ಕೋಲಾರದಲ್ಲಿರುವ ಎ.ಪಿ.ಎಂ.ಸಿಗೆ ಸ್ಥಳದ ಆಭಾವ ಕೊರತೆಯು ವರ್ಷ ವರ್ಷದಿಂದಾ ಹೆಚ್ಚಾಗುತ್ತಿದೆ. ಹಲವಾರು ಅಧಿಕಾರಿಗಳು ಬಂದರೂ ಹೋದರೂ ಭರವಸೆಗಳು ಸಹ ನೀಡಿದರೂ ಅದರೆ ಈವರೆಗೆ ಯಾವೂದು ಪ್ರಗತಿ ಕಂಡಿಲ್ಲ. ರೈತರ ಮತ್ತು ಮಾರುಕಟ್ಟೆಯವರ ಸಮಸ್ಯೆಗಳು ಬಗೆ ಹರಿದಿಲ್ಲ.ಮಾರುಕಟ್ಟೆಯ ಸ್ಥಳದ ಆಭಾವಗಳನ್ನು ನೀಗಿಸಲು ಕನಿಷ್ಟ ೧೦೦ ಎಕರೆ ಜಾಗದ ಅವಶ್ಯಕತೆ ಇದೆ.
ಕನ್ನಡಪ್ರಭ ವಾರ್ತೆ ಕೋಲಾರನಗರದ ಹೊರವಲಯದ ಎ.ಪಿ.ಎಂ.ಸಿ. ಯಾರ್ಡ್ ವಿಸ್ತರಣೆಗೆ ಸರ್ಕಾರವು ಕನಿಷ್ಠ ೧೦೦ ಎಕರೆ ಜಾಗವನ್ನು ಮಂಜೂರು ಮಾಡಿದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ. ಇದರಿಂದ ರೈತರಿಗೆ ಗಡಿಭಾಗದ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಅಭಿವೃದ್ದಿ ಹೊಂದಲು ಅನುಕೂಲವಾಗಲಿದೆ ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ವಿಧಾನಪರಿಷತ್‌ನಲ್ಲಿ ಹೇಳಿದರು.
ಕೋಲಾರದಲ್ಲಿರುವ ಎ.ಪಿ.ಎಂ.ಸಿಗೆ ಸ್ಥಳದ ಆಭಾವ ಕೊರತೆಯು ವರ್ಷ ವರ್ಷದಿಂದಾ ಹೆಚ್ಚಾಗುತ್ತಿದೆ. ಹಲವಾರು ಅಧಿಕಾರಿಗಳು ಬಂದರೂ ಹೋದರೂ ಭರವಸೆಗಳು ಸಹ ನೀಡಿದರೂ ಅದರೆ ಈವರೆಗೆ ಯಾವೂದು ಪ್ರಗತಿ ಕಂಡಿಲ್ಲ. ರೈತರ ಮತ್ತು ಮಾರುಕಟ್ಟೆಯವರ ಸಮಸ್ಯೆಗಳು ಬಗೆ ಹರಿದಿಲ್ಲ.ಮಾರುಕಟ್ಟೆಯ ಸ್ಥಳದ ಆಭಾವಗಳನ್ನು ನೀಗಿಸಲು ಕನಿಷ್ಟ ೧೦೦ ಎಕರೆ ಜಾಗದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ವಿಸ್ತರಣೆಗೆ ಅರಣ್ಯ ಭೂಮಿ ಅಡ್ಡಿಈ ಹಿಂದೆ ಎಪಿಎಂಸಿ ಮಾರುಕಟ್ಟೆ ವಿಸ್ತರಿಸಲು ಸರ್ಕಾರವು ಹೆದ್ದಾರಿ ಸಮೀಪದ ಕಪ್ಪರಸಿದ್ದಹಳ್ಳಿ ಮತ್ತು ಮಡೇರಹಳ್ಳಿ ಬಳಿ ಗುರುತಿಸಿದ್ದ ೩೭ ಎಕರೆ ಪ್ರದೇಶಕ್ಕೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತು. ನಂತರದಲ್ಲಿ ೬೦ ಎಕರೆ ಜಾಗವನ್ನು ಗುರುತಿಸಿರುವುದಾಗಿ ಹೇಳಿದರೂ ಈವರೆಗೆ ನೀಡಿಲ್ಲ. ಗುರುತಿಸಿರುವಂತ ೬೦ ಎಕರೆಯಲ್ಲಿ ಸಹಕಾರ ಇಲಾಖೆಗೆ ೪ ಎಕರೆ, ಟಿ.ಎ.ಪಿ.ಸಿ.ಎಂ.ಎಸ್‌ಗೆ ೩೪ ಗುಂಟೆ ಹಾಗೂ ಎ.ಪಿ.ಎಂ>ಸಿ.ಗೆ ೧೯ ಎಕರೆಯನ್ನು ಹಂಚಿಕೆ ಮಾಡಿರುವುದಾಗಿ ತಿಳಿಸಿದೆ ಎಂದರು.ಆದರೆ ಪ್ರತಿದಿನ ಕನಿಷ್ಟ ೩ ಲಕ್ಷ ಕ್ರೇಟ್ ಟೊಮೆಟೋ ವಿಲೇವಾರಿ ಮಾಡಬೇಕಾಗಿದೆ. ೧೫೦೦ ವಾಹನಗಳು ಟಮ್ಯಾಟೂ ಸಾಗಣೆ ಮಾಡಲು ಬಂದು ಹೋಗುವುದು ಸುಮಾರು ೫ ಸಾವಿರ ಜನರ ಸಂಚಾರ ಇರುತ್ತದೆ. ಹಾಗಾಗಿ ಎ.ಪಿ.ಎಂ.ಸಿ. ಮಾರುಕಟ್ಟೆಯು ಕಿಷ್ಕಿಂದೆಯ ಮಾದರಿಯಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ ಎಂದರು.
ಟೊಮೆಟೋ ಸೀಸನ್‌ನಲ್ಲಿ ತೊಂದರೆಟೊಮೆಟೋ ಸೀಸನ್‌ನಲ್ಲಿ ರಸ್ತೆಗಳಲ್ಲಿ ಟೊಮೆಟೋ ಕ್ರೇಟ್, ವಾಹನಗಳನ್ನು ನಿಲ್ಲಿಸಿಕೊಂಡು ಲೋಡ್-ಆನ್ ಲೋಡ್ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಟಮ್ಯಾಟೋ ಲೋಡ್ ಮಾಡಲು ಕಷ್ಟಕರ, ಬಿಸಿಲುಗಾಲದಲ್ಲಿ ಬಿಸಿಯ ಹಭೆ ತಾಳಲಾಗದಷ್ಟು ಸಂಕಷ್ಟ ಎದುರಿಸ ಬೇಕಾಗಿದೆ. ದಿನ ನಿತ್ಯ ನೊರಾರು ಟೆಂಪೋಗಳಲ್ಲಿ ಟೊಮೆಟೋ ಬೆಲೆ ಏರಿಕೆ ಇರಲಿ ಕಡಿಮೆ ಇರಲಿ ದಿನನಿತ್ಯ ಹೊರರಾಜ್ಯಗಳಿಗೆ ಟೊಮೆಟೋ ಕಳುಹಿಸಲೇ ಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಕೋಲಾರ ಎ.ಪಿ.ಎಂ.ಸಿ. ಮಾರುಕಟ್ಟೆ ಜಾಗವು ಸಾಲದಾಗಿದೆ ಸ್ಥಳದ ಆಭಾವ ಹೊಂದಿರುವ ರೈತರು ಎ.ಪಿ.ಎಂ.ಸಿ. ಅಕ್ಕ ಪಕ್ಕದ ಜಮೀನುಗಳನ್ನು ಬಾಡಿಗೆಗೆ ಪಡೆದುಕೊಂಡು ಟೊಮೆಟೋ ವಹಿವಾಟು ನಡೆಸುತ್ತಿದ್ದಾರೆ. ಸರ್ಕಾರವು ಕೂಡಲೇ ವಿಶೇಷ ಗಮನ ಹರಿಸಿ ಕೋಲಾರದ ರೈತರಿಗೆ ಅನುವು ಮಾಡಿಕೊಡಲು ಎ.ಪಿ.ಎಂ.ಸಿ. ಸ್ಥಳಾಂತರಕ್ಕೆ ಅನುವು ಮಾಡಿ ಕೊಡಬೇಕೆಂದು ಆಗ್ರಹಿಸಿದರು.