ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ನಮ್ಮ ಚಿಕ್ಕಬಳ್ಳಾಪುರವು ಮೊದಲೇ ಬಯಲು ಸೀಮೆಯ ಬರ ಪೀಡಿತ ಜಿಲ್ಲೆಯಾಗಿದ್ದು, ಇಲ್ಲಿ ವ್ಯವಸಾಯ ಮತ್ತು ಕುಡಿಯುವ ನೀರಿಗೆ ಹಾಹಾಕಾರವಿದೆ. ಈ ವರ್ಷದಲ್ಲಿ ಮಳೆಯಾಗದೆ ಇನ್ನೂ ಬಿತ್ತನೆಯಾಗಿಲ್ಲ, ಸರ್ಕಾರ ಇಲ್ಲಿನ ರೈತರನ್ನು , ಕೃಷಿ ಕೂಲಿ ಕಾರ್ಮಿಕರನ್ನು ಉಳಿಸಲು ಅವರಿಗೆ ಉದ್ಯೋಗಗಳನ್ನು ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಎಷ್ಟು ಒತ್ತು ನೀಡಬೇಕು ಎಂಬುದಕ್ಕೆ ಆರೋಗ್ಯ ಶಿಬಿರಗಳಿಗೆ ಜನತೆ ಆಗಮಿಸುತ್ತಿರುವುದೇ ಸಾಕ್ಷಿಯಾಗಿದೆ. ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಸಹ ನಾವು ಇನ್ನೂ ಹಿಂದುಳಿದಿರುವುದು ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೇ. ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವಲ್ಲಿ ವಿಫಲವಾಗಿವೆ ಎಂದು ಭಗತ್ ಸಿಂಗ್ ಚಾರಿಟಬಲ್ ಅಧ್ಯಕ್ಷ ಸಂದೀಪ.ಬಿ.ರೆಡ್ಡಿ ತಿಳಿಸಿದರು.

ತಾಲೂಕಿನ ಪೆರೇಸಂದ್ರ ಗ್ರಾಮದ ನಂಜುಂಡೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮತ್ತು ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ನೂರಾರು ಹಳ್ಳಿಗಳಿಂದ ಜನರು ಹತ್ತಾರು ಕಿಲೋಮೀಟರ್ ಗಳ ದೂರದಿಂದ ಬಂದಿದ್ದು, ಶಿಬಿರದಲ್ಲಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರೆ ತಮ್ಮ ಬದುಕಿನಲ್ಲಿ ಆಶಾಕಿರಣ ಮೂಡಬಹುದು ಎಂಬ ಭಾವನೆ ಅವರಲ್ಲಿ ಮೂಡುತ್ತಿದೆ. ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿರುವುದಕ್ಕೆ ಒಂದು ಕಡೆ ನನಗೆ ಸಂತಸವಾಗುತ್ತದೆ. ಆದರೆ ಇನ್ನೊಂದೆಡೆ ಸಮಾಜದ ಅವ್ಯವಸ್ಥೆಗೆ ಸರ್ಕಾರಗಳು ನಡೆದುಕೊಳ್ಳುತ್ತಿರುವ ರೀತಿಯಲ್ಲಿ ನನಗೆ ನೋವಿದೆ. ದೇಶವನ್ನು ಮತ್ತು ರಾಜ್ಯವನ್ನು ನಡೆಸುತ್ತಿರುವ ಸರ್ಕಾರಗಳು ಸಮಾಜದ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿರುವ ಅವ್ಯವಸ್ಥೆಯನ್ನು ಮನಗಂಡು ಇವುಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ನಮ್ಮ ಚಿಕ್ಕಬಳ್ಳಾಪುರವು ಮೊದಲೇ ಬಯಲು ಸೀಮೆಯ ಬರ ಪೀಡಿತ ಜಿಲ್ಲೆಯಾಗಿದ್ದು, ಇಲ್ಲಿ ವ್ಯವಸಾಯ ಮತ್ತು ಕುಡಿಯುವ ನೀರಿಗೆ ಹಾಹಾಕಾರವಿದೆ. ಈ ವರ್ಷದಲ್ಲಿ ಮಳೆಯಾಗದೆ ಇನ್ನೂ ಬಿತ್ತನೆಯಾಗಿಲ್ಲ, ಸರ್ಕಾರ ಇಲ್ಲಿನ ರೈತರನ್ನು , ಕೃಷಿ ಕೂಲಿ ಕಾರ್ಮಿಕರನ್ನು ಉಳಿಸಲು ಅವರಿಗೆ ಉದ್ಯೋಗಗಳನ್ನು ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಉಚಿತ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾದವರಲ್ಲಿ ಹೆಚ್ಚಿನ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳ ಅಗತ್ಯ ವಿರುವವರಿಗೆ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ಯಲ್ಲಿ ನೀಡಲು ದಿನಾಂಕಗಳನ್ನು ನೀಡಿದರು. ಉಳಿದವರಿಗೆ ಉಚಿತವಾಗಿ ಔಷಧಿಗಳನ್ನು, ಕನ್ನಡಕಗಳನ್ನು ಮತ್ತು ಅವಶ್ಯಕತೆ ಇರುವ ವೃದ್ಧರಿಗೆ ನಡೆದಾಡಲು ಊರುಗೋಲುಗಳನ್ನು ಉಚಿತವಾಗಿ ನೀಡಲಾಯಿತು.