ಸಂಧ್ಯಾ ಸುರಕ್ಷೆ ಸಹಾಯಧನ ಸಿಗದೇ ಜನರ ಪರದಾಟ

| Published : May 22 2024, 12:51 AM IST

ಸಾರಾಂಶ

ವಯಸ್ಸಾದವರಿಗೆ ಸರ್ಕಾರದ ಸಂಧ್ಯಾ ಸುರಕ್ಷಾ ಸಹಾಯ ಧನ ತಲುಪಿಸುವಂತಹ ಕೆಲಸ ಮಾಡಬೇಕು, ಇಲ್ಲದಿದ್ದರೆ ಯೋಜನೆಯ ವಂಚಿತರಾಗಿರುವ ವಯಸ್ಕರ ಜೊತೆಗೂಡಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕಿನ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ

ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ

ರಾಜ್ಯ ಸರ್ಕಾರವು ಗ್ಯಾರೆಂಟಿ ಯೋಜನೆಯಡಿ ಎಲ್ಲರಿಗೂ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಜೀವನಕ್ಕೆ ದಾರಿಯಾಗಿರುವ 65 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಇನ್ನೂ ಸಂಧ್ಯಾ ಸುರಕ್ಷಾ ಸಹಾಯ ಧನ ಸಿಗದೇ ಪರದಾಡುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ಹೋಬಳಿ ಅಧ್ಯಕ್ಷ ಜವರನಾಯಕ ಹೇಳಿದ್ದಾರೆ.

ಗ್ರಾಮದ ನಾಡ ಕಚೇರಿಯಲ್ಲಿ ಆರ್.ಐ ಪ್ರಕಾಶ್ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿ, ಸರ್ಕಾರವು ನೀಡುವ ಸಂಧ್ಯಾ ಸುರಕ್ಷಾ ಸಹಾಯ ಧನವು ಸುಮಾರು ಸಾವಿರಕ್ಕೂ ಅಧಿಕ ವಯಸ್ಕರಿಗೆ ಒಂದು ವರ್ಷದಿಂದ ಪಿಂಚಣಿ ಸಹಾಯಧನವು ಸಿಗದೇ ಪರದಾಡುತ್ತಿದ್ದಾರೆ, ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೂ ತಂದರು ಯಾವುದೇ ಪ್ರಯೋಜನ ಇಲ್ಲ ಎಂದು ದೂರಿದ್ದಾರೆ.

ವಯಸ್ಸಾದವರಿಗೆ ಸರ್ಕಾರದ ಸಂಧ್ಯಾ ಸುರಕ್ಷಾ ಸಹಾಯ ಧನ ತಲುಪಿಸುವಂತಹ ಕೆಲಸ ಮಾಡಬೇಕು, ಇಲ್ಲದಿದ್ದರೆ ಯೋಜನೆಯ ವಂಚಿತರಾಗಿರುವ ವಯಸ್ಕರ ಜೊತೆಗೂಡಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕಿನ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

ಗ್ರಾಮ ಲೆಕ್ಕಾಧಿಕಾರಿಯಾದ ನಿಂಗಯ್ಯ, ಜಯ ಕರ್ನಾಟಕ ಸಂಘಟನೆ ಸದಸ್ಯರಾದ, ಶಂಕರ್, ಮಂಜುನಾಥ್, ಮಹೇಶ್, ಮಂಜ ನಾಗರಾಜು ,ಕೆಂಚ, ಸುರೇಶ, ಮಾಪು, ಪ್ರಕಾಶ್ ಭಾಗವಹಿಸಿದ್ದರು.