ಸಾರಾಂಶ
ಬನಹಟ್ಟಿ: ಇಲ್ಲಿನ ಕಾಡಸಿದ್ದೇಶ್ವರ ದೇಗುಲದ ಆವರಣದಲ್ಲಿ ಸಭೆ ನಡೆಯಿತು. ರಾಜ್ಯ ನೇಕಾರ ಸೇವಾ ಸಂಘಟನೆ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಸರ್ಕಾರ ನೇಕಾರರಿಗೆ ಕಾರ್ಮಿಕ ಸೌಲಭ್ಯಗಳನ್ನು ತಕ್ಷಣ ನೀಡಬೇಕು. ನೇಕಾರರು ಬಾಕಿ ವಿದ್ಯುತ್ ಬಿಲ್ ಪಾವತಿಸಬಾರದು. ಬಾಕಿ ಬಿಲ್ ಸರ್ಕಾರವೇ ಭರಿಸಬೇಕು ಮತ್ತು ಜವಳಿ ಅಭಿವೃದ್ಧಿಗೆ ಕನಿಷ್ಠ ₹೧,೫೦೦ ಕೋಟಿ ಮೊತ್ತದ ಅನುದಾನ ನೀಡಿ ನೇಕಾರಿಕೆ ಬಲಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.