ಬಡವರಿಗೆ ಸರ್ಕಾರದಿಂದ 2.30 ಲಕ್ಷ ಮನೆ ನಿರ್ಮಾಣ: ಜಮೀರ್ ಅಹಮ್ಮದ್ ಖಾನ್

| Published : Jul 23 2025, 04:10 AM IST

ಬಡವರಿಗೆ ಸರ್ಕಾರದಿಂದ 2.30 ಲಕ್ಷ ಮನೆ ನಿರ್ಮಾಣ: ಜಮೀರ್ ಅಹಮ್ಮದ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ 2026ರ ಅಂತ್ಯದೊಳಗೆ 2.30 ಲಕ್ಷ ಮನೆಯನ್ನು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಕಳೆದ ಬಾರಿಯ ಬಜೆಟ್‌ನಲ್ಲಿ ಪ್ರಾಥಮಿಕವಾಗಿ 500 ಕೋಟಿ ಬಿಡುಗಡೆ ಮಾಡಿದ್ದು ಹಂತವಾಗಿ ರಾಜ್ಯ ಸರ್ಕಾರದಿಂದ 2.30 ಲಕ್ಷ ಮನೆಯನ್ನು ‌ನೀಡುವುದಾಗುವುದು ಎಂದರು.

ಕನ್ನಡಪ್ರಭ ವಾರ್ತೆ ನೆಲಮಂಗಲ

ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಸುಸಜ್ಜಿತ ಬಹು ಅಂತಸ್ತಿನ 2.30 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು. ‌ತಾಲೂಕಿನ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೇರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ ಸ್ಲಾಮ್ ಬೋರ್ಡ್‌ಗೆ 1,80 ಲಕ್ಷ ಮನೆ ಹಾಗೂ ರಾಜೀವ್ ಗಾಂಧಿ ಯೋಜನೆಯಡಿ 47 ಸಾವಿರ ಮನೆ ಒಟ್ಟಾರೆ 2.30 ಲಕ್ಷ ಮನೆ ಅನುಮೋದನೆ ಮಾಡಿದರು. ಆನಂತರ ಅಧಿಕಾರಕ್ಕೆ ಬಂದು ಬಿಜೆಪಿ ಸರ್ಕಾರ ಒಂದು ಮನೆಯನ್ನು ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರ ಮನೆ ನಿರ್ಮಾಣ ಬಗ್ಗೆ ಸರ್ಕಾರ ಗಮನಕ್ಕೆ ತರಲಾಗಿತ್ತು. ಮುಂದಿನ 2026ರ ಅಂತ್ಯದೊಳಗೆ 2.30 ಲಕ್ಷ ಮನೆಯನ್ನು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಕಳೆದ ಬಾರಿಯ ಬಜೆಟ್‌ನಲ್ಲಿ ಪ್ರಾಥಮಿಕವಾಗಿ 500 ಕೋಟಿ ಬಿಡುಗಡೆ ಮಾಡಿದ್ದು ಹಂತವಾಗಿ ರಾಜ್ಯ ಸರ್ಕಾರದಿಂದ 2.30 ಲಕ್ಷ ಮನೆಯನ್ನು ‌ನೀಡುವುದಾಗುವುದು ಎಂದರು. ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ:

ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಂಡ ಸರ್ಕಾರವಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಯನ್ನು ಜಾರಿಗೊಳಿಸಿ ಜನರು ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿದೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಅಭಿವೃದ್ಧಿ ಯೋಜನೆಗಳನ್ನು ತೋರಿಸಿಕೊಂಡು ರಾಜಕೀಯ ಮಾಡುತ್ತಿದ್ದೇವೆ. ಅದರೆ ಬಿಜೆಪಿ ಪಕ್ಷ ಹಿಂದೂ ಮುಸಲ್ಮಾನರು ಎಂದು ವಿಂಗಡಿಸಿ ರಾಜಕೀಯ ಮಾಡುತ್ತಿದ್ದಾರೆ. ಗ್ಯಾರಂಟಿಯನ್ನು ನೀಡಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಟೀಕೆ ಮಾಡಿದ್ದ ವಿರೋಧ ಪಕ್ಷಕ್ಕೆ ಕಳೆದ 2.5 ವರ್ಷದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಟೀಕೆ ಪ್ರತ್ಯುತ್ತರ ನೀಡಲಾಗಿದೆ ಸಚಿವ ಜಮೀರ್ ಅಹಮ್ಮದ್ ‌ಖಾನ್ ಎಂದರು.ನಾನು ಮೊದಲು ಹಿಂದೂಸ್ಥಾನಿ ನಂತರ ಕನ್ನಡಿಗ ಅಮೇಲೆ ಮುಸಲ್ಮಾನ್. ನಮ್ಮ ತಾಯಿ ತವರೂರು ನೆಲಮಂಗಲ ತಾಲೂಕಿನ ಗೋವಿಂದಪುರವಾಗಿದ್ದು, ನನಗೂ ನೆಲಮಂಗಲಕ್ಕೂ ಅವಿನಾಭಾವ ಸಂಬಂಧವಿದೆ. ಈ ಭಾಗದಲ್ಲಿ ನಾಲ್ಕೈದು ದಶಕದಿಂದ ಅಭಿವೃದ್ಧಿ ಕಾಣದ ಕ್ಷೇತ್ರಕ್ಕೆ ಹೊಸ ಚೈತನ್ಯದೊಂದಿಗೆ ಅಭಿವೃದ್ಧಿ ಮಾಡುತ್ತಿರುವ ಶಾಸಕ ಎನ್.ಶ್ರೀನಿವಾಸ್ ಕಾರ್ಯ ಶ್ಲಾಘನೀಯವಾದದ್ದು ಎಂದರು.ಶಾದಿ‌ ಮಹಲ್ ಹಾಗೂ 200ಮನೆ ನಿರ್ಮಾಣ:

