ಭಾರತ ಸರ್ಕಾರದ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಮುಖ್ಯಸ್ಥರಾಗಿ ನ್ಯಾ. ದಿನೇಶ್ ಕುಮಾರ್

| Published : Apr 08 2024, 01:02 AM IST

ಭಾರತ ಸರ್ಕಾರದ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಮುಖ್ಯಸ್ಥರಾಗಿ ನ್ಯಾ. ದಿನೇಶ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು ಹಣಕಾಸು ಇಲಾಖೆ ವ್ಯಾಪ್ತಿಯಲ್ಲಿ ಬರುವ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮತ್ತು ವಿಮಾ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರ ( IRDAI) ಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಪರಮಾಧಿಕಾರ ಹೊಂದಿರುತ್ತದೆ.

ಕನ್ನಡಪ್ರಭ ವಾರ್ತೆ, ಉಡುಪಿ

ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಸಂಸ್ಥೆಯಾಗಿರುವ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯ ಮಂಡಳಿ (ಎಸ್.ಎ.ಟಿ.) ಮುಖ್ಯಸ್ಥರನ್ನಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದಿನೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ .

ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು ಹಣಕಾಸು ಇಲಾಖೆ ವ್ಯಾಪ್ತಿಯಲ್ಲಿ ಬರುವ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮತ್ತು ವಿಮಾ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರ ( IRDAI) ಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಪರಮಾಧಿಕಾರ ಹೊಂದಿರುತ್ತದೆ. ದಿನೇಶ್ ಕುಮಾರ್ ಅವರ ಅಧಿಕಾರಾವಧಿ ನಾಲ್ಕು ವರ್ಷಗಳಾಗಿರುತ್ತದೆ ಎಂದು ಸರ್ಕಾರಿ ಆದೇಶ ಪ್ರಕಟಣೆ ತಿಳಿಸಿದೆ.

ಇತ್ತೀಚೆಗಷ್ಟೇ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ವಯೋ ನಿವೃತ್ತಿ ಪಡೆದ ದಿನೇಶ್ ಕುಮಾರ್ ಅವರು ಸುದೀರ್ಘ ನ್ಯಾಯಾಂಗ ಅನುಭವ ಹೊಂದಿದ್ದು, ಧಾರ್ಮಿಕವಾಗಿಯೂ ಅನೇಕ ಮಠ ಸಂಸ್ಥಾನಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ .

ಪೇಜಾವರ ಶ್ರೀ ಹರ್ಷ : ನ್ಯಾ .‌ದಿನೇಶ್ ಕುಮಾರ್ ಅವರನ್ನು ಭಾರತ ಸರ್ಕಾರ ಈ ಉನ್ನತ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಶ್ರೀ ಪೇಜಾವರ ಶ್ರೀಗಳು ತುಂಬು ಸಂತಸ ವ್ಯಕ್ತಪಡಿಸಿದ್ದು ಉತ್ತಮ ನ್ಯಾಯಾಂಗ ಸೇವಾನುಭವ ಹೊಂದಿರುವ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ; ಶ್ರೀ ಕೃಷ್ಣನು ಅವರಿಗೆ ಶ್ರೇಯಸ್ಸನ್ನು ಕರುಣಿಸಲಿ ಎಂದು ತಿಳಿಸಿದ್ದಾರೆ.