ಸಾರಾಂಶ
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪದವಿಗೆ ಈಗಲೇ ಕಿತ್ತಾಟ ಶುರುವಾಗಿದೆ. ಅಲ್ಲಿ ಬಹಳ ಗೊಂದಲಗಳಿವೆ. ಕಾಂಗ್ರೆಸ್ ಚುನಾವಣೆ ನಂತರ ಭೂತಕಾಲದ ಪಕ್ಷವಾಗಿ ಇತಿಹಾಸ ಸೇರಲಿದೆ.
ಹುಬ್ಬಳ್ಳಿ:ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ಅದು ಬದಲಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಮ್ಮಿನಭಾವಿ ಗ್ರಾಮದ ಮುಖಂಡರನ್ನು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ, ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಅದನ್ನು ಕಳೆದುಕೊಂಡು ಎರಡು ಅಂಕಿಗೆ ಇಳಿಯಲಿದೆ ಎಂದರು.ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪದವಿಗೆ ಈಗಲೇ ಕಿತ್ತಾಟ ಶುರುವಾಗಿದೆ. ಅಲ್ಲಿ ಬಹಳ ಗೊಂದಲಗಳಿವೆ. ಕಾಂಗ್ರೆಸ್ ಚುನಾವಣೆ ನಂತರ ಭೂತಕಾಲದ ಪಕ್ಷವಾಗಿ ಇತಿಹಾಸ ಸೇರಲಿದೆ. ಬಿಜೆಪಿ ವರ್ತಮಾನದ ಹಾಗೂ ಭವಿಷ್ಯದ ಪಕ್ಷವಾಗಿದೆ ಎಂದು ಜೋಶಿ ಹೇಳಿದರು.ಅಮ್ಮಿನಭಾವಿ ಗ್ರಾಮದ ಮುಖಂಡರಾದ ಟಿ.ಎಸ್. ಪಾಟೀಲ, ಮುತ್ತಣ್ಣ ಬಳ್ಳಾರಿ, ಸುನೀಲ ಗುಡಿ, ಸಂತೋಷ ಕಮತರ, ಜಗನ್ನಾಥ ಕುಸುಗಲ್, ಸುರೇಂದ್ರ ದೇಸಾಯಿ ಪಕ್ಷ ಸೇರಿದರು. ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಶಂಕರ ಮುಗದ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.