ಸೊಂಡೇಕೊಪ್ಪ ಮುಖ್ಯ ರಸ್ತೆಯ ಬೈರೇಗೌಡನಹಳ್ಳಿ ಬಳಿ ಸುಮಾರು 2 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಶಾದಿ ಮಹಲ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಆರಂಭಿಕವಾಗಿ 1 ಕೋಟಿ ಅನುದಾನ ನೀಡಿದ್ದು ಬಹುಕೋಟಿ ವೆಚ್ಚದಲ್ಲಿ ರಾಜ್ಯದಲ್ಲೇ ಬೃಹತ್ ಗಾತ್ರದ ಸುಸಜ್ಜಿತ ಶಾದಿ‌ ಮಹಲ್ ನಿರ್ಮಾಣ ಮಾಡಲಾಗುವುದು. ಜತೆಗೆ ಕಳೆದ 2004ರಲ್ಲಿ ನಗರದ ಅಂಬೇಡ್ಕರ್‌ ನಗರದಲ್ಲಿ ಕಳಪೆ ಮಟ್ಟದ ಮನೆ ನಿರ್ಮಾಣ ಮಾಡಿದ್ದಾರೆ. ಅದ್ದರಿಂದ ಎಲ್ಲ ಮನೆಯನ್ನು ತೆರವುಗೊಳಿಸಿ ಹೊಸದಾಗಿ ಡಿಪಿಆರ್ ರಚನೆ ಮಾಡಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಸುಸಜ್ಜಿತ 3 ಅಂತಸ್ತಿನ ಸುಮಾರು 200 ಮನೆಯನ್ನು ನಿರ್ಮಾಣ ಮಾಡಲಾಗುವುದಾಗಿ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಸಾಕಷ್ಟು ಬಾರಿ ಹೇಳಲಾಗಿತ್ತು. ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇ.ಡಿ ಅವರಿಗೆ ಛೀಮಾರಿ ಹಾಕಿದೆ. ಸತ್ಯಕ್ಕೆ ಕೋರ್ಟ್ ನ್ಯಾಯ ನೀಡಿದೆ ಎಂದರು. ಸೆಪ್ಟೆಂಬರ್ ಬಳಿಕ ಯಾವುದೇ ಕ್ರಾಂತಿಯಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪಕ್ಷವಾಗಿದೆ. ಪಕ್ಷದ ವರಿಷ್ಠರು ಹಾಕಿದ ಗೆರೆಯನ್ನು ನಾವು ಯಾರು ದಾಟುವುದಿಲ್ಲ. ಸಿಎಂ ಖರ್ಚಿ ಖಾಲಿಇಲ್ಲ. ಪಕ್ಷದ ಹೈ ಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಸಚಿವ ಜಮೀರ್ ಅಹಮ್ಮದ್ ‌ಖಾನ್ ತಿಳಿಸಿದರು. ಶಾಸಕ‌ ಎನ್.ಶ್ರೀನಿವಾಸ್ ಮಾತನಾಡಿ ಜಮೀರ್ ಅಣ್ಣ ಕೇವಲ ಅಲ್ಪಸಂಖ್ಯಾತರ ನಾಯಕ ಮಾತ್ರವಲ್ಲ. ರಾಜ್ಯ ಸರ್ವ ಎಲ್ಲಾ ವರ್ಗದ ಜನರ ನಾಯಕರಾಗುದ್ದಾರೆ. ರಾಜ್ಯದಲ್ಲಿ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು ತಾಲೂಕಿಗೆ ಆರಂಭಿಕವಾಗಿ 5 ಕೋಟಿ ನಂತರ 25 ಕೋಟಿ ಒಟ್ಟಾರೆ 30 ಕೋಟಿ ಅನುದಾನವನ್ನು ನೀಡದ್ದ ಸಚಿವರಿಗೆ ಧನ್ಯವಾದಗಳು ಎಂದರು. ಅದ್ಧೂರಿ ಸ್ವಾಗತ:

ತಾಲೂಕಿನ ಇಸ್ಲಾಂಪುರ ಪುರ ಗ್ರಾಮಕ್ಕೆ ಮೊದಲ ಬಾರಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಭೇಟಿ ನೀಡಿದ್ದ ಹಿನ್ನೆಲೆ ತಳಿರು ತೋರಣದಿಂದ ಸಿಂಗರಿಸಿ ಬಳಿ ಸೇಬು ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸಚಿವರನ್ನು ಸ್ವಾಗತಿಸಿದರು.ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ನೆ.ಯೋ.ಪ್ರಾಧಿಕಾರ ಅದ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅದ್ಯಕ್ಷ ಪದ್ಮನಾಬ್‌ಪ್ರಸಾದ್, ನಿಕಟಪೂರ್ವ ಅದ್ಯಕ್ಷೆ ಪೂರ್ಣಿಮಾಸುಗ್ಗರಾಜು, ಸದಸ್ಯ ಸಿ.ಪ್ರದೀಪ್, ಗಂಗಾಧರ್‌ರಾವ್, ನರಸಿಂಹಮೂರ್ತಿ, ಭಾರತಿಬಾಯಿ, ಅಂಜನಮೂರ್ತಿ, ಪುಷ್ಪಲತಾ ಮಾರೇಗೌಡ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂಪಾಷಾ ಮತ್ತಿತರರು ಉಪಸ್ಥಿತರಿದ್ದರು. ‌ ಪೊಟೊ-22ಕೆಎನ್‌ಎಲ್‌ಎಮ್‌ 1-ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೇರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿದರು. ಎಂಎಲ್ಸಿ ಎಸ್.ರವಿ, ಶಾಸಕ ಎನ್.ಶ್ರೀನಿವಾಸ್ ಇದ್ದರು.