ಸಾರಾಂಶ
ಎಸ್ಐಟಿ ಈ ಕುರಿತು ಸಹಾ ತನಿಖೆ ನಡೆಸಬೇಕು. ಈ ಕ್ಷೇತ್ರ ಹಲವಾರು ದಶಕಗಳಿಂದ ಸೇವಾ ಕಾರ್ಯ ಮಾಡುತ್ತಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆ ಅವರಿಗೆ ಕೇಂದ್ರ ಸರ್ಕಾರ ಅನೇಕ ಪುರಸ್ಕಾರ ನೀಡಿದೆ.
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಧರ್ಮಸ್ಥಳದಲ್ಲಿನ ಸರಣಿ ಹತ್ಯೆಗಳ ಬಗ್ಗೆ ಸರ್ಕಾರ ಎಸ್ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಈ ಕ್ಷೇತ್ರದ ಬಗೆಗಿನ ಆರೋಪ ಕುರಿತು ಶಂಕೆಗಳು ವ್ಯಕ್ತವಾಗಿದ್ದು, ದೂರುದಾರ ಅನಾಮಧೇಯ ವ್ಯಕ್ತಿ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ವಿಸ್ತೃತ ತನಿಖೆ ನಡೆಯಬೇಕೆಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಸರ್ಕಾರಕ್ಕೆ ಮನವಿ ಮಾಡಿದರು.
ಸೋಮವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಎಸ್ಐಟಿ ಈ ಕುರಿತು ಸಹಾ ತನಿಖೆ ನಡೆಸಬೇಕು. ಈ ಕ್ಷೇತ್ರ ಹಲವಾರು ದಶಕಗಳಿಂದ ಸೇವಾ ಕಾರ್ಯ ಮಾಡುತ್ತಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆ ಅವರಿಗೆ ಕೇಂದ್ರ ಸರ್ಕಾರ ಅನೇಕ ಪುರಸ್ಕಾರ ನೀಡಿದೆ. ಹೀಗಾಗಿ ಎಸ್ಐಟಿ ಸಮಗ್ರ ತನಿಖೆ ನಡೆಸಿ ತನಿಖಾ ವರದಿ ನೀಡುವವರೆಗೂ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವಿನಾಕಾರಣ ಆರೋಪ ಮಾಡುವುದು ನಿಲ್ಲಬೇಕು ಎಂದರು. ಭಕ್ತಿ ಭಾವಗಳಿಂದ ಕೂಡಿರುವ ಕ್ಷೇತ್ರವಾದ ಧರ್ಮಸ್ಥಳದ ಪಾವಿತ್ರ್ಯತೆ ಉಳಿಯಬೇಕು ಸರ್ಕಾರ ಸಹಾ ಶೀಘ್ರ ವರದಿ ಪಡೆದು ಸತ್ಯಾಂಶವನ್ನು ಜನರ ಮುಂದಿಡಬೇಕೆAದು ಕೋರಿದರು. ಮುಖಂಡರಾದ ಬಿ.ಪಿ. ಬೋರೇಗೌಡ, ಎಸ್.ಎನ್. ಪದ್ಮಪ್ರಸಾದ್, ಬಿ.ವಿ. ಬಸವರಜು, ಕೆ. ರಮೇಶ್ ಇದ್ದರು.