತಿ ಹಾಗೂ ಬಿಜಾಪುರದ ಸಾವಿರದ ಐನೂರು ವರ್ಷ ಇತಿಹಾಸ ಇರುವ ಸಿಂದಗಿ ಮಠದ ಜಮೀನು ವಶೀಕರಣಕ್ಕೆ ನೋಟಿಸ್ ನೀಡಿದ್ದು ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ದೊಡ್ಡ ಹೋರಾಟದ ವಾತಾವರಣ ಸೃಷ್ಟಿಯಾಗುವಂತಿದೆ. ಉಚಿತ ಭಾಗ್ಯಗಳನ್ನು ಕೊಟ್ಟು ಜನಸಾಮಾನ್ಯರನ್ನು ಮರಳು ಮಾಡಿ ದುರಾಡಳಿತ ನಡೆಸುತ್ತಿದೆ ಎಂದರು.
ಹಿರಿಯ ಬಿಜೆಪಿ ಮುಖಂಡ ಎ.ಎಚ್.ರಮೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎ.ಜಿ.ಕೃಷ್ಣಮೂರ್ತಿ ಅಬ್ಬನ, ರುದ್ರೇಗೌಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಾಲಲೋಚನ, ತಾಲೂಕು ಹಿರಿಯ ಬಿಜೆಪಿ ಮುಖಂಡ ಎ.ಎಚ್.ರಮೇಶ್ ಹಾಜರಿದ್ದರು.