ಬೇರೆ ಎಲ್ಲಾ ದಿನಾಚರಣೆಗಳ ರೀತಿ ರೈತರ ದಿನಾಚರಣೆಯನ್ನು ಸರ್ಕಾರದಿಂದ ಮಾಡಬೇಕು ಎಂದು ರೈತ ಸಂಘದ ವತಿಯಿಂದ ತಹಸೀಲ್ದಾರ್ ಗೆ ಮನವಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕುಣಿಗಲ್ ಬೇರೆ ಎಲ್ಲಾ ದಿನಾಚರಣೆಗಳ ರೀತಿ ರೈತರ ದಿನಾಚರಣೆಯನ್ನು ಸರ್ಕಾರದಿಂದ ಮಾಡಬೇಕು ಎಂದು ರೈತ ಸಂಘದ ವತಿಯಿಂದ ತಹಸೀಲ್ದಾರ್ ಗೆ ಮನವಿ ನೀಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಪರ್ವ ಸಂಘಟನೆಯಿಂದ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ಅರುಣ್ ಕುಮಾರ್, ಪ್ರತಿದಿನ ಕಷ್ಟದಿಂದ ಆಹಾರ ಉತ್ಪಾದನೆ ಮಾಡಿ ದೇಶವನ್ನು ಸಾಕುತ್ತಿರುವ ರೈತನಿಗೆ ಯಾವುದೇ ರಕ್ಷಣೆ ಭದ್ರತೆ ಇಲ್ಲದಂತಾಗಿದೆ. ಅಂತಹ ರೈತನಿಗೆ ಮೂಲಭೂತ ಸೌಕರ್ಯ ನೀರಿನ ವ್ಯವಸ್ಥೆ ಸಾಲ ಸೌಲಭ್ಯ ಉತ್ತಮ ಬೀಜ ಕೀಟ ನಿಯಂತ್ರಣ ಹಾಗೂ ಮಾರುಕಟ್ಟೆ ಅವಶ್ಯಕತೆ ಇರುವುದರಿಂದ ಸರ್ಕಾರ ಅವುಗಳನ್ನು ಒದಗಿಸಲು ಸಾಧ್ಯವಾಗದಂತಹ ಆಡಳಿತ ವ್ಯವಸ್ಥೆ ಇದೆ.
ಕೇವಲ ಒಂದು ದಿನವಾದರೂ ಕೂಡ ರೈತನನ್ನು ಸ್ಮರಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ ಹಾಗಾಗಿ ಪ್ರತಿ ವರ್ಷಕ್ಕೆ ಒಂದು ಬಾರಿ ಸರ್ಕಾರದಿಂದ ರೈತ ದಿನಾಚರಣೆಯನ್ನು ಆಚರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕುಮಾರ್ , ಜಿಲ್ಲಾಧ್ಯಕ್ಷ ಬೋರಲಿಂಗ, ಜಿಲ್ಲಾ ಉಪಾಧ್ಯಕ್ಷ ಮುನಿಯಪ್ಪ, ರಾಜ್ಯ ಉಪಾಧ್ಯಕ್ಷ ವಿಜಿ ಗೌಡ, ಇರ್ಫಾನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್, ಸುನಿಲ್ ಕುಮಾರ್ , ಉಮಾಶಂಕರ್, ತಾಲೂಕು ಅಧ್ಯಕ್ಷ ಪುರುಷೋತ್ತಮ ಸೇರಿದಂತೆ ಹಲವಾರು ರೈತರು ಇದ್ದರು.