ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ವಿಚಾರದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಸರ್ಕಾರಗಳಿಗೆ ತಮ್ಮ ಶಕ್ತಿ ತೋರಿಸಬೇಕೆಂದು ರೈತಸೇನೆ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಮಂಗಳವಾರ ಪಟ್ಟಣದ ರೈತ ಹೋರಾಟದಲ್ಲಿ ವೀರಮರಣ ಹೊಂದಿದ ಈರಪ್ಪ ಕಡ್ಲಿಕೊಪ್ಪ ಅವರ 46ನೇ ವರ್ಷದ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಬಂಡಾಯ ನೆಲ ನರಗುಂದದಲ್ಲಿ ಕಳೆದ 12 ವರ್ಷಗಳಿಂದ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಹೋರಾಟ ಮಾಡಿದರೂ ಸರ್ಕಾರಗಳು ರೈತರಲ್ಲಿ ಒಡಕು ಮೂಡಿಸಿ ತಮ್ಮ ಅಧಿಕಾರದ ಸ್ವಾರ್ಥಕ್ಕಾಗಿ ಯೋಜನೆ ಜಾರಿ ಮಾಡುತ್ತಿಲ್ಲ ಎಂದರು.

ಶಿವಪ್ಪ ಹೊರಕೇರಿ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ನ್ಯಾಯವಾದಿ ರಮೇಶ ನಾಯ್ಕರ, ಹನುಮಂತ ಮಡಿವಾಳರ, ತಿಪ್ಪಣ್ಣ ಮೇಟಿ, ಅಶೋಕ ಸಾತಣ್ಣವರ, ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ಶರಣಗೌಡ ಪಾಟೀಲ, ಅರ್ಜುನ ಮಾನೆ, ಹೇಮಕ್ಕ ಘಾಳಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಹನುಮಂತ ಸರನಾಯ್ಕರ, ವಾಸು ಚವಾಣ, ಯಲ್ಲಪ್ಪ ಚಲವನ್ಣವರ, ಚನ್ನಬಸಪ್ಪ ಆಯಿಟ್ಟಿ, ವಿಜಯಕುಮಾರ ಹುಗಾರ ಇದ್ದರು.ರಾಜಕಾರಣಿಗಳ ಹಿಂದೆ ಹೋದರೆ ಯೋಜನೆ ಜಾರಿಯಾಗಲ್ಲ

ನರಗುಂದ: ರಾಜಕಾರಣಿಗಳಿಂದ ಮಹದಾಯಿ ಯೋಜನೆ ಜಾರಿಯಾಗಲ್ಲ. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯೋಜನೆ ಜಾರಿಯಾಗುವುದೆಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ ಹೇಳಿದರು.ಮಂಗಳವಾರ ಪಟ್ಟಣದ ರೈತರ ಹೋರಾಟದಲ್ಲಿ ವೀರಮರಣ ಹೊಂದಿದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೆಸರು ಹೇಳಿಕೊಂಡು ವಿವಿಧ ಪಕ್ಷಗಳ ರಾಜಕಾರಣಿಗಳು ಅಧಿಕಾರಿ ಅನುಭವಿಸಿ ನಂತರ ಈಗ ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ತರುತ್ತಿದ್ದಾರೆ ಎಂದರು.ಈರಪ್ಪ ಕಡ್ಲಿಕೊಪ್ಪ ಅವರ ರೈತ ಸ್ಮಾರಕ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹2.60 ಲಕ್ಷ ದೇಣಿಗೆ ನೀಡುತ್ತೇನೆ ಎಂದರು.ಕೇಂದ್ರ ಕಳಸಾ ಬಂಡೂರಿ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರಡ್ಡಿ, ಅಣ್ಣಪ್ಪಗೌಡ ಪಾಟೀಲ, ಶಿವಾನಂದ ಸುರಕೋಡ, ಪಡೆಯಪ್ಪ ಕೊಳ್ಳಿ, ಅನೀಲ ಕಡ್ಲಿಕೊಪ್ಪ, ಡಾ. ಸಂಗಮೇಶ ಕೊಳ್ಳಿಯವರ ಅಭಿಮಾನ ಬಳಗದ ಪದಾಧಿಕಾರಿಗಳು ಇದ್ದರು.