ಈ ಬಾರಿಯ ಅಧಿವೇಶನದಲ್ಲಿ ಕಲಾಪದ ಪ್ರಶ್ನೋತ್ತರದಲ್ಲಿ ತಾಲೂಕಿನ ಏತ ನೀರಾವರಿ ಯೋಜನೆಗಳಾದ ನುಗ್ಗೇಹಳ್ಳಿ ಹಿರೀಸಾವೆ ಬಾಗೂರು - ನವಿಲೆ ಯೋಜನೆ ಸೇರಿದಂತೆ ಇತರೆ ನೀರಾವರಿ ಯೋಜನೆಗಳ ನಾಲೆಗಳು ನವೀಕರಣಗೊಳ್ಳದೆ ಕೆರೆಗಳಿಗೆ ನೀರು ಹರಿಸಲು ಸಮಸ್ಯೆಯಾಗುತ್ತದೆ. ಇದರಿಂದ ಕೆರೆಗಳನ್ನು ಬೇಗ ತುಂಬಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಿಗೆ ನಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ತಾಲೂಕಿನ ಏತ ನೀರಾವರಿ ಯೋಜನೆಗಳಾದ ನುಗ್ಗೇಹಳ್ಳಿ ಹಿರೀಸಾವೆ ಬಾಗೂರು - ನವಿಲೆ ನಾಲೆಗಳ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಹೋಬಳಿ ಕೇಂದ್ರದ ಪುರಾಣ ಪ್ರಸಿದ್ಧ ಹಿರೆಕೆರೆ ಮೂರು ವರ್ಷಗಳ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಸಂಪೂರ್ಣ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕೆರೆಗೆ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಈ ಬಾರಿಯ ಅಧಿವೇಶನದಲ್ಲಿ ಕಲಾಪದ ಪ್ರಶ್ನೋತ್ತರದಲ್ಲಿ ತಾಲೂಕಿನ ಏತ ನೀರಾವರಿ ಯೋಜನೆಗಳಾದ ನುಗ್ಗೇಹಳ್ಳಿ ಹಿರೀಸಾವೆ ಬಾಗೂರು - ನವಿಲೆ ಯೋಜನೆ ಸೇರಿದಂತೆ ಇತರೆ ನೀರಾವರಿ ಯೋಜನೆಗಳ ನಾಲೆಗಳು ನವೀಕರಣಗೊಳ್ಳದೆ ಕೆರೆಗಳಿಗೆ ನೀರು ಹರಿಸಲು ಸಮಸ್ಯೆಯಾಗುತ್ತದೆ. ಇದರಿಂದ ಕೆರೆಗಳನ್ನು ಬೇಗ ತುಂಬಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಿಗೆ ನಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ. ಈ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.45 ವರ್ಷಗಳ ನಂತರ ರೈತರ ಕನಸು ನನಸು:
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಕೆರೆ ಸೇರಿದಂತೆ ಈ ಭಾಗದಲ್ಲಿ ನೀರಾವರಿ ಯೋಜನೆಗಳಿಲ್ಲದೆ ಸುಮಾರು 45 ವರ್ಷಗಳ ಕಾಲ ಕೆರೆಗಳು ತುಂಬಿರಲಿಲ್ಲ. ಈ ಭಾಗದ ಕೆಲವು ಮುಖಂಡರು ಹಾಗೂ ನಾನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಿದರು. ಇಂದು ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಂಡು ಕಳೆದ 6 ವರ್ಷಗಳಿಂದ ಯೋಜನೆಯ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಈ ಭಾಗದ ರೈತರ ಕನಸು 45 ವರ್ಷಗಳ ನಂತರ ನನಸಾಗಿದೆ ಎಂದರು.ಗ್ರಾಮದ ಚಂದ್ರಮೌಳೇಶ್ವರ ದೇವಾಲಯದ ಹಿಂಬಾಗದಲ್ಲಿರುವ ಸಮುದಾಯ ಭವನ ನವೀಕರಣಕ್ಕೆ ಈಗಾಗಲೇ 20 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಗಂಗಮತಸ್ಥ ಸಮಾಜ ವಿಶ್ವಕರ್ಮ ಸಮಾಜ ಸೇರಿದಂತೆ ಇನ್ನಿತರ ಸಮಾಜದ ಸಂಘಗಳಿಗೆ ಹೋಬಳಿ ಕೇಂದ್ರದಲ್ಲಿ ನಿವೇಶನ ನೀಡಲು ಜಾಗ ಕಾಯ್ದಿರಿಸಿದ್ದು, ಸದ್ಯದಲ್ಲೇ ಕಂದಾಯ ಇಲಾಖೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಘಗಳಿಗೆ ನಿವೇಶನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ನುಗ್ಗೇಹಳ್ಳಿ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯದ 224 ಶಾಸಕರ ಪೈಕಿ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣರವರು ತಾಲೂಕಿನ ಸಮಗ್ರ ನೀರಾವರಿ ಅನುಷ್ಠಾನಕ್ಕೆ ಹೆಚ್ಚಿನ ಪರಿಶ್ರಮಪಟ್ಟಿದ್ದಾರೆ. ಅವರ ಹೆಚ್ಚಿನ ಪರಿಶ್ರಮದಿಂದಲೇ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣ ಪೂರ್ಣಗೊಂಡು ಕಳೆದ ಅನೇಕ ಈ ಭಾಗದ ಕೆರೆಗಳು ತುಂಬುತ್ತಿದೆ ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಗಂಗೆಪೂಜೆ ಬಾಗಿನ ಅರ್ಪಣೆ ಪೂಜಾ ಕಾರ್ಯಕ್ರಮ ನೆರವೇರಿತು. ಶಾಸಕ ಸಿ ಎನ್ ಬಾಲಕೃಷ್ಣ ಹಾಗೂ ಮಹೇಶ್ವರ ಸ್ವಾಮೀಜಿ ಗೌರಿ ಕಲ್ಲಿನ ಬಳಿ ತೆಪ್ಪದಲ್ಲಿ ತೆರಳಿ ಕೆರೆಗೆ ಬಾಗಿನ ಅರ್ಪಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎನ್ ಆರ್ ನಟರಾಜ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಮಹಾದೇವಮ್ಮ ಶಂಕರ್, ಮೊಹಮ್ಮದ್ ಜಾವಿದ್, ಪಟೇಲ್ ಕುಮಾರ್, ಎನ್ ಡಿ ಶಂಕರ್, ಮುರಳಿ, ಹುಲಿಕೆರೆ ಸಂಪತ್ ಕುಮಾರ್, ವೀರಶೈವ ಮುಖಂಡ ಎನ್ಎಸ್ ಗಿರೀಶ್, ಕೃಪಾ ಶಂಕರ್, ಹೋಟೆಲ್ ರಾಜಣ್ಣ, ಹೊನ್ನೇಗೌಡ, ಯಲ್ಲಪ್ಪ , ಎನ್ಎಸ್ ಮಂಜುನಾಥ್, ಎನ್ ಆರ್ ಶಿವಕುಮಾರ್, ವಿಕ್ಟರ್, ಪುಟ್ಟಸ್ವಾಮಿ, ಎಂ ಎಸ್ ಸುರೇಶ್, ಹೆಬ್ಬಾಳ್ ರವಿ, ಮಧು, ಮೊದಲಗೆರೆ ದಿಲೀಪ್, ನಂದಿನಿ ಬೂತ್ ಮಂಜುನಾಥ್, ದಿನೇಶ್ ಬಾಬು, ಕುಳ್ಳೇಗೌಡ, ಬೆಟ್ಟಯ್ಯ ಸೇರಿದಂತೆ ಇತರರು ಹಾಜರಿದ್ದರು